ಮುಂದಿನ ವಾರ ಕೊಲೆ ಆರೋಪಿ ದರ್ಶನ್‌ಗೆ ಬೆನ್ನು ನೋವಿನ ಶಸ್ತ್ರಚಿಕಿತ್ಸೆ?

ಈಗಾಗಲೇ ಶಸ್ತ್ರ ಚಿಕಿತ್ಸೆಗೆ ಒಪ್ಪಿಕೊಂಡಿದ್ದ ದರ್ಶನ್ ಅವರು, ಡಾ. ಅಜಯ್ ಹೆಗ್ಡೆ ಅವರ ಬಳಿ ಚಿಕಿತ್ಸೆಗಾಗಿ ನಟ ಧರ್‌ಜೊತೆ ಆಗಮಿಸಿದರು. ಶಸ್ತ್ರ ಚಿಕಿತ್ಸೆಗೂ ಮುನ್ನ ಪಡೆಯುವ ನರ್ವ್ ರೂಟ್ ಬ್ಲಾಕ್, ಎಪಿಡ್ಯೂರಲ್ ಇಂಜೆಕ್ಷನ್ ಪಡೆದರು. L5 & 51 ಸಮಸ್ಯೆಯಿಂದ ಬಳಲುತ್ತಿರುವ ನಟ ದರ್ಶನ್ ಗೆ ಈ ಇಂಜೆಕ್ಷನ್ ಕೆಲಸ ಮಾಡದಿದ್ದರೆ ಮೂರು ದಿನಗಳ ನಂತರ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದಾಗಿ ತಿಳಿಸಿದ್ದಾರೆ. 

Likely Back pain surgery to Actor Darshan on Next Week

ಮೈಸೂರು(ಡಿ.16):  ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ತೀವ್ರ ಬೆನ್ನು ನೋವಿಂದ ಬಳಲುತ್ತಿದ್ದು, ಬುಧವಾರ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದರು. ಮುಂದಿನ ವಾರ ವೈದ್ಯರು ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವ ಸಾಧ್ಯತೆ ಇದೆ. 

ಈಗಾಗಲೇ ಶಸ್ತ್ರ ಚಿಕಿತ್ಸೆಗೆ ಒಪ್ಪಿಕೊಂಡಿದ್ದ ದರ್ಶನ್ ಅವರು, ಡಾ. ಅಜಯ್ ಹೆಗ್ಡೆ ಅವರ ಬಳಿ ಚಿಕಿತ್ಸೆಗಾಗಿ ನಟ ಧರ್‌ಜೊತೆ ಆಗಮಿಸಿದರು. ಶಸ್ತ್ರ ಚಿಕಿತ್ಸೆಗೂ ಮುನ್ನ ಪಡೆಯುವ ನರ್ವ್ ರೂಟ್ ಬ್ಲಾಕ್, ಎಪಿಡ್ಯೂರಲ್ ಇಂಜೆಕ್ಷನ್ ಪಡೆದರು. L5 & 51 ಸಮಸ್ಯೆಯಿಂದ ಬಳಲುತ್ತಿರುವ ನಟ ದರ್ಶನ್ ಗೆ ಈ ಇಂಜೆಕ್ಷನ್ ಕೆಲಸ ಮಾಡದಿದ್ದರೆ ಮೂರು ದಿನಗಳ ನಂತರ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದಾಗಿ ತಿಳಿಸಿದ್ದಾರೆ. 

ನಟ ದರ್ಶನ್ ಮೈಸೂರು, ಪವಿತ್ರಾ ಗೌಡ ಹೊರ ರಾಜ್ಯಕ್ಕೆ ಹೋಗಲು ಕೋರ್ಟ್ ಅನುಮತಿ

ಈಗಾಗಲೇ ಸ್ಟೆಂಥನಿಂಗ್ ವರ್ಕೌಟ್ ಶುರುಮಾಡುವಂತೆ ವೈದ್ಯರು ಸೂಚಿಸಿದ್ದಾರೆ. ದೇಹದ ಮೇಲ್ಬಾಗಕ್ಕೆ ಮಾತ್ರ ವರ್ಕೌಟ್ ಮಾಡಲು ತಿಳಿಸಿದ್ದಾರೆ. ಈ ಮಧ್ಯೆ, ದರ್ಶನ್ ಅವರು ಕುಟುಂಬ ಸಮೇತ ಬುಧವಾರ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಶ್ರೀಅಹಲ್ಯ ದೇವಿ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 

ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರನೊಂದಿಗೆ ಆಗಮಿಸಿದ ದರ್ಶನ್, ಗರ್ಭಗುಡಿ ಬಳಿ ತೆರಳಿ ದೋಷ ನಿವಾರಣಾ ಪೂಜೆ ಸಲ್ಲಿಸಿ ನಂತರ ತಡೆ ಹೊಡೆಸಿರುವುದಾಗಿ ತಿಳಿದು ಬಂದಿದೆ. ಈ ವೇಳೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಅಪಾರ ಪ್ರಮಾಣ ಅಭಿಮಾನಿಗಳು ಇದ್ದರು.

ರೇಣುಕಾಸ್ವಾಮಿ ಕೊಲೆ ಕೇಸ್‌: ಪವಿತ್ರಾ ಹೆಗಲ ಮೇಲೆ ಕೈ ಹಾಕಿ ದರ್ಶನ್ ಸಾಂತ್ವನ

ಬೆಂಗಳೂರು: ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ಚಿತ್ರ ದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಇತರೆ ಆರೋಪಿಗಳು ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಜ.10 ರಂದು  ಹಾಜರಾಗಿದ್ದರು. ಈ ವೇಳೆ ಕೋರ್ಟ್ ಹಾಲ್‌ನಲ್ಲಿ ದರ್ಶನ್ ರನ್ನು ಕಂಡು ಗೆಳತಿ ಪವಿತ್ರಾ ಗೌಡ ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಂಡರು. ಇದರಿಂದ ದರ್ಶನ್ ಪವಿತ್ರಾ ಗೌಡ ಹತ್ತಿರಕ್ಕೆ ಹೋಗಿ ಹೆಗಲಮೇಲೆ ಕೈ ಹಾಕಿ ಸಾಂತ್ವನ ಹೇಳಿದ್ದರು. 

ರೇಣುಕಾಸ್ವಾಮಿ ಕೊಲೆ ಕೇಸ್‌: ದರ್ಶನ್‌, ಗ್ಯಾಂಗ್‌ಗೆ ಈಗ ಜಾಮೀನು ರದ್ದು ಆತಂಕ

ಆರೋಪಿಗಳ ಹಾಜರಾತಿ ದಾಖಲಿಸಿಕೊಂಡ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿತು. ಇದೇ ವೇಳೆ ಜ.12ರಿಂದ 16ವರೆಗೆ ಮೈಸೂರಿಗೆ ಹೋಗಲು ದರ್ಶನ್‌ಗೆ ನ್ಯಾಯಾಲಯ ಅನುಮತಿ ನೀಡಿತು. ಅದೇ ರೀತಿ ತನ್ನ ಫ್ಯಾಷನ್ ಡಿಸೈನ್ ಸಂಸ್ಥೆಗಾಗಿ ಕಚ್ಚಾವಸ್ತುಗಳನ್ನು ಖರೀದಿಸುವುದ ಕ್ಕಾಗಿ ಪವಿತ್ರಾ ಗೌಡಗೆ ಜ.15 ರಿಂದ ಫೆ.10ರ ವರೆಗೆ ಮುಂಬೈ ಹಾಗೂ ದೇಶದ ಇತರೆ ಪ್ರದೇಶಕ್ಕೆ ಹೋಗಲು ನ್ಯಾಯಾಲಯ ಅನಮತಿಸಿತು. ಇನ್ನು ನಾಗರಾಜ್ ಗೆ ಫೆ.24ವರೆಗೆ ಮೈಸೂರಿಗೆ ತೆರಳಲು, ರಾಘವೇಂದ್ರ, ಜಗದೀಶ್, ಅನುಕುಮಾ‌ರ್ ಜ.10ರಿಂದ ಫೆ.24ರವರೆಗೆ ಚಿತ್ರದುರ್ಗದ ತಮ್ಮ ಹುಟ್ಟೂರಿಗೆ ಹೋಗಲು ನ್ಯಾಯಾಲಯ ಅನುಮತಿ ನೀಡಿತ್ತು. 

ಕಣ್ಣಲ್ಲಿ ನೀರು: 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಜಾಮೀನು ನೀಡಿದ್ದ ಹೈಕೋರ್ಟ್, ಪ್ರಕರಣ ಕುರಿತ ಅಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗ ಬೇಕು ಎಂದು ಷರತ್ತು ವಿಧಿಸಿತ್ತು. ಶುಕ್ರವಾರ ವಿಚಾರಣೆ ನಿಗದಿಯಾಗಿದ್ದರಿಂದ ನಗರದ 57ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ಕೋರ್ಟ್‌ಗೆ ದರ್ಶನ್, ಪವಿತ್ರಾಗೌಡ, ನಾಗರಾಜು, ಜಗದೀಶ್, ಅನುಕುಮಾರ್, ರಾಘವೇಂದ್ರ ಹಾಜರಾಗಿದ್ದರು. ಇತರೆ ಆರೋಪಿಗಳ ಪರ ವಕೀಲರು ಹಾಜರಾತಿಗೆ ವಿನಾಯ್ತಿ ಕೋರಿ ಅರ್ಜಿ ಸಲ್ಲಿಸಿದ್ದರು. 

Latest Videos
Follow Us:
Download App:
  • android
  • ios