ಮಧುಗಿರಿ: ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಕಾರ್ಯಕರ್ತರ ಕಿಡಿ
ನಿಯಮನುಸಾರ ಸಭೆ ಕರೆಯದೇ ಕಾರ್ಯಕರ್ತರ ಅಭಿಪ್ರಾಯ ಕೇಳದೇ ವಯಸ್ಸಿನ ಮಾನದಂಡ ಉಲ್ಲಘಿಸಿ ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳಲಾಗಿದೆ.
ಪಾವಗಡ: ನಿಯಮನುಸಾರ ಸಭೆ ಕರೆಯದೇ ಕಾರ್ಯಕರ್ತರ ಅಭಿಪ್ರಾಯ ಕೇಳದೇ ವಯಸ್ಸಿನ ಮಾನದಂಡ ಉಲ್ಲಘಿಸಿ ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳಲಾಗಿದೆ. ಬೇರೆ ಪಕ್ಷದಿಂದ ಬಂದಿದ್ದ ಮಂಗಳವಾಡ ರಂಗಣ್ಣನ್ನು ತಾಲೂಕು ಬಿಜೆಪಿ ಅಧ್ಯಕ್ಷರೆಂದು ಘೋಷಿಸಿರುವ ಜಿಲ್ಲಾ ಘಟಕದ ಆದೇಶ ಸರಿಯಲ್ಲ. ಈ ಆದೇಶ ರದ್ದುಪಡಿಸಬೇಕು. ನ್ಯಾಯ ಸಮ್ಮತವಾಗಿ ಅಧ್ಯಕ್ಷರ ಆಯ್ಕೆ ನಡೆಯಬೇಕು.ಇಲ್ಲವಾದರೆ ನಿಷ್ಠಾವಂತ ಕಾರ್ಯಕರ್ತರೆಲ್ಲರು ಉಗ್ರಹೋರಾಟ ರೂಪಿಸಲಿದ್ದಾರೆ ಎಂದು ತಾಲೂಕು ಬಿಜೆಪಿ ನಿಕಟಪೂರ್ವ ಅಧ್ಯಕ್ಷ ರವಿಶಂಕರ ನಾಯಕ್ ಹಾಗೂ ಹಿರಿಯ ಮುಖಂಡ ಡಾ.ಜಿ.ವೆಂಕಟರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದರ ಬೆನ್ನಲೇ ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಹಮ್ಮಿಕೊಂಡಿದ್ದು ಈ ವೇಳೆ ಈ ಹಿಂದಿನ ತಾ,ಬಿಜೆಪಿ ಘಟಕದ ಅಧ್ಯಕ್ಷರಾದ ರವಿಶಂಕರನಾಯಕ್ ಮಾತನಾಡಿ, ಕಾರ್ಯಕರ್ತರ ಅಭಿಪ್ರಾಯ ಪಡೆಯದೇ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ಹನುಮಂತೇಗೌಡರು ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದ್ದಾರೆ. ಪಾವಗಡ ಬಿಜೆಪಿ ಘಟಕದ ತಾಲೂಕು ಅಧ್ಯಕ್ಷರನ್ನಾಗಿ ರಂಗಣ್ಣ ಅವರನ್ನು ನೇಮಕಗೊಳಿಸಿದ್ದು, ಇದಕ್ಕೆ ನಮ್ಮ ವಿರೋಧವಿದೆ. ಕೂಡಲೇ ಆದೇಶ ವಾಪಸ್ ಪಡೆಯಬೇಕು ಎಂದರು. ಆನೇಕ ವರ್ಷಗಳಿಂದ ಪಕ್ಷದಲ್ಲಿ ನಿಷ್ಟಾವಂತರಾಗಿ ಸೇವೆ ಸಲ್ಲಿಸಿದ್ದ ಆನೇಕ ಮುಖಂಡರಿದ್ದಾರೆ. ಅವರನ್ನು ಕಡೆಗಣಿಸಿ ಅಧ್ಯಕ್ಷರನ್ನಾಗಿ ಘೋಷಿಸಿದ್ದು ಸೂಕ್ತವಲ್ಲ ಎಂದು ಆರೋಪಿಸಿದರು.
ಹಿರಿಯ ಮುಖಂಡ ಡಾ.ಜಿ.ವೆಂಕಟರಾಮಯ್ಯ, ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಪಾವಗಡ ರವಿ ಮಾತನಾಡಿದರು. ಇದೇ ವೇಳೆ ತಾಲೂಕು ಬಿಜೆಪಿ ಘಟಕದಿಂದ ಮಧುಗಿರಿ ಬಿಜೆಪಿ ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷ ಹನುಮಂತೇಗೌಡರಿಗೆ ಗೋ ಬ್ಯಾಕ್ ಜಿಲ್ಲಾಧ್ಯಕ್ಷ ಎಂದು ಘೋಷಣೆ ಮೊಳಗಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮದ್ದಿಬಂಡೆ ಕೃಷ್ಣಮೂರ್ತಿ,ರೈತ ಮೋರ್ಚಾ ಅಧ್ಯಕ್ಷ ಕೋಟೇಶ್ವರರೆಡ್ಡಿ, ಹಿರಿಯ ಮುಖಂಡರಾದ ಮಾಧವರೆಡ್ಡಿ, ಭೀಮಪ್ಪ, ಹನುಮಂತರಾಯಪ್ಪ, ಉಪಾಧ್ಯಕ್ಷರಾದ ನಾರಾಯಣ್ಣಪ್ಪ, ಶಿವಲಿಂಗ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್, ನವೀನ್, ಕಾರ್ಯದರ್ಶಿಗಳಾದ ಶೇಖರ್ ಬಾಬು,ತಿಪ್ಪೇಸ್ವಾಮಿ, ಖಜಾಂಚಿ ಕೃಷಮೂರ್ತಿ, ವೇಣುಗೋಪಾಲ್, ಗಿರಿಸ್ವಾಮಿ, ಹನುಮಂತರೆಡ್ಡಿ, ಪ್ರಧಾನ ಕಾರ್ಯದರ್ಶಿ ರಂಗನಾಥ್ ಯುವ ಮೋರ್ಚಾ ಅಧ್ಯಕ್ಷ ಮಧು ಪಾಳೇಗಾರ್, ಪ್ರಧಾನ ಕಾರ್ಯದರ್ಶಿ ವಾಸು,ರಾಕೇಶ್, ಬಾಬು,ಎಸ್.ಸಿ.ಮೋರ್ಚಾ ಅಧ್ಯಕ್ಷ ರಾಜೇಂದ್ರ,ಪ್ರಧಾನ ಕಾರ್ಯದರ್ಶಿ ರವಿ,ಮಣಿ, ಎಸ್.ಟಿ.ಮೋರ್ಚಾ ಉಪಾಧ್ಯಕ್ಷ ಮುರಳಿ,ಮಾಧ್ಯಮ ಸಂಚಾಲಕ್ ಪ್ರಸನ್ನ ಕುಮಾರ್, ನಾಗಲಮಡಿಕೆ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಗಿರೀಶ್ ಬಾಬು,ವೆಂಕಟಾಪುರ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್,ವೈ.ಎನ್. ಹೊಸಕೋಟೆ ಅಧ್ಯಕ್ಷ ರಾಮಕೃಷ್ಣ,ನಾಮನಿರ್ದೇಶನ ಸದಸ್ಯ ಲೋಕೇಶ್ ರಾವ್,ಸುದರ್ಶನ್, ಲಕ್ಷೀನಾರಯಣ ಹಾಗೂ ಇತರೆ ಆನೇಕ ಮಂದಿ ತಾ,ಬಿಜೆಪಿ ಕಾರ್ಯಕರ್ತರಿದ್ದರು.