ಹೊನ್ನಾವರ: ಅಭಿನವ ಕುಮಾರವ್ಯಾಸ ಎಂಬ ಬಿರುದಾಂಕಿತರಾಗಿದ್ದ ಸಾಹಿತಿ ವೆಂ.ಭ.ವಂದೂರ (ವೆಂಕಟ್ರಮಣ ಭಟ್)(74) ಭಾನುವಾರ ಮುಂಜಾನೆ ಹೊನ್ನಾವರ ತಾಲೂಕಿನ ವಂದೂರಿನಲ್ಲಿರುವ ತಮ್ಮ ಸ್ವಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಅವಿವಾಹಿತರಾಗಿದ್ದ ಅವರು, ಏಕಾಂಗಿಯಾಗಿ ವಾಸಿಸುತ್ತಿದ್ದರು. ಸಮಾಜದಲ್ಲಿನ ವಿದ್ಯಮಾನಗಳ ಬಗ್ಗೆ ಬೇಸತ್ತಿದ್ದ ಅವರು, ಒಂಟಿತನದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. 

ಈ ಹಿಂದೆ ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಆ ವೇಳೆ ಅಕ್ಕಪಕ್ಕದ ನಿವಾಸಿಗಳು ಇವರನ್ನು ರಕ್ಷಿಸಿದ್ದರು ಎಂದು ತಿಳಿದುಬಂದಿದೆ. ವಂದೂರ ಅವರು ತಮ್ಮ ದೇಹವನ್ನು ಸಹ ಮಣಿಪಾಲ ಆಸ್ಪತ್ರೆಗೆ ದಾನ ಮಾಡಿದ್ದರು. ಆದರೆ, ಶವಪರೀಕ್ಷೆ ನಡೆಸಿದ್ದರಿಂದ ದೇಹವನ್ನು ದಾನ ಮಾಡಲಾಗಿಲ್ಲ ಎಂದು ತಿಳಿದುಬಂದಿದೆ.