ಒಂದೇ ಕುಟುಂಬದ 106 ಮಂದಿ ಮತದಾನ!

ಒಂದೇ ಕುಟುಂಬದ 106 ಮಂದಿ ಮತದಾನ!| ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದವರಾದ ರತ್ನಯ್ಯ ಶೆಟ್ಟಿಕುಟುಂಬ ಸದಸ್ಯರು 

Local Body Election 106 People From Same family Voted At Chikkaballapur

ಚಿಕ್ಕಬಳ್ಳಾಪುರ[ಫೆ.10]: ಕುಟುಂಬದವರೆಲ್ಲರೂ ಒಂದೇ ಬಾರಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವುದು ವಿಶೇಷವೇನಲ್ಲ. ಒಂದು ಕುಟುಂಬದ ಐದೋ, ಹತ್ತು ಮಂದಿಯೋ ಒಟ್ಟಾಗಿ ಮತಗಟ್ಟೆಗೆ ಆಗಮಿಸುವುದು ಸಾಮಾನ್ಯವಾಗಿ ನಡೆಯುವ ಸಂಗತಿ. ಆದರೆ ಭಾನುವಾರ ನಡೆದ ಇಲ್ಲಿನ ನಗರಸಭಾ ಚುನಾವಣೆಯಲ್ಲಿ ಒಂದೇ ಕುಟುಂಬದ 106 ಮಂದಿ ಸದಸ್ಯರು ಏಕ ಕಾಲದಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು. ಮೂಲತಃ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದವರಾದ ರತ್ನಯ್ಯ ಶೆಟ್ಟಿಕುಟುಂಬಸ್ಥರೇ ಈ ರೀತಿ ಅಚ್ಚರಿ ಮೂಡಿಸಿದವರು.

ಅಧಿಕಾರಿಗಳ ನಿರ್ಲಕ್ಷ್ಯಮಹಿಳಾ ಮೀಸಲು ಕ್ಷೇತ್ರದಲ್ಲಿ ಪುರುಷ ಅಭ್ಯರ್ಥಿಗೆ ವಿಜಯ!

ಕಳೆದ ಹಲವು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ವಲಸೆ ಬಂದಿರುವ ವೈಶ್ಯ ಸಮುದಾಯದ ಈ ಕುಟುಂಬ ಬಟ್ಟೆಅಂಗಡಿ ಇಟ್ಟುಕೊಂಡು ಇಲ್ಲಿಯೇ ನೆಲೆಯೂರಿದೆ. ರತ್ನಯ್ಯ ಶೆಟ್ಟಿಅವರ ಸಹೋದರರೊಬ್ಬರು ಸೋಮೇನಹಳ್ಳಿಯಿಂದ ಬಂದು ನೆಲೆಸಿದ್ದು, ಅವರಿಗೆ ಸೋಮೇನಹಳ್ಳಿ ಕುಟುಂಬ ಎಂದೇ ಹೆಸರು ಪಡೆದಿದೆ. ಈ ಎರಡೂ ಕುಟುಂಬಗಳ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಸೊಸೆಯಂದಿರು ಎಲ್ಲರೂ ಸೇರಿದಂತೆ ಒಟ್ಟು ಕುಟುಂಬದಲ್ಲಿ 106 ಮಂದಿ ಸದಸ್ಯರಿದ್ದಾರೆ. ಇವರು ನಗರದ 19ನೇ ವಾರ್ಡಿನ ಮತದಾರರಾಗಿದ್ದು, ಇವರೆಲ್ಲರೂ ಮದುವೆಗಳಾಗಿ ತಮ್ಮ ಪತ್ನಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೂ ಇವರೆಲ್ಲರೂ ಪ್ರತಿ ಚುನಾವಣೆಯಲ್ಲೂ ಹಬ್ಬ ಹರಿದಿನಗಳಂದು ಸೇರಿದಂತೆ ಒಟ್ಟಿಗೆ ಸೇರುವುದನ್ನು ಇವರು ರೂಡಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಡೀ ಕುಟುಂಬದ ಎಲ್ಲ ಸದಸ್ಯರೂ ಒಟ್ಟಿಗೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುತ್ತಾರೆ.

ನಗರದ 19ನೇ ವಾರ್ಡಿನಲ್ಲಿ ಈ ಕುಟುಂಬದ ಎಲ್ಲ ಸದಸ್ಯರ ಮತಗಳಿದ್ದು, ಸರ್ಕಾರಿ ಜೂನಿಯರ್‌ ಕಾಲೇಜಿನ ಮತಗಟ್ಟೆಸಂಖ್ಯೆ 37ರಲ್ಲಿ ಭಾನುವಾರ ಇವರು ಮತ ಚಲಾಯಿಸಿದರು. ಇವರ ಮತಗಳು ಪ್ರಸ್ತುತ ನಗರಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದು, ಇವರಲ್ಲಿ ಯಾರು ಯಾರಿಗೆ ಮತ ಚಲಾಯಿಸಿದ್ದಾರೆಂಬುದು ಮಾತ್ರ ನಿಗೂಢವಾಗಿದೆ.

Latest Videos
Follow Us:
Download App:
  • android
  • ios