ಚಾಮರಾಜನಗರ ಜಿಲ್ಲೆಯ ನಗರಸಭೆಗಳೆರಡೂ ಅತಂತ್ರ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Sep 2018, 8:08 PM IST
Local body elections result of Chamrajnagar
Highlights

ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಒಂದು ಸಣ್ಣ ಅಗ್ನಿ ಪರೀಕ್ಷೆಯಂತಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ್ದ ಈ ಚುನಾವಣೆ ಫಲಿತಾಂಶದ ಆಧಾರದ ಮೇಲೆ ಲೋಕಸಭಾ ಚುನಾವಣೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್-ಜೆಡಿಎಸ್ ನಿರ್ಧರಿಸಲಿದೆ. ಗಡಿ ಜಿಲ್ಲೆಯಲ್ಲಿ ಅತಂತ್ರ ಫಲಿತಾಂಶ ಹೊಂದಿದೆ.

ಚಾಮರಾಜನಗರ: ತೀವ್ರ ಕುತೂಹಲ ಕೆರಳಿಸಿದ್ದ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳ ಫಲಿತಾಂಶ ಅತಂತ್ರವಾಗಿದೆ. 

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾಬಲ್ಯ ಹೊಂದಿದ್ದರೂ, ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿವೆ.

ಚಾಮರಾಜನಗರ ನಗರಸಭೆ 

ಒಟ್ಟು ವಾರ್ಡ್‌ಗಳು- 31 
ಬಿಜೆಪಿ: 14 
ಕಾಂಗ್ರೆಸ್: 08 
ಎಸ್‌ಡಿಪಿಐ : 06 
ಬಿಎಸ್‌ಪಿ: 1 
ಪಕ್ಷೇತರ: 01 

ಕೊಳ್ಳೇಗಾಲ ನಗರಸಭೆ 
ಒಟ್ಟು ವಾರ್ಡ್‌ಗಳು -31
ಕಾಂಗ್ರೆಸ್:  11
ಬಿಜೆಪಿ : 06
ಬಿಎಸ್‌ಪಿ: 09
ಪಕ್ಷೇತರರು: 4 

31 ವಾರ್ಡ್‌ಗಳಲ್ಲಿ 29 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಒಬ್ಬ ಬಿಎಸ್ ಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದು,ಮತ್ತೊಬ್ಬರು ಬಿಎಸ್‌ಪಿ ಅಭ್ಯರ್ಥಿ ಅಪಘಾತದಲ್ಲಿ ಚುನಾವಣೆ ರದ್ದಾಗಿತ್ತು. 

ಒಟ್ಟಾರೆ ಗಡಿಜಿಲ್ಲೆಯಲ್ಲಿ ಯಾವೊಂದೂ ಪಕ್ಷವು ಬಹುಮತ ಪಡೆಯದೇ ಮತ್ತೊಂದು ಪಕ್ಷ ಅಥವಾ ಸ್ವತಂತ್ರ ಅಭ್ಯರ್ಥಿಗಳನ್ನು ಆಶ್ರಯಿಸಬೇಕಿದೆ.

ಸಂಭ್ರಮಾಚರಣೆ: 

ಇನ್ನು ಗೆದ್ದ ಅಭ್ಯರ್ಥಿಗಳನ್ನು ಹೊತ್ತು ಪಕ್ಷದ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲೆಡೆ ಪಟಾಕಿ ಸಿಡಿಸಿ ಸಿಹಿ ಹಂಚಿ ಅಭಿಮಾನಿಗಳು ಸಂಭ್ರಮಾಚರಿಸಿದರು.
 

loader