ವಿಜಯಪುರ(ಮಾ.26): ಪ್ರೇಮ ವೈಫಲ್ಯವಾಗಿದ್ದಕ್ಕೆ ಪ್ರೇಮಿಗಳು ಒಬ್ಬರನ್ನು ಒಬ್ಬರು ತಬ್ಬಿಕೊಂಡು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ಗಂಗಾಧರ ನಡಗಡ್ಡಿ(21), ರಕ್ಷಿತಾ ಶಿಂಗೆ(19) ಮೃತ ದುರ್ದೈವಿಗಳಾಗಿದ್ದಾರೆ. 

ಮೃತ ರಕ್ಷಿತಾ ತಂದೆ ಹನುಮಂತ ಶಿಂಗೆ ಅವರ ಹೊಲದಲ್ಲಿರುವ ಬಾವಿಯಲ್ಲಿ ಈ ದುರ್ಘಟನೆ ನಡೆದಿದೆ. ಎರಡು ತಿಂಗಳ ಹಿಂದಷ್ಟೇ ರಕ್ಷಿತಾಳನ್ನ ಬೇರೊಬ್ಬನ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಒಲ್ಲದ ಮನಸ್ಸಿನಿಂದ ಮದುವೆ ಒಪ್ಪಿದ ರಕ್ಷಿತಾ ಗಂಡನ ಸಂಸಾರ ಮಾಡಲು ಇಷ್ಟವಿರಲಿಲ್ಲ ಎಂದು ಹೇಳಲಾಗಿದೆ. 

ಸಾವಿಗೆ ಕಾಲು ನೋವು ಕಾರಣ ಎಂದು ಬರೆದಿಟ್ಟು ಶಿಕ್ಷಕಿ ಆತ್ಮಹತ್ಯೆ

ಹೀಗಾಗಿ ರಕ್ಷಿತಾ ಹಾಗೂ ಗಂಗಾಧರ ಇಬ್ಬರೂ ಸಾಯಲು ನಿರ್ಧರಿಸಿ, ಎರಡು ದಿನಗಳ ಹಿಂದೆಯೇ ಬಾವಿ ಜಿಗಿದು ಆತ್ಮಹತ್ಯೆ ಶರಣಾಗಿದ್ದಾರೆ. ಬಾವಿಯಲ್ಲಿ ಕೆಟ್ಟ ವಾಸನೆ ಬಂದ ಬಳಿಕ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಇಂಡಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.