ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿದ ಎಲ್‌ಐಸಿ

ಗ್ರಾಹಕರ ನಂಬಿಕೆ ಉಳಿಸಿಕೊಂಡು ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಎಲ್‌ಐಸಿಯ ಪಾತ್ರ ಅಪಾರ ಎಂದು ಎಲ್‌ಐಸಿ ಹಿರಿಯ ಶಾಖಾಧಿಕಾರಿ ಗಾಳೆಪ್ಪ ತಳವಾರ್‌ ತಿಳಿಸಿದರು.

LIC has given employment to lakhs of people snr

 ತುಮಕೂರು :  ಗ್ರಾಹಕರ ನಂಬಿಕೆ ಉಳಿಸಿಕೊಂಡು ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಎಲ್‌ಐಸಿಯ ಪಾತ್ರ ಅಪಾರ ಎಂದು ಎಲ್‌ಐಸಿ ಹಿರಿಯ ಶಾಖಾಧಿಕಾರಿ ಗಾಳೆಪ್ಪ ತಳವಾರ್‌ ತಿಳಿಸಿದರು.

ಭಾರತೀಯ ಜೀವ ವಿಮಾ ನಿಗಮದಿಂದ 67ನೇ ವಿಮಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಲಕ್ಷಾಂತರ ವಿಮಾ ಪ್ರತಿನಿಧಿಗಳಿಗೆ ಎಲ್‌ಐಸಿ ಜೀವನ ರೂಪಿಸಿಕೊಟ್ಟಿದೆ. ವಿಮಾ ಪಾಲಿಸಿ ಕಾಯಿದೆ ಮೂಲಕ ಜನರ ಹಣ ಜನರ ಕಲ್ಯಾಣಕ್ಕಾಗಿ ಎನ್ನುವ ಸೂತ್ರದಲ್ಲಿ ಸಾಮಾಜಿಕ ಪರಿವರ್ತನೆಯಲ್ಲಿಯೂ ತನ್ನ ಪಾತ್ರವಹಿಸಿದೆ. ಪ್ರತೀ ವಿಭಾಗ ಮಟ್ಟದಲ್ಲಿ ಪ್ರತೀ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಂಸ್ಥೆ ನೀಡುತ್ತಿದೆ. ಎಲ್‌.ಐ.ಸಿ.ಯಲ್ಲಿ ಒಮ್ಮೆ ಆನ್‌ಲೈನ್‌ನಲ್ಲಿ ನೊಂದಣಿ ಮಾಡಿಕೊಂಡಲ್ಲಿ ಎಲ್‌.ಐ.ಸಿ. ಸಂಸ್ಥೆಯ ಎಲ್ಲಾ ಸೇವೆಗಳು ಮತ್ತು ಹೊಸ ಸ್ಕೀಂ ಗಳ ಕುರಿತಾದ ಮಾಹಿತಿಯು ಲಭ್ಯವಾಗಲಿದೆ, ಇದೀಗ ಎಲ್‌.ಐ.ಸಿ. ಸಹ ಡಿಜಿಟಲೀಕರಣವಾಗಿದ್ದು ನವೀನ ಮಾದರಿಯಲ್ಲಿ ಗ್ರಾಹಕರಿಗೆ ಹತ್ತಿರವಾಗಿದೆ ಎಂದು ತಿಳಿಸಿದರು.

ಜೀವನ್ ಕಿರಣ್ ಪಾಲಿಸಿ

 ಬೆಂಗಳೂರು (ಆ.4) :  ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ‘ಜೀವನ್‌ ಕಿರಣ್‌’ ಹೆಸರಿನ ಹೊಸ ವಿಮಾ ಪಾಲಿಸಿಯನ್ನು ರೂಪಿಸಿದ್ದು, ಇದು ಜು.27ರಿಂದ ಗ್ರಾಹಕರಿಗೆ ಲಭ್ಯವಿದೆ ಎಂದು ತಿಳಿಸಿದೆ.

ಈ ಪಾಲಿಸಿಯು ವೈಯಕ್ತಿಕ, ಉಳಿತಾಯ, ಜೀವ ವಿಮಾ ಪ್ರಯೋಜನವನ್ನು ಗ್ರಾಹಕರಿಗೆ ನೀಡುತ್ತದೆ. ದುಬಾರಿಯಲ್ಲದ ಮೊತ್ತಕ್ಕೆ ಹೆಚ್ಚಿನ ಜೀವ ವಿಮೆ ರಕ್ಷೆ ಬಯಸುವವರಿಗೆ ಸೂಕ್ತವಾಗಿದೆ. ಕನಿಷ್ಠ 10 ವರ್ಷಗಳಿಂದ 40 ವರ್ಷಗಳ ವರೆಗೆ ಈ ಪಾಲಿಸಿಯ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕನಿಷ್ಠ 18 ವರ್ಷದಿಂದ 65 ವರ್ಷ ವಯೋಮಾನದವರು ಅರ್ಹರಾಗಿರುತ್ತಾರೆ. ಧೂಮಪಾನ ಮಾಡುವವರಿಗೆ ಹಾಗೂ ಮಾಡದವರಿಗೆ ಪ್ರೀಮಿಯಂ ಮೊತ್ತದಲ್ಲಿ ವ್ಯತ್ಯಾಸವಿರುತ್ತದೆ. ಕನಿಷ್ಠ .3000 ಇನ್‌ಸ್ಟಾಲ್‌ಮೆಂಟ್‌ನಲ್ಲಿ ಅಥವಾ .30 ಸಾವಿರಗಳ ಏಕ ಪ್ರೀಮಿಯಂ ಮೂಲಕ ನಿಯಮಿತ ಪ್ರೀಮಿಯಂ ಪಾವತಿಸಿಕೊಂಡು ಹೋಗಲು ಅವಕಾಶಗಳಿವೆ. ಇದರಲ್ಲಿ ಸಾಧಾರಣ ಪಾಲಿಸಿಯು ಕನಿಷ್ಠ .15 ಲಕ್ಷದವರೆಗೆ ವಿಮಾ ಮೊತ್ತದ ಭರವಸೆ ಹೊಂದಿದೆ. .50 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಿಮಾ ಮೊತ್ತಕ್ಕೆ ಟೇಬಲ್‌ ಪ್ರೀಮಿಯಂನಲ್ಲಿ ರಿಯಾಯಿತಿಗಳು ಲಭ್ಯವಿದೆ ಎಂದು ತಿಳಿಸಿದೆ.

ಆಧಾರ್‌ ಆಧಾರಿತ ಭಾರತದ ಜನನ-ಮರಣ ನೋಂದಣಿ ವಿಶ್ವದಲ್ಲಿಯೇ ಅನನ್ಯ!

ಅರ್ಜಿ ಸಲ್ಲಿಕೆ ಹೇಗೆ?

 

ಹಂತ 1: ಎಲ್‌ಐಸಿ ನ ವೆಬ್‌ಸೈಟ್ https://www.licindia.in/ಗೆ ಲಾಗಿನ್ ಮಾಡಿ ಮತ್ತು 'ಆನ್‌ಲೈನ್‌ನಲ್ಲಿ ಪಾಲಿಸಿ ಖರೀದಿಸಿ' ಕ್ಲಿಕ್ ಮಾಡಿ 
ಹಂತ2 : :ಎಲ್‌ಐಸಿ ಯ ಜೀವನ್ ಕಿರಣ್(Jeevan kiran) ಆಯ್ಕೆಮಾಡಿ ಮತ್ತು ಅನ್‌ಲೈನ್‌ನಲ್ಲಿ ಖರೀದಿಸಲು ಕ್ಲಿಕ್ ಮಾಡಿ ಮೇಲೆ ಕ್ಲಿಕ್ ಮಾಡಿ 

ಹಂತ 3: ಸಂಪರ್ಕ ವಿವರಗಳನ್ನು ಭರ್ತಿ ಮಾಡಿ ಅಂದರೆ ಹೆಸರು, ಪ್ರವೇಶ ಐಡಿ ಮತ್ತು OTP ರಚಿಸಲು ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಇಮೇಲ್ ಐಡಿ ಮತ್ತು ಹತ್ತಿರದ ನಗರ. 

ಹಂತ 4: ಕ್ಯಾವ್ಯಾ, ನಮೂದಿಸಿ ಮತ್ತು ಸಲ್ಲಿಸಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್‌ನಲ್ಲಿ ನೀವು 9 ಅಂಕಿಗಳ ಪ್ರವೇಶ ಐಡಿ ಮತ್ತು OTP ಅನ್ನು ಸ್ವೀಕರಿಸುತ್ತೀರಿ.

ಹಂತ 5: OTP ನಮೂದಿಸಿ ಮತ್ತು ಮುಂದುವರಿಯಿರಿ. ಹಂತ ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡಲು ವಿಮಾ ಮೊತ್ತ ಮತ್ತು

ಹಂತ 6: ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡಲು ವಿಮಾ ಮೊತ್ತ ಮತ್ತು ಅವಧಿಯನ್ನು ನೀಡಿ, ರೇಡಿಯೋ ಬಟನ್ ಹೌದು ಕ್ಲಿಕ್ ಮಾಡಿ ಮತ್ತು ಫಾರ್ಮ್ ಅನ್ನು ಭರ್ತಿ ಮಾಡಲು ಮುಂದುವರಿಯಿರಿ.

ಹಂತ 7: ವಿವರಗಳನ್ನು ದೃಢೀಕರಿಸಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಮಾವತಿಗೆ ಮುಂದುವರಿಯಿರಿ.

ಹಂತ 8: ಅಗತ್ಯವಿರುವ ಎಲ್ಲಾ ದಾಖಲೆಗಳನ್ನು LIC ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ. ಲಿಂಕ್ ಅನ್ನು ನಿಮಗೆ ಹಂಚಿಕೊಳ್ಳಲಾಗುತ್ತದೆ.ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ ವೈದ್ಯಕೀಯೇತರ ಪಕರಣಗಳನ್ನು ಪೂರ್ಣಗೊಳಿಸಲಾಗುತ್ತದೆ.

ತಿಂಗಳಲ್ಲಿ ಅದಾನಿ ಕಂಪನಿಗೆ 12 ಲಕ್ಷ ಕೋಟಿ ನಷ್ಟ; ಮಾಲೀಕ ಗೌತಮ್‌ ಅದಾನಿ ಆಸ್ತಿ 6.5 ಲಕ್ಷ ಕೋಟಿ ಇಳಿಕೆ

ಹಂತ 9: ನಿಮ್ಮ ಸ್ವಯಂ-ವೀಡಿಯೊ ಪರಿಶೀಲನೆಯನ್ನು ಆನ್‌ಲೈನ್‌ನಲ್ಲಿ ಮಾಡಿ. 'ಅಂಗೀಕೃತ' ಅಂಡರ್‌ರೈಟಿಂಗ್ ನಿರ್ಧಾರವನ್ನು ಸ್ವೀಕರಿಸಿದ ನಂತರ, LIC ಪಾಲಿಸಿ ಸಂಖ್ಯೆಯನ್ನು ನಿಯೋಜಿಸುತ್ತದೆ ಮತ್ತು ಮೊದಲ ಪ್ರೀಮಿಯಂ ರಸೀದಿ, ಪಾಲಿಸಿ ಡಾಕ್ಯುಮೆಂಟ್‌ನ ಸಾಫ್ಟ್ ಕಾಪಿ ಮತ್ತು ಇತರ ದಾಖಲೆಗಳನ್ನ ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ತಲುಪಿಸುತ್ತದೆ.ನೀತಿ ಕಾಗದವನ್ನು ಹಾರ್ಡ್ ಕಾಪಿಯಲ್ಲಿ ನಿಮ್ಮ ನೋಂದಾಯಿತ ವಿಳಾಸಕ, ಮೇಲ್ ಮಾಡಲಾಗುತ್ತದೆ.

Latest Videos
Follow Us:
Download App:
  • android
  • ios