ಚಿಕ್ಕಮಗಳೂರು: ಮಳೆಯಿಂದ ಮುಂದುವರೆದ ಅನಾಹುತ, ಭದ್ರಾ ನದಿಯಲ್ಲಿ ಜಲಸಾಹಸ ಕ್ರೀಡೆಗೆ ಆಕ್ಷೇಪ..!
ಭದ್ರೆಯ ಒಡಲು ಅಬ್ಬರಿಸಿಕೊಂಡು ಹರಿಯುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಅನುಮತಿಯೊಂದಿಗೆ ಭದ್ರಾನದಿಯಲ್ಲಿ ನುರಿತ ಹಾಗೂ ತರಬೇತಿ ಪಡೆದ ನೇಪಾಳಿ ಯುವಕರಿಂದ 6 ಕಿಲೋಮೀಟರ್ ರಾಫ್ಟಿಂಗ್ ಮಾಡಲಾಯಿತು. ಭದ್ರೆಯ ಅಬ್ಬರದಲ್ಲಿ ರಾಫ್ಟಿಂಗ್ ನಡೆಸಲು ಕೆಲವು ಸ್ಥಳೀಯರ ವಿರೋಧ ವ್ಯಕ್ತಪಡಿಸಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜು.21): ಜಿಲ್ಲೆಯಲ್ಲಿ ಸತತ ಒಂದು ವಾರ ಧಾರಾಕಾರವಾಗಿ ಸುರಿದ ಮಳೆ ಕೊಂಚ ಕಡಿಮೆಯಾಗಿದೆ. ನದಿಗಳ ಹರಿವು ಇಳಿಕೆಯಾಗಿದೆ. ಮಲೆನಾಡಿನಲ್ಲಿ ಇಂದು ಆಗಾಗ ಸಾಧಾರಣ ಮಳೆ ಸುರಿಯಿತು. ಈ ನಡುವೆ ಮಲೆನಾಡ ಮಳೆಗೆ ಮೈದುಂಬಿ ಹರಿಯುತ್ತಿರೋ ಭದ್ರಾನದಿಯಲ್ಲಿ ಕಳಸ ತಾಲೂಕಿನ ಕಗ್ಗನಹಳ್ಳದ ಸಮೀಪ ನದಿಯೊಳಗೆ ಸಾಹಸಭರಿತ ರಿವರ್ ರಾಫ್ಟಿಂಗ್ ನಡೆಸಲಾಯಿತು.
ಭದ್ರೆಯ ಒಡಲು ಅಬ್ಬರಿಸಿಕೊಂಡು ಹರಿಯುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಅನುಮತಿಯೊಂದಿಗೆ ಭದ್ರಾನದಿಯಲ್ಲಿ ನುರಿತ ಹಾಗೂ ತರಬೇತಿ ಪಡೆದ ನೇಪಾಳಿ ಯುವಕರಿಂದ 6 ಕಿಲೋಮೀಟರ್ ರಾಫ್ಟಿಂಗ್ ಮಾಡಲಾಯಿತು. ಭದ್ರೆಯ ಅಬ್ಬರದಲ್ಲಿ ರಾಫ್ಟಿಂಗ್ ನಡೆಸಲು ಕೆಲವು ಸ್ಥಳೀಯರ ವಿರೋಧ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು: ಉಗ್ರ ಸ್ವರೂಪ ತಾಳಿದ ಕಲ್ಲತ್ತಿಗರಿ ಜಲಪಾತ, ಪಾಲ್ಸ್ ಬಳಿ ನಿಲ್ಲೋದಕ್ಕೂ ಪ್ರವಾಸಿಗರಿಗೆ ಭಯ..!
ಮನೆ ಕುಸಿತದಿಂದ ಕುಟುಂಬ ಕಂಗಾಲು :
ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮನೆಗಳು ಕುಸಿಯಲಾರಂಭಿಸಿವೆ.ಹಳುವಳ್ಳಿ ಗ್ರಾಮದ ತಾರಿಕೊಂಡ ಉಮಾರಮೇಶ್ ಅವರ ಮನೆಗೆ ಹಾನಿಯಾಗಿದ್ದು, ಕುಟುಂಬದವರು ಕಂಗಾಲಾಗಿದ್ದಾರೆ. ದಿನನಿತ್ಯದ ವಸ್ತುಗಳು ನಾಶವಾಗಿವೆ. ಮನೆಕಳೆದುಕೊಂಡವರು ಕೊಟ್ಟಿಗೆಯಲ್ಲಿ ಜೀವನ ಸಾಗಿಸುವಂತಾಗಿದೆ.ಸ್ಥಳಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಲು ಮುಂದಾಗಿಲ್ಲ.ವಾರಂತ್ಯವಾಗಿರುವುದರಿಂದ ಕಾಫಿನಾಡಿಗೆ ಪ್ರವಾಸಿಗರು ಆಗಮಿಸಿದ್ದು, ಗಿರಿಶ್ರೇಣಿ ಮುಳ್ಳಯ್ಯನಗಿರಿಗೆ ಜಿಲ್ಲಾಡಳಿತ ಪ್ರವೇಶ ನಿರ್ಬಂಧಿಸಿದ್ದು, ವಿಷಯ ತಿಳಿಯದ ಪ್ರವಾಸಿಗರು ನಿರಾಶೆಯಿಂದ ಕೈಮರ ಚೆಕ್ಪೋಸ್ಟ್ನಿಂದ ವಾಪಸ್ಸಾಗಬೇಕಾಯಿತು.ಕೊಪ್ಪ ತಾಲೂಕಿನ ಬಸರೀಕಟ್ಟೆ ಸಮೀಪದ ಮೇರುತಿ ಗುಡ್ಡದಿಂದ ಧುಮ್ಮಿಕ್ಕುತ್ತಿರುವ ಅಬ್ಬಿಕಲ್ಲು ಜಲಪಾತ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಮೇರುತಿಗುಡ್ಡ ಕರ್ನಾಟಕದ ಅತ್ಯಂತ 2ನೇ ಎತ್ತರದ ಪ್ರದೇಶ ಇದಾಗಿದೆ. ಹಾಲ್ನೊರೆಯೊಂದಿಗೆ ಗುಡ್ಡದ ಕೆಸರು ಮಿಶ್ರಿತ ಜಲಪಾತಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ.
ಡ್ರೋಣ್ ಕ್ಯಾಮೆರಾದಲ್ಲಿ ಭದ್ರೆಯ ಅಬ್ಬರ :
ಡ್ರೋನ್ ಕ್ಯಾಮರಾದಲ್ಲಿ ಕಳಸದ ಸುಂದರ ಸೊಬಗು ಸೆರೆಯಾಗಿದೆ. ಭದ್ರಾ ನದಿಯ ನೀರು ಹೆಬ್ಬಾಳೆ ಸೇತುವೆಗೆ ಅಪ್ಪಳಿಸುವ ಮನಮೋಹಕ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಮುಳುಗು ಸೇತುವೆ ಇದಾಗಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ದೇವದಾನ ಎಸ್ಟೇಟ್ ಬಳಿ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿಬಿದ್ದಿದ್ದು, ದೇವರ ದಯೆಯಿಂದ ಕಾರಿನಲ್ಲಿದ್ದ ಇಬ್ಬರು ಕ್ಷಣಮಾತ್ರದಲ್ಲಿ ಪವಾಡ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮರ ಕಾರಿನ ಬಾನೆಟ್ ಮೇಲೆ ಬಿದ್ದಿದ್ದರಿಂದ ಇಬ್ಬರ ಪ್ರಾಣ ಉಳಿಯುವಂತಾಯಿತು. ಮಳೆ ಸ್ವಲ್ಪ ಇಳಿಮುಖವಾಗಿದ್ದು, ಜೀವನದಿಗಳಾದ ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಸ್ವಲ್ಪ ಕಡಿಮೆಯಾದಂತಾಗಿದೆ. ತುಸು ಬಿಡುವು ನೀಡುವ ಮಳೆ ಮತ್ತೆ ಆರ್ಭಟಿಸತೊಡಗಿದೆ. ಮಲೆನಾಡಿನಲ್ಲಿ ನಾಟಿ ಕಾರ್ಯ ಬಿರುಸಿನಿಂದ ಸಾಗಿದೆ. ಟ್ರಾಕ್ಟರ್ ಗದ್ದೆಗಿಳಿದಿದ್ದು, ಮಹಿಳೆಯರು ಸಸಿ ಕೀಳುವ, ನಾಟಿ ಮಾಡುವ ಕಾರ್ಯದಲ್ಲಿ ನಿರತವಾಗಿದ್ದಾರೆ.