ಹಾಸನ(ಜು.28): ಗ್ಯಾಸ್‌ ಸಿಲಿಂಡರ್‌ಗೆ ಹೆಚ್ಚುವರಿ ಹಣ ವಸೂಲಿ ಮಾಡುವ ಮೂಲಕ ಕೆಲವು ಗ್ಯಾಸ್ ಏಜೆನ್ಸಿ ಗ್ರಾಹಕರನ್ನು ವಂಚಿಸುತ್ತಿರುವ ಆರೋಪ ಹಾಸನದ ಚನ್ನರಾಯಪಟ್ಟಣದಲ್ಲಿ ಕೇಳಿ ಬಂದಿದೆ.

ಪುನರಾವರ್ತಿತ ಗ್ಯಾಸ್‌ ಸಿಲಿಂಡರನ್ನು ಮನೆಬಾಗಿಲಿಗೆ ತಲುಪಿಸುವ ಕೆಲಸಕ್ಕೆ ಪ್ರತಿ ಸಿಲಿಂಡರ್‌ಗೆ 40 ರು. ಹೆಚ್ಚುವರಿಯಾಗಿ ವಸೂಲಿ ಮಾಡುವ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.

ಸಿಲಿಂಡರ್‌ಗೆ ಹೆಚ್ಚುವರಿ 40 ರು:

ಪಟ್ಟಣದ ಸುತ್ತ 5ಕಿ.ಮಿ ವ್ಯಾಪ್ತಿಯಲ್ಲಿ ಪುನರಾವರ್ತಿತ ಗ್ಯಾಸ್‌ ಸಿಲಿಂಡರನ್ನು ಮನೆಬಾಗಿಲಿಗೆ ತಲುಪಿಸುವ ಕೆಲಸಕ್ಕೆ ಪ್ರತಿ ಸಿಲಿಂಡರ್‌ಗೆ 40 ರು. ಹೆಚ್ಚುವರಿಯಾಗಿ ವಸೂಲಿ ಮಾಡುವ ಮೂಲಕ ವಿನಾಯಕ ಗ್ಯಾಸ್‌ ಏಜೆನ್ಸಿಯವರು ಗ್ರಾಹಕರನ್ನು ವಂಚಿಸುತ್ತಿದ್ದಾರೆ ಎಂದು ಪಟ್ಟಣದ ನಿವಾಸಿ ಡಾ.ಸುಬ್ರಹ್ಮಣ್ಯ ಆರೋಪಿಸಿದ್ದಾರೆ.

ಎಚ್ಚರ ! ಇಂತವರ ಆಮಿಷಕ್ಕೆ ನೀವು ಬಲಿಯಾಗದಿರಿ

ಸರ್ಕಾರದ ನಿಯಮ ಪಾಲಿಸದ ಏಜೆನ್ಸಿದಾರರು:

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಗೆಮುಕ್ತ ಸಮಾಜದ ನಿರ್ಮಾಣಕ್ಕೆ ಮುಂದಾಗಿರುವ ಪ್ರಧಾನಿ ನರೇಂದ್ರಮೋದಿಯವರು ಪ್ರತಿಯೊಬ್ಬರಿಗೂ ಎಲ್‌ಪಿಜಿ ಸಂಪರ್ಕ ಸಿಗಲೆಂದು ಪ್ರತಿ ಹಳ್ಳಿಗಳಿಗೂ, ಬಡವರಿಗೂ ಗ್ಯಾಸ್‌ ಸಿಲಿಂಡರ್‌ ಸಂಪರ್ಕ ನೀಡಿದ್ದಾರೆ. ಇದರ ದುರಪಯೋಗ ಮಾಡಿಕೊಳ್ಳುತ್ತಿರುವ ಗ್ಯಾಸ್‌ ಏಜೆನ್ಸಿದಾರರು ಮನೆಗಳಿಗೆ ಸರಬರಾಜು ಮಾಡುವ ಸಿಲಿಂಡರ್‌ನ ತೂಕ ಪರೀಕ್ಷಿಸಿ, ಸಂಪರ್ಕ ನೀಡಿ ಯಾವುದೇ ಶುಲ್ಕ ಪಡೆಯದಂತೆ ಹಿಂದಿರುಗಬೇಕು, ಎಂಬ ಸರ್ಕಾರದ ನಿಯಮವನ್ನು ಪಾಲಿಸದೇ ಹೆಚ್ಚುವರಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದರು.

ಜನರನ್ನು ಗೊಂದಲದಲ್ಲಿಟ್ಟ ಶಾಸಕರು:

ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ವಿಸ್ತರಣೆ ಕಾಮಗಾರಿ ಕುಂಟುತ್ತಾ ಸಾಗಿದೆ. ಈ ರಸ್ತೆ ಲೋಕಪಯೋಗಿ ಇಲಾಖೆಗೋ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕೋ, ಇಲ್ಲವೇ ಪುರಸಭೆಗೆ ಸೇರಿದ್ದಿಯೋ ಎಂಬುದಾಗಿ ಸ್ಪಷ್ಟಪಡಿಸದ ಶಾಸಕ ಬಾಲಕೃಷ್ಣರವರು ಪಟ್ಟಣದ ನಾಗರಿಕರನ್ನು ಗೊಂದಲದಲ್ಲಿಟ್ಟು ರಸ್ತೆ ಅಗಲಿಕರಣ ಮಾಡಿಸುತ್ತಿದ್ದಾರೆ. ರಸ್ತೆ ಮಧ್ಯಭಾಗದಿಂದ ಎಷ್ಟುಅಡಿಗಳು ಅಗಲೀಕರಣ ಎಂಬುದನ್ನು ಮರೆಮಾಚಿ ಕಾಮಗಾರಿಗೆ ಮುಂದಾಗಿ, ಕಾಮಗಾರಿಯನ್ನು ಪೂರ್ಣಗೊಳಿಸದೇ ರಾಜ್ಯ ರಾಜಕೀಯದ ಕೆಸೆರೆರಚಾಟದಲ್ಲಿ ತೊಡಗಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಕೆಲಸವನ್ನು ಪೂರ್ಣಗೊಳಿಸುವಂತೆ ತಾವು ಸಂಬಂಧಿಸಿದ ಅಧಿಕಾರಿಗಳಿಗೆ ಅರ್ಜಿ ನೀಡಿದ ಪರಿಣಾಮ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಆದ್ಯಾಗೂ ಸಣ್ಣಪುಣ್ಣ ಗೊಂದಲಗಳಿದ್ದು ,ಅದನ್ನು ಸರಿಪಡಿಸುವಂತೆ ಶಾಸಕರಿಗೆ ಮನವಿ ಮಾಡಿದರು.