ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ! ಬಾಗಲಕೋಟೆಯಲ್ಲಿ ಜಯಭೇರಿ ಬಾರಿಸಿದ ಬಿಜೆಪಿ! ಶರ್ಟ್ ಬಿಚ್ಚಿ ಸಂಭ್ರಮಿಸಿದ ಬಿಜೆಪಿ ಅಭ್ಯರ್ಥಿ! ವಾರ್ಡ್ ನಂ.19 ರ ಬಿಜೆಪಿ ಅಭ್ಯರ್ಥಿ ವೀರಪ್ಪ ಸಿರಗಣ್ಣವರ್

ಬಾಗಲಕೋಟೆ(ಸೆ.3): ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗಳು ಸಂಭ್ರಮೋತ್ಸವ ಆಚರಿಸುತ್ತಿದ್ದಾರೆ. ಕೆಲವರು ಗೆದ್ದ ಖುಷಿಯಲ್ಲಿ ವಿಚಿತ್ರ ಬಗೆಯ ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದಾರೆ.

Scroll to load tweet…

ಇಲ್ಲಿನ ವಾರ್ಡ್ ನಂ.19 ರಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಪ್ಪ ಸಿರಗಣ್ಣವರ್ ಗೆಲುವು ಸಾಧಿಸಿದ ಖುಷಿಯಲ್ಲಿ ತಮ್ಮ ಬಿಳಿ ಶರ್ಟ್ ಬಿಚ್ಚಿ ಸಂಭ್ರಮಿಸಿದರು. ವೀರಪ್ಪ ಅವರ ಸಂಭ್ರಮಾಚರಣೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರಂತೆ ಸಂಭ್ರಮಿಸಿ ಗಮನ ಸೆಳೆದರು.