Asianet Suvarna News Asianet Suvarna News

ಉಮೇಶ ಕತ್ತಿ ಮುಖ್ಯಮಂತ್ರಿ ಆಗಬೇಕಿತ್ತು: ಎಂ.ಸಿ. ವೇಣುಗೋಪಾಲ್

8 ಬಾರಿ ಶಾಸಕರಾಗಿರುವ ಉಮೇಶ ಕತ್ತಿ ಸಿಎಂ ಆಗಬೇಕಿತ್ತು ಎಂದ ವಿಧಾನ ಪರಿಷತ್ ಸದಸ್ಯ ಎಂ.ಸಿ. ವೇಣುಗೋಪಾಲ್| ಬಿ. ಎಸ್. ಯಡಿಯೂರಪ್ಪ ಸರ್ಕಾರ ಉಮೇಶ ಕತ್ತಿ ಅವರನ್ನು ಸಚಿವರನ್ನಾಗಿ ಮಾಡಿಲ್ಲ| ಈ ಮೂಲಕ ಕತ್ತಿಯವರ ಅನುಭವದ ಲಾಭ ಪಡೆಯುವಲ್ಲಿ ಯಡಿಯೂರಪ್ಪ ಎಡವಿದ್ದಾರೆ| 8 ಬಾರಿ ಶಾಸಕರಾಗಿರುವ ಬಿಎಸ್‌ವೈ ಸಿಎಂ ಆಗಿದ್ದಾರೆ. ಅದೇ ರೀತಿ 8 ಬಾರಿ ಶಾಸಕರಾಗಿರುವ ಉಮೇಶ ಕತ್ತಿ, ಆರ್.ವಿ.ದೇಶಪಾಂಡೆ ಕೂಡ ಮುಖ್ಯಮಂತ್ರಿ ಆಗಬೇಕಿತ್ತು ಎಂದು ಅಭಿಪ್ರಾಯಪಟ್ಟರು| 

M C Venugopal Talked About Umesh Katti
Author
Bengaluru, First Published Sep 30, 2019, 12:39 PM IST

ಹುಕ್ಕೇರಿ(ಸೆ.30): 8 ಬಾರಿ ಶಾಸಕರಾಗಿರುವ ಉಮೇಶ ಕತ್ತಿ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು ಎಂದು ವಿಧಾನ ಪರಿಷತ್ ಸದಸ್ಯ ಎಂ.ಸಿ. ವೇಣುಗೋಪಾಲ್ ಹೇಳಿದರು. 

ಪಟ್ಟಣದಲ್ಲಿ ಭಾನುವಾರ ಹಿರೇಮಠದ ದಸರಾ ಉತ್ಸವದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಿ. ಎಸ್. ಯಡಿಯೂರಪ್ಪ ಸರ್ಕಾರ ಉಮೇಶ ಕತ್ತಿ ಅವರನ್ನು ಸಚಿವರನ್ನಾಗಿ ಮಾಡಿಲ್ಲ. ಈ ಮೂಲಕ ಕತ್ತಿಯವರ ಅನುಭವದ ಲಾಭ ಪಡೆಯುವಲ್ಲಿ ಯಡಿಯೂರಪ್ಪ ಎಡವಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

8 ಬಾರಿ ಶಾಸಕರಾಗಿರುವ ಬಿಎಸ್‌ವೈ ಸಿಎಂ ಆಗಿದ್ದಾರೆ. ಅದೇ ರೀತಿ 8 ಬಾರಿ ಶಾಸಕರಾ ಗಿರುವ ಉಮೇಶ ಕತ್ತಿ, ಆರ್.ವಿ.ದೇಶ ಪಾಂಡೆ ಕೂಡ ಮುಖ್ಯಮಂತ್ರಿ ಆಗಬೇಕಿತ್ತು ಎಂದು ಅಭಿಪ್ರಾಯಪಟ್ಟರು. 

3 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೇನೇ ಟಿಕೆಟ್ 

ಅನರ್ಹ ಶಾಸಕರ ದಾರಿ ಅವರಿಗೆ, ನಮ್ಮ ದಾರಿ ನಮಗೆ. ಬೆಳಗಾವಿ ಜಿಲ್ಲೆಯ ಗೋಕಾಕ, ಅಥಣಿ ಮತ್ತು ಕಾಗವಾಡ ಕ್ಷೇತ್ರಗಳ ಟಿಕೆಟ್ ಅನರ್ಹ ಶಾಸಕರಿಗೆ ಇಲ್ಲ ಎಂದು ಶಾಸಕ ಉಮೇಶ ಕತ್ತಿ ಹೊಸ ಬಾಂಬ್ ಸಿಡಿಸಿದರು. 

ಹಿರೇಮಠದ ದಸರಾ ಉತ್ಸವದ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಡಿ.5 ರಂದು ನಡೆಯಲಿರುವ ಉಪಚುನಾವಣೆಗೆ ಗೋಕಾಕ್‌ನಲ್ಲಿ ಅಶೋಕ ಪೂಜಾರಿ, ಅಥಣಿಯಲ್ಲಿ ಲಕ್ಷ್ಮಣ ಸವದಿ, ಕಾಗವಾಡದಲ್ಲಿ ರಾಜು ಕಾಗೆ ಅವರಿಗೆ ಬಿಜೆಪಿ ಟಿಕೆಟ್ ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ನೆರೆ ಹಾವಳಿ ಹಾಗೂ ಅತಿವೃಷ್ಟಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಕೋಟ್ಯಂತರ ರುಪಾಯಿ ಹಾನಿಯಾಗಿದೆ. ರಾಜ್ಯ ಸರ್ಕಾರ ಅಗತ್ಯ ನೆರವು ಒದಗಿಸಬೇಕು. ನನಗೆ ಮಂತ್ರಿಗಿರಿಗಿಂತ ಈ ಭಾಗದ ಅಭಿವೃದ್ಧಿ ಮುಖ್ಯ. ಒಂದು ವೇಳೆ ನೆರೆ ಹಾವಳಿ ಸಂತ್ರಸ್ತರಿಗೆ ನೀಡುವ ಪರಿಹಾರದಲ್ಲಿ ಅನ್ಯಾಯವಾದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಸರ್ಕಾರಗಳಿದ್ದರೂ ಈ ಭಾಗಕ್ಕೆ ಅನ್ಯಾಯವಾದರೆ ಸುಮ್ಮನೆ ಕೂರುವುದಿಲ್ಲ ಎಂದು ಗುಡುಗಿದರು. 
 

Follow Us:
Download App:
  • android
  • ios