Asianet Suvarna News Asianet Suvarna News

ದಸರಾ ಹಬ್ಬದಂದೇ ಬೆಂಗಳೂರಿಗೆ ಸಂತಸದ ಸುದ್ದಿ ಕೊಟ್ಟ ನಮ್ಮ ಮೆಟ್ರೋ..!

ಸದ್ಯದಲ್ಲೇ ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್ ಮೆಟ್ರೋ ಸಂಚಾರ 

Likely Soon Start Baiyyappanahalli to Whitefield Namma Metro Service in Bengaluru grg
Author
First Published Oct 4, 2022, 7:30 PM IST

ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು(ಅ.04):  ಬೆಂಗಳೂರು ಅಂದ್ರೆ ಥಟ್ ಅಂತಾ ನೆನಪಾಗೋದು ಟ್ರಾಫಿಕ್. ಟ್ರಾಫಿಕ್ ಕಂಟ್ರೋಲ್ ಮಾಡೋದಕ್ಕಂತಲೇ ನಮ್ಮ ಮೆಟ್ರೋ ಶುರುವಾಯ್ತು. ಸದ್ಯಕ್ಕೆ ನಮ್ಮ ಮೆಟ್ರೋ ಸಂಚಾರ ಮಾಡ್ತಿರುವ ಕಡೆಗಳಲ್ಲಿ ಟ್ರಾಫಿಕ್ ಜಂಜಾಟಕ್ಕೂ ಬ್ರೇಕ್ ಬಿದ್ದಿದೆ. ಆದ್ರೆ ಬೈಯಪ್ಪನಹಳ್ಳಿ, ಕೆಆರ್ ಪುರಂ, ವೈಟ್ ಫೀಲ್ಡ್ ಈ ಐಟಿಬಿಟಿ ರಸ್ತೆಗಳಲ್ಲಿನ ಟ್ರಾಫಿಕ್ ಬಿಸಿ ಅನುಭವಿಸಿದವರಿಗೇ ಗೊತ್ತು. ತಮ್ಮ ದಿನದ ಅರ್ಧ ಜೀವನವನ್ನ ಲಕ್ಷಾಂತರ ಮಂದಿ ಈ ಟ್ರಾಫಿಕ್ ಅಲ್ಲೇ ಕಳೆಯುವಂತಾಗಿದೆ. ಈಗ ಇದೆಲ್ಲದಕ್ಕೂ ಮುಕ್ತಿ ಸಿಗುವ ಕಾಲ ಬಂದಿದೆ. ಟ್ರಾಫಿಕ್ ಕಿರಿಕಿರಿ ಇಲ್ಲದೇ ಸಂಚಾರ ಮಾಡುವ ಕನಸು ಈಗ ನನಸಾಗುತ್ತಿದೆ.  ಬಿಎಂಆರ್‌ಸಿಎಲ್ ಬೆಂಗಳೂರಿಗರಿಗೆ ದಸರಾ ವೇಳೆಯೇ ಗುಡ್ ನ್ಯೂಸ್ ಕೊಟ್ಟಿದೆ.

ಅಯ್ಯೋ ಇದೇನಪ್ಪಾ ಇಷ್ಟೊಂದು ಟ್ರಾಫಿಕ್ ಅಂತ ತಲೆಕೆಡಿಸಿಕೊಂಡಿದ್ದ ಐಟಿ ಮಂದಿಗೆ ಇದು ದೊಡ್ಡ ಮಟ್ಟದಲ್ಲಿ ಸಹಾಯವಾಗುತ್ತಿದೆ. ಹಲವು ವರ್ಷಗಳ ಕನಸು ಇದೇ ತಿಂಗಳು ನನಸಾಗ್ತಿರೋದು ಒಳ್ಳೆಯ ವಿಚಾರ. ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿವರೆಗಿನ ನೇರಳೆ ಮಾರ್ಗದಲ್ಲಿ ಲಕ್ಷಾಂತರ ಮಂದಿ ಪ್ರಯಾಣ ಮಾಡ್ತಾರೆ. ಈಗ ವೈಟ್ ಫೀಲ್ಡ್ ವರೆಗಿನ ಸಂಚಾರದಿಂದ ಐಟಿಬಿಟಿ ಮಂದಿ ಸೇರಿ ಲಕ್ಷಾಂತರ ಪ್ರಯಾಣಿಕರಿಗೆ ಇನ್ನಷ್ಟು ಸಹಾಯವಾಗಲಿದೆ. ಬೈಯ್ಯಪ್ಪನಹಳ್ಳಿ - ವೈಟ್‌ಫೀಲ್ಡ್ ಕಾಮಗಾರಿ ಸಂದರ್ಭದಲ್ಲಿನ ಕೆಲ ಅಡಚಣೆಗಳಿಂದ ಸ್ವಲ್ಪ ನಿಧಾನವಾದ್ರೂ ಎಲ್ಲವನ್ನೂ ಕ್ಲಿಯರ್ ಮಾಡಿ ಇದೇ ತಿಂಗಳು 25ಕ್ಕೆ ಟ್ರಯಲ್ ರನ್ ಆರಂಭ ಮಾಡಲು ಬಿಎಂಆರ್ ಸಿಎಲ್ ಸಜ್ಜಾಗಿದೆ.
ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್ ನಡುವೆ ಎಷ್ಟು ನಿಲ್ದಾಣಗಳಿವೆ.

ವೈಟ್‌ಫೀಲ್ಡ್‌-ಕೆ.ಆರ್‌.ಪುರದಲ್ಲಿ 15ರಿಂದ ಪರೀಕ್ಷಾರ್ಥ ಮೆಟ್ರೋ ರೈಲು ಓಡಾಟ

ಬೈಯಪ್ಪನಹಳ್ಳಿ - ವೈಟ್‌ಫೀಲ್ಡ್ ವರೆಗಿನ ಮೆಟ್ರೋ ಮಾರ್ಗದಲ್ಲಿ ಒಟ್ಟು 14 ನಿಲ್ದಾಣಗಳಿವೆ. ವೈಟ್ ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಸಾದರ ಮಂಗಲ, ನಲ್ಲೂರ ಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ ಪಾಳ್ಯ, ಮಹದೇವಪುರ, ಕೆಆರ್ ಪುರ, ಬೆನ್ನಿಗಾನಹಳ್ಳಿ, ಬೈಯಪ್ಪನ ಹಳ್ಳಿ. ಇವು ಬೈಯಪ್ಪನ ಹಳ್ಳಿ ಹಾಗೂ ವೈಟ್ ಫಿಲ್ಡ್ ನಡುವಿನ ನಿಲ್ದಾಣಗಳು. ಹೀಗಾಗಿ ಈ ಮಾರ್ಗ ಮಧ್ಯೆ  ಓಡಾಡ್ತಿದ್ದ ಅದೆಷ್ಟೋ ಜನರಿಗೆ ಮೆಟ್ರೋ ಸಂಚಾರ ಶುರುವಾದ್ರೆ ನೆಮ್ಮದಿಯಿಂದ ಓಡಾಡಬಹುದು. 

ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವಿನ 15.50 ಕಿ.ಮೀ ಟ್ರಯಲ್ ರನ್

ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ವರೆಗಿನ ಬಹುಬೇಡಿಕೆ ಇರೋ ಮಾರ್ಗದ ಉದ್ದ ೧೫ ಕಿಲೋಮೀಟರ್. 15ಕಿಮೀ ಉದ್ದದ ಮಾರ್ಗದಲ್ಲಿ ಇದೇ ತಿಂಗಳ 25 ಕ್ಕೆ ಟ್ರಯಲ್ ರನ್ ಆರಂಭವಾಗಲಿದೆ. ಬಳಿಕ 45 ದಿನಗಳಲ್ಲಿ ರೈಲ್ವೆ ಸೇಫ್ಟಿ ಕಮಿಷನರ್ ರಿಂದ ಪರೀಕ್ಷೆಯಾಗುತ್ತೆ. ಗುಣಮಟ್ಟ ಪರೀಕ್ಷೆಯಲ್ಲಿ ಯಶಸ್ವಿಯಾದ್ರೆ  ಕಮರ್ಷಿಯಲ್ ರನ್ ಆರಂಭ ಮಾಡಲು ಬಿಎಂ ಆರ್ ಸಿ ಎಲ್ ಪ್ಲಾನ್ ಮಾಡಿದೆ. 

ಈ ಮಾರ್ಗ ಫೈನಲ್ ಆದ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆ 8 ಲಕ್ಷಕ್ಕೇರೋ ನಿರೀಕ್ಷೆಯನ್ನು ಬಿಎಂ ಆರ್ ಸಿ ಎಲ್ ಹೊಂದಿದೆ. ನಿತ್ಯ ಲಕ್ಷಾಂತರ ಜನ ಮೆಟ್ರೋ ನಂಬಿ ಪ್ರಯಾಣ ಬೆಳೆಸೋ ಪ್ರಯಾಣಿಕರಿಗೆ ಮತ್ತಷ್ಟು ಮೆಟ್ರೋ ಮಾರ್ಗ ವಿಸ್ತರಣೆ ಖುಷಿ ತಂದಿದೆ.
 

Follow Us:
Download App:
  • android
  • ios