ಜೋಯಿಡಾ(ಏ.15): ತಾಲೂಕಿನ ಗಣೇಶಗುಡಿ ಸೂಪಾ ಜಲಾಶಯದ ಹಿನ್ನಿರಿನ ಕಾಳಿ ಹರಿವಿನಲ್ಲಿ ಬ್ರೀಜ್‌ ಮೇಲೆ ನಿಂತು ಸೆಲ್ಫಿ ತಗೆದುಕೊಳ್ಳುತ್ತಿದ್ದ ವೇಳೆ ಕಾಲುಜಾರಿ ನದಿಗೆ ಬಿದ್ದಿದ್ದ ಜೋಡಿಗಳ ಶವ ಮಂಗಳವಾರ ಪತ್ತೆಮಾಡುವಲ್ಲಿ ಅಗ್ನಿಶಾಮಕ ದಳ ಹಾಗೂ ಪ್ಲಾಯ್‌ ಕ್ಯಾಚರರ ತಂಡ ಯಶಸ್ವಿಯಾಗಿದೆ. 

ಯುವತಿಯನ್ನು ಬೀದರ್‌ ಮೂಲದ ರಕ್ಷಿತಾ ಹಾಗೂ ಯುವಕನನ್ನು ಪುರುಷೋತ್ತಮ ಪಾಟೀಲ್‌ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಪಾಲಕರಿಗೆ ತಿಳಿಸದೆ ಇವರಿಬ್ಬರು ಪ್ರವಾಸಕ್ಕಾಗಿ ಬಂದಿದ್ದರು. 

'ಗೋಹತ್ಯೆಯಿಂದಾಗಿ ಕೊರೋನಾ ಉಲ್ಬಣ'

ದಾಂಡೇಲಿಯಿಂದ ರಿಕ್ಷಾ ಮೂಲಕ ಬಂದ ಇವರು ಸೆಲ್ಫಿ ತೆಗೆಯುವಾಗ ಸಾವನ್ನಪ್ಪಿದ್ದಾರೆ ಎಂದು ಮೇಲ್ನೋಟಕ್ಕೆ ಪೊಲೀಸ್‌ ಇಲಾಖೆ ಮಾಹಿತಿ ನೀಡಿದೆ. ಆದರೆ, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಅಂತಿಮವಾಗಲಿದೆ.