ಮಧುಗಿರಿ: ಮನೆಯಿಂದ ಮತದಾನಕ್ಕೆ 535 ಹಿರಿಯ ನಾಗರಿಕರ ನೋಂದಣಿ

ಲೋಕಸಭಾ ಚುನಾವಣೆ ಪ್ರಯುಕ್ತ ಮಧುಗಿರಿ ಕ್ಷೇತ್ರ ವ್ಯಾಪ್ತಿಯಲ್ಲಿ ಏ.13ರಿಂದ 16ರವರೆಗೆ 85 ವರ್ಷ ಮೇಲ್ಪಟ್ಟ ಮತದಾರರು ಮನೆಯಿಂದಲೇ ಮತ ಹಾಕಲು ಅವಕಾಶ ಕಲ್ಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದರು.

Madhugiri Registration of 535 senior citizens for voting from home  snr

ಮಧುಗಿರಿ: ಲೋಕಸಭಾ ಚುನಾವಣೆ ಪ್ರಯುಕ್ತ ಮಧುಗಿರಿ ಕ್ಷೇತ್ರ ವ್ಯಾಪ್ತಿಯಲ್ಲಿ ಏ.13ರಿಂದ 16ರವರೆಗೆ 85 ವರ್ಷ ಮೇಲ್ಪಟ್ಟ ಮತದಾರರು ಮನೆಯಿಂದಲೇ ಮತ ಹಾಕಲು ಅವಕಾಶ ಕಲ್ಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದರು.

ಇಲ್ಲಿನ ತಹಸೀಲ್ದಾರ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರು ಮತದಾನದಿಂದ ದೂರ ಉಳಿಯಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಈ ಕ್ರಮಕ್ಕೆ ಮುಂದಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ 535 ಹಿರಿಯ ನಾಗರಿಕರು ಈ ರೀತಿ ಮತ ಚಲಾಯಿಸಲು ನೊಂದಣಿ ಮಾಡಿಕೊಂಡಿದ್ದು ಮತದಾನಕ್ಕೆ 6 ಪ್ರತ್ಯೇಕ ತಂಡಗಳನ್ನು ರಚಿಸಿದ್ದು ನೋಂದಾಯಿಸಿಕೊಂಡಿರುವ ಮತದಾರರ ಮನೆಗೆ ತೆರಳಿ ಮತದಾನ ಪ್ರಕ್ರಿಯೇ ಪ್ರಾಂರಭವಾಗಿದೆ ಎಂದರು.

ಚುನಾವಣೆ ಸಂದರ್ಭದಲ್ಲಿ ವಿವಿಧ ನಾಲ್ಕು ಪ್ರಕರಣಗಳಲ್ಲಿ 7,30,750,000 ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಮದ್ಯ ಮಾರಾಟದ 56 ಪ್ರಕರಣಗಳ ಪೈಕಿ 284 ಲೀಟರ್‌ ಮಧ್ಯ ವಶ ಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 5,40,807 ರು.ಗಳೆಂದು ಅಂದಾಜು ಮಾಡಲಾಗಿದೆ ಎಂದರು.

ಮೇವು ಬ್ಯಾಂಕ್‌ ಸ್ಥಾಪನೆ:

ತಾಲೂಕಿನ ಮಿಡಿಗೇಶಿಯಲ್ಲಿ ಏ.13ರ ಶನಿವಾರ ಮೇವು ಬ್ಯಾಂಕ್‌ ಸ್ಥಾಪಿಸಲಾಗುತ್ತಿದೆ. ರೈತರು ಪಶು ಸಂಗೋಪನಾ ಇಲಾಖೆಯಿಂದ ನೀಡುವ ಗುರುತಿನ ಚೀಟಿ ಪಡೆದು ಕೆಜಿ ಮೇವಿಗೆ 2 ರು.ಪಾವತಿಸಿ ಮೇವು ಪಡೆದುಕೊಳ್ಳಬೇಕಿದೆ ಎಂದು ಎಸಿ ಶಿವಪ್ಪ ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios