Asianet Suvarna News Asianet Suvarna News

ಲಿಂಗನಮಕ್ಕಿ ಜಲಾಶಯ ಭರ್ತಿ, ನದಿ ಪಾತ್ರದ ಜನರೇ ಎಚ್ಚರ

ಲಿಂಗನಮಕ್ಕಿ ಅಣೆಕಟ್ಟು ವ್ಯಾಪ್ತಿ ಪ್ರದೇಶದ ಜನರಿಗೆ ಇದು ಮಹತ್ವದ ಸುದ್ದಿ.  ಲಿಂಗನಮಕ್ಕಿ ಡ್ಯಾಂನಲ್ಲಿ ನೀರಿನ ಸಂಗ್ರಹ  ಹೆಚ್ಚಿದ್ದು ಅಣೆಕಟ್ಟು ಕೆಳದಂಡೆ, ನದಿಪಾತ್ರದ ನಿವಾಸಿಗಳಿಗೆ ಎಚ್ಚರದಿಂದಿರುವಂತೆ ಕೆಪಿಸಿಎಲ್ ಸೂಚನೆ ನೀಡಿದೆ.

Linganamakki Dam Almost Full KPCL Issues awareness Notification
Author
Bengaluru, First Published Jul 23, 2018, 9:19 PM IST

ಶಿವಮೊಗ್ಗ[ಜು.23]  ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಸತತ ಮಳೆಯಿಂದ ಜಲಾಶಯ ಬಹುತೇಕ ಭರ್ತಿಯಾಗಿದೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಲಿಂಗನಮಕ್ಕಿ ಡ್ಯಾಂ ಕೆಳದಂಡೆ ಹಾಗೂ ಶರಾವತಿ ನದಿ ಪಾತ್ರದ ನಿವಾಸಿಗಳಿಗೆ, ಪ್ರವಾಹದ ಮೊದಲನೇ ಮುನ್ನೆಚ್ಚರಿಕೆ ಸಂದೇಶ ರವಾನಿಸಿದೆ.

ನಿರಂತರ ಮಳೆಯಿಂದ ಲಿಂಗನಮಕ್ಕಿ ಡ್ಯಾಂಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದ್ದು, ನೀರಿನ ಸಂಗ್ರಹ ಹೆಚ್ಚಳವಾಗುತ್ತಿದೆ. ಡ್ಯಾಂನ ಗರಿಷ್ಠ ಮಟ್ಟ 1819 ಅಡಿಯಾಗಿದ್ದು,
ಜು. 23 ರಂದು 1802.30 ಅಡಿ ನೀರು ಸಂಗ್ರಹವಾಗಿದೆ. 28,799 ಕ್ಯೂಸೆಕ್ ಒಳಹರಿವಿದೆ. 1694.10 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದೇ ರೀತಿಯಲ್ಲಿ ಡ್ಯಾಂಗೆ ಒಳಹರಿವು ಮುಂದುವರಿದು ಡ್ಯಾಂ ಗರಿಷ್ಠ ಮಟ್ಟ ತಲುಪಲಿದರೆ ಆಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಡ್ಯಾಂನಿಂದ ಯಾವುದೇ ಸಮಯದಲ್ಲಿ ಬೇಕಾದರೂ ಹೊರ ಬಿಡಲಾಗುವುದು.

ಆದ್ದರಿಂದ ಆಣೆಕಟ್ಟೆಯ ಕೆಳದಂಡೆ, ನದಿ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಜಾನುವಾರುಗಳನ್ನು ಬಿಡಬಾರದು ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಕಾರ್ಯನಿರ್ವಾಹಕ ಅಭಿಯಂತರ ಆರ್.ಶಿವಕುಮಾರ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಲಿಂಗನಮಕ್ಕಿ ಅಣೆಕಟ್ಟು ವ್ಯಾಪ್ತಿ ಪ್ರದೇಶದ ಜನರಿಗೆ ಇದು ಮಹತ್ವದ ಸುದ್ದಿ.  ಲಿಂಗನಮಕ್ಕಿ ಡ್ಯಾಂನಲ್ಲಿ ನೀರಿನ ಸಂಗ್ರಹ  ಹೆಚ್ಚಿದ್ದು ಅಣೆಕಟ್ಟು ಕೆಳದಂಡೆ, ನದಿಪಾತ್ರದ ನಿವಾಸಿಗಳಿಗೆ ಎಚ್ಚರದಿಂದಿರುವಂತೆ ಕೆಪಿಸಿಎಲ್ ಸೂಚನೆ ನೀಡಿದೆ.

Follow Us:
Download App:
  • android
  • ios