ಕೆಎಚ್‌ಬಿಯಿಂದ ಐಷಾರಾಮಿ ಅಪಾರ್ಟ್‌ಮೆಂಟ್ ನಿರ್ಮಾಣ: ಬೆಲೆ ಎಷ್ಟು?
ಎಲೆಕ್ಟ್ರಾನಿಕ್ ಸಿಟಿಯಿಂದ 9 ಕಿ.ಮೀ ದೂರದಲ್ಲಿರುವ ಆನೇಕಲ್-ಚಂದಾಪುರ ಮುಖ್ಯ ರಸ್ತೆಯ ಕೆಎಚ್ ಬಿ ಸೂರ್ಯನಗರ 1ನೇ ಹಂತದಲ್ಲಿ 50 ಫ್ಲ್ಯಾಟ್‌ಗಳ ಲಕ್ಷುರಿ ಅಪಾರ್ಟ್‌ಮೆಂಟ್ ನಿರ್ಮಿಸಲಾಗುತ್ತದೆ. ಪ್ರತಿ ಫ್ಲ್ಯಾಟ್ ವಿಸ್ತೀರ್ಣ 2,200 ಚದರಡಿ ಇರಲಿದೆ.
ಬೆಂಗಳೂರು(ಅ.09): ಬಿಡಿಎ ಬಳಿಕ ಕರ್ನಾಟಕ ಗೃಹ ಮಂಡಳಿಯು ಲಕ್ಷುರಿ, ಹೈಟೆಕ್ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಮುಂದಾಗಿದ್ದು, ₹1.56 ಕೋಟಿ ಮೌಲ್ಯದ 3 ಬಿಎಚ್‌ಕೆಯ 50 ಫ್ಲ್ಯಾಟ್‌ಗಳ ನಿರ್ಮಾಣಕ್ಕಾಗಿ ಬೇಡಿಕೆ ಸಮೀಕ್ಷೆಗೆ ಅರ್ಜಿ ಆಹ್ವಾನಿಸಿದೆ.
ಎಲೆಕ್ಟ್ರಾನಿಕ್ ಸಿಟಿಯಿಂದ 9 ಕಿ.ಮೀ ದೂರದಲ್ಲಿರುವ ಆನೇಕಲ್-ಚಂದಾಪುರ ಮುಖ್ಯ ರಸ್ತೆಯ ಕೆಎಚ್ ಬಿ ಸೂರ್ಯನಗರ 1ನೇ ಹಂತದಲ್ಲಿ 50 ಫ್ಲ್ಯಾಟ್‌ಗಳ ಲಕ್ಷುರಿ ಅಪಾರ್ಟ್‌ಮೆಂಟ್ ನಿರ್ಮಿಸಲಾಗುತ್ತದೆ. ಪ್ರತಿ ಫ್ಲ್ಯಾಟ್ ವಿಸ್ತೀರ್ಣ 2,200 ಚದರಡಿ ಇರಲಿದೆ.
ಕರ್ನಾಟಕದಲ್ಲಿ ಗೃಹ ಮಂಡಳಿ ಸೈಟ್ ಕೇಳೋರೇ ಇಲ್ಲ!
ಕ್ಲಬ್‌ಹೌಸ್, ಗ್ರಂಥಾಲಯ, ಜಿಮ್, ಈಜುಕೊಳ, ಒಳಾಂಗಣ ಕ್ರೀಡಾಂಗಣ, ಕಾವೇರಿ ನೀರು, ಇವಿ ಚಾರ್ಜಿಂಗ್ ವ್ಯವಸ್ಥೆ, ಸೋಲಾರ್‌ವ್ಯವಸ್ಥೆ, ಆಟದ ಮೈದಾನ, ಉದ್ಯಾನ ಸೇರಿದಂತೆ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳು ಇರಲಿವೆ. ಆಸಕ್ತ ಸಾರ್ವಜನಿಕರು ನೋಂದಣಿ ಶುಲ್ಕ 1,500 ಕಟ್ಟಿ ಆರಂಭಿಕ ಠೇವಣಿ ₹5 ಲಕ್ಷ ಇರಿಸಬೇಕು. ಕೆಎಚ್ ಬಿ ವೆಬ್‌ಸೈಟಿಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನ.30 ಕಡೆ ದಿನಾಂಕವಾಗಿದೆ.