Asianet Suvarna News Asianet Suvarna News

ತಿಪಟೂರು ನಗರದಲ್ಲಿ ಮದ್ಯ ಮಾರಾಟ ನಿಷೇಧ

ತಿಪಟೂರು ನಗರದಲ್ಲಿ  ಶನಿವಾರ ಬೆಳಿಗ್ಗೆ 6 ಗಂಟೆಯಿಂದ 11ರ ಬೆಳಿಗ್ಗೆ 6 ಗಂಟೆಯವರೆಗೆ ತಿಪಟೂರು ನಗರದ 5 ಕಿ.ಮೀ. ವ್ಯಾಪ್ತಿಯಲ್ಲಿ ಒಣ ದಿನ

Liquor sale ban in Tipatur city snr
Author
First Published Dec 9, 2023, 9:05 AM IST

ತುಮಕೂರು: ತಿಪಟೂರು ನಗರದ ಹೆಸರಾಂತ ಶ್ರೀ ಸತ್ಯ ಗಣಪತಿ ಮೂರ್ತಿಯನ್ನು ಶನಿವಾರ, ಭಾನುವಾರ ವಿವಿಧ ಜಾನಪದ ಕಲಾ ತಂಡ, ನೃತ್ಯ ತಂಡಗಳೊಂದಿಗೆ ನಗರದ ವಿವಿಧ ಬೀದಿಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಮೆರವಣೆಗೆ ಮಾಡಿ ವಿಸರ್ಜನೆ ಮಾಡಲಿದ್ದು, ಈ ವಿಸರ್ಜನಾ ಮೆರವಣಿಗೆಯಲ್ಲಿ 50-60 ಸಾವಿರ ಜನ ಸೇರುವ ನಿರೀಕ್ಷೆ ಇರುವುದರಿಂದ ಶನಿವಾರ ಬೆಳಿಗ್ಗೆ 6 ಗಂಟೆಯಿಂದ 11ರ ಬೆಳಿಗ್ಗೆ 6 ಗಂಟೆಯವರೆಗೆ ತಿಪಟೂರು ನಗರದ 5 ಕಿ.ಮೀ. ವ್ಯಾಪ್ತಿಯಲ್ಲಿ ಒಣ ದಿನವೆಂದು ಘೋಷಿಸಿ, ಕೆಎಸ್‌ಬಿಸಿಎಲ್ ಡಿಪೋ ಹೊರತುಪಡಿಸಿ ಎಲ್ಲಾ ತರಹದ ಮದ್ಯದಂಗಡಿ ಮುಚ್ಚಿಸಿ ಮಧ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ.ಶ್ರೀನಿವಾಸ್ ಅವರು ಆದೇಶಿಸಿದ್ದಾರೆ.

ಇಂದು ವಿದ್ಯುತ್ ವ್ಯತ್ಯಯ

ತುಮಕೂರು: ಬೆವಿಕಂ ನಗರ ಉಪವಿಭಾಗ-2 ಸರಸ್ವತಿಪುರಂ ಶಾಖಾ ವ್ಯಾಪ್ತಿ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಶನಿವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ಮಲ್ಲಸಂದ್ರ, ಹಬ್ಬತ್ತಹಳ್ಳಿ, ಹಾಲನೂರು, ಅದಲಾಪುರ, ಮಲ್ಲಸಂದ್ರಪಾಳ್ಯ, ಕೊತ್ತಿಹಳ್ಳಿ, ದಿಣ್ಣೆಪಾಳ್ಯ, ಕುಂಕುಂಮ್ಮನಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ರೈತರಿಗೆ ತೆಂಗು ಸಸಿ/ಲಘು ಪೋಷಕಾಂಶಗಳ ವಿತರಣೆ

ತುಮಕೂರು: ತುಮಕೂರು ತಾಲೂಕಿನಲ್ಲಿ ತೋಟಗಾರಿಕೆ ಇಲಾಖೆಯಯಿಂದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕ್ರಮವಾಗಿ ಇಲಾಖೆಯ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಬೆಳೆಸಿದ ತೆಂಗು ಸಸಿಗಳನ್ನು ಹಾಗೂ ಲಘು ಪೋಷಕಾಂಶಗಳನ್ನು (ಬಾಳೆ ಸ್ಪೆಷಲ್ ಮತ್ತು ತರಕಾರಿ ಸ್ಪೆಷಲ್) ಉಚಿತವಾಗಿ ವಿತರಣೆ ಮಾಡಲಾಗುತ್ತಿದ್ದು, ರೈತರು ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕೋರಿದ್ದಾರೆ.

Follow Us:
Download App:
  • android
  • ios