ಹುನಗುಂದ (ಅ.12): ಅಂತಾರಾಷ್ಟ್ರೀಯ ಧಾರ್ಮಿಕ ಕ್ಷೇತ್ರವಾಗಿ ರೂಪುಗೊಂಡಿರುವ ವಿಶ್ವಗುರು ಬಸವಣ್ಣನವರ ಐಕ್ಯಕೇತ್ರ ಕೂಡಲಸಂಗಮದ ಸ್ವಚ್ಛತೆ ಕಾಪಾಡುವಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ವಿಫಲವಾಗಿದ್ದು, ಇದನ್ನು ವಿರೋಧಿಸಿ ಕೂಡಲಸಂಗಮ ಹಾಗೂ ಸುತ್ತಲಿನ ಗ್ರಾಮಗಳ ಯುವಕರು ‘ನಿದ್ದೆಯಲ್ಲಿರುವ ಮಂಡಳಿಯ ಸಿಬ್ಬಂದಿ, ರಕ್ಷಿಸೋಣ ಬನ್ನಿ ಕೂಡಲಸಂಗಮ’ ಎಂಬ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದಾರೆ.

ರಾಜ್ಯದ ಮೂರು ಜಿಲ್ಲೆಗಳಲ್ಲಿ ಮಳೆ ಅಬ್ಬರ .

ಕೂಡಲಸಂಗಮ ಅಭಿವೃದ್ಧಿ ಮಂಡಳಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕಾಯಕದ ಅರಿವು ಮೂಡಿಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಂಡಿದ್ದರು.

ಭಾನುವಾರ ಬೆಳಗ್ಗೆ 30ಕ್ಕೂ ಹೆಚ್ಚು ಯವಕರು ಪೊರಕೆ ಹಿಡಿದು ದೇವಾಲಯ ಒಳ, ಹೊರ ಆವರಣ, ನದಿಯ ದಡ, ಪ್ರವೇಶ ದ್ವಾರಗಳನ್ನು ಸ್ವಚ್ಛಗೊಳಿಸುವ ಮೂಲಕ ಅಭಿಯಾನ ಆರಂಭಿಸಿದರು.