Asianet Suvarna News Asianet Suvarna News

ಠಾಣೆಯಲ್ಲೇ ಪ್ರೇಮಿಗಳಿಗೆ ಮದುವೆ ಮಾಡಿಸಿದ ಪೊಲೀಸ್ರು!

ಪರಸ್ಪರ ಪ್ರೀತಿಸುತ್ತಿದ್ದ ಯುವ ಪ್ರೇಮಿಗಳು ಪೊಲೀಸರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ವಿಶೇಷತೆ ಅಂದರೆ ಇವರ ಮದುವೆಗೆ ಪೊಲೀಸರದ್ದೇ ಪೌರೋಹಿತ್ಯ.

Lovers gets Married in Belagavi police station in front of parents
Author
Bengaluru, First Published Oct 1, 2018, 4:16 PM IST
  • Facebook
  • Twitter
  • Whatsapp

ಬೆಳಗಾವಿ, (ಅ.1): ಕುಟುಂಬ ಸದಸ್ಯರ ವಿರೋಧಕ್ಕೆ ಬೇಸತ್ತು ಬೆಳಗಾವಿ ಮಹಿಳಾ ಠಾಣೆಯ ಮೆಟ್ಟಿಲೇರಿದ್ದ ಯುವ ಜೋಡಿಗೆ ಪೊಲೀಸರೇ ಮದುವೆ ಮಾಡಿಸಿ ವಿಶೇಷತೆ ಮೆರೆದಿರುವ ಅಪರೂಪದ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ.

ಠಾಣೆಯ ಪಿ​​ಐ ಶ್ರೀದೇವಿ ಪಾಟೀಲ್ ಅವರು​​ ಯುವಕ-ಯುವತಿಯ ಪಾಲಕರನ್ನು ಠಾಣೆಗೆ ಕರೆಯಿಸಿದ್ದರಲ್ಲದೆ, ಅವರ ಮನವೊಲಿಸಿ ಅವರ ಸಮ್ಮುಖದಲ್ಲೇ ನವಜೋಡಿಗೆ ಮದುವೆ ಮಾಡಿಸಿದ್ದಾರೆ.

ವೈಭವನಗರದ ಅನಿಲ್ ಚೌಹಾಣ್ (24) ಹಾಗೂ ರಾಮತೀರ್ಥ ನಗರದ ದೀಪಾ ಲಮಾಣಿ (21) ಕಳೆದ ಎರಡು ವರ್ಷಗಳಿಂದ‌ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೇಮ ವಿವಾಹಕ್ಕೆ ಅನಿಲ್ ಕುಟುಂಬ ಅಸಮ್ಮತಿ ಸೂಚಿಸಿತ್ತು. ಹಾಗಾಗಿ ಇದರಿಂದ‌ ಬೇಸತ್ತು ದೀಪಾ ತನ್ನ ಪ್ರಿಯಕರ ಅನಿಲ್ ಸಮೇತ‌ ಮಹಿಳಾ ಠಾಣೆಗೆ ಹೋಗಿದ್ದಳು.

ನಾವಿಬ್ಬರೂ ಮೇಜರ್​ ಆಗಿದ್ದು, ಮದುವೆಗೆ ಸಹಾಯ ಮಾಡುವಂತೆ ಠಾಣೆಯ ಪಿಐ ಶ್ರಿದೇವಿ ಪಾಟೀಲ್ ಅವರನ್ನು ಈ ಜೋಡಿ ಕೋರಿದ್ದರು. ನವ ಜೋಡಿಯ ಬೆನ್ನಿಗೆ ನಿಂತ ಪಿಐ ಶ್ರಿದೇವಿ ಅವರು ಉಭಯ ಕುಟುಂಬ ಸದಸ್ಯರ ಮನವೊಲಿಸಿ ಬಳಿಕ ಪಾಲಕರ ಸಮ್ಮುಖದಲ್ಲೇ ನವಜೋಡಿಯ ಮದುವೆ ಮಾಡಿಸಿದ್ದಾರೆ.

Follow Us:
Download App:
  • android
  • ios