Asianet Suvarna News Asianet Suvarna News

ಯುವಕರಲ್ಲಿ ಪರಿಸರ ಪ್ರಜ್ಞೆ ಬೆಳೆಯಲಿ: ಸರಸ್ವತಿ

ನೀರು ನಮ್ಮ ಜೀವ ಜಲ. ಇತ್ತೀಚಿನ ದಿನಗಳಲ್ಲಿ ಮಾನವನ ಹಲವು ಚಟುವಟಿಕೆಗಳಿಂದ ನೀರು ಬಹಳ ವೇಗವಾಗಿ ಕಲುಷಿತಗೊಳ್ಳುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಜಾಗರೂಕರಾಗಬೇಕು. ಮುಖ್ಯವಾಗಿ ಯುವಕರಲ್ಲಿ ಪರಿಸರ ಪ್ರಜ್ಞೆ ಮತ್ತಷ್ಟುಬೆಳೆಯಬೇಕು ಎಂದು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ಪಿ) ನಿರ್ದೇಶಕಿ ಸರಸ್ವತಿ ತಿಳಿಸಿದರು.

Let youth develop environmental awareness: Saraswati snr
Author
First Published Mar 24, 2023, 5:44 AM IST

  ಮೈಸೂರು :  ನೀರು ನಮ್ಮ ಜೀವ ಜಲ. ಇತ್ತೀಚಿನ ದಿನಗಳಲ್ಲಿ ಮಾನವನ ಹಲವು ಚಟುವಟಿಕೆಗಳಿಂದ ನೀರು ಬಹಳ ವೇಗವಾಗಿ ಕಲುಷಿತಗೊಳ್ಳುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಜಾಗರೂಕರಾಗಬೇಕು. ಮುಖ್ಯವಾಗಿ ಯುವಕರಲ್ಲಿ ಪರಿಸರ ಪ್ರಜ್ಞೆ ಮತ್ತಷ್ಟುಬೆಳೆಯಬೇಕು ಎಂದು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ಪಿ) ನಿರ್ದೇಶಕಿ ಸರಸ್ವತಿ ತಿಳಿಸಿದರು.

ಮೈಸೂರಿನ ಆರ್‌ಎಲ್‌ಎಚ್‌ಪಿ ವತಿಯಿಂದ ವಿಶ್ವ ನೀರಿನ ದಿನಾಚರಣೆ ಪ್ರಯುಕ್ತ ಕರ್ನಾಟಕ ಯೂತ್‌ ನೆಟ್ವರ್ಕ್ ತಂಡದ ಯುವಕರಿಂದ ನಂಜನಗೂಡು ದೇವಸ್ಥಾನದ ಬಳಿ ಜಾಗೃತಿ ಜಾಥಾ ಹಾಗೂ ಕಬಿನಿ ನದಿ ದಡದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೀರನ್ನು ಸಂರಕ್ಷಿಸುವ ಕರ್ತವ್ಯ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಿಲ್ಲ. ಈ ನಿಟ್ಟಿನಲ್ಲಿ ಆರ್‌ಎಲ್‌ಎಚ್‌ಪಿ ಸಂಸ್ಥೆಯು ಬಹಳ ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದೆ ಎಂದರು.

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಭೂಮಿ ಜೀವ ಗ್ರಹ ಆಗಿರುವುದು ನೀರಿನಿಂದ. ಕುಡಿಯುವ ನೀರು ಬಹಳ ಕಡಿಮೆ ಪ್ರಮಾಣದಲ್ಲಿ ನಮಗೆ ಲಭ್ಯವಿದೆ. ಅದನ್ನು ವ್ಯರ್ಥವಾಗದಂತೆ ಹಾಗೂ ಕಲುಷಿತಗೊಳಿಸದಂತೆ ಜಾಗರೂಕವಾಗಿ ಬಳಸಬೇಕಿದೆ. ಮುಂದಿನ ದಿನಗಳಲ್ಲಿ ಮಹಾ ಯುದ್ಧವೇನಾದರೂ ಸಂಭವಿಸಿದರೆ ಅದು ನೀರಿಗಾಗಿಯೇ ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ದೇವಸ್ಥಾನದ ಮುತ್ತಲಿನ ರಸ್ತೆಗಳಲ್ಲಿ ನೀರಿನ ಪ್ರಾಮುಖ್ಯತೆಯನ್ನು ಸಾರುವ ಘೋಷಣೆ ಕೂಗುತ್ತಾ ಮೆರವಣಿಗೆ ಸಾಗಿ, ನದಿಯ ದಡದಲ್ಲಿ ಪ್ಲಾಸ್ಟಿಕ್‌, ಬಟ್ಟೆ, ಗಾಜು ಹಾಗೂ ಮುಂತಾದ ಅನುಪಯುಕ್ತ ವಸ್ತುಗಳನ್ನು ನೀರಿನಿಂದ ಬೇರ್ಪಡಿಸಿ ಸುಮಾರು 130 ಕೆಜಿ ತ್ಯಾಜ್ಯ ಸಂಗ್ರಹಿಸಲಾಯಿತು.

ಕರ್ನಾಟಕ ಯೂತ್‌ ನೆಟ್ವರ್ಕ್ನ ಯುವ ಪ್ರತಿನಿಧಿ ಶಾಲಿನಿ, ಆರ್‌ಎಲ್‌ಎಚ್‌ಪಿಯ ಅಂಜಲಿ ಹಾಗೂ ವಿವಿಧ ತಾಲೂಕಿನ ಯುವಕರು ಪಾಲ್ಗೊಂಡಿದ್ದರು.

ಜಲ ಮೂಲ ನಾಶದಿಂದ ಪರಿಸರಕ್ಕೆ ಸಮಸ್ತೆ

  ಸಾಲಿಗ್ರಾಮ :  ಜಲಮೂಲಗಳನ್ನು ನಾಶ ಪಡಿಸುವುದು ಜೀವ ಸಂಕುಲಕ್ಕೆ ವಿಷವಿದ್ದಂತೆ ಎಂದು ಐಎಸ್‌ಎ ಜಿಲ್ಲಾ ತಂಡದ ನಾಯಕ ಆದರ್ಶ ಹೇಳಿದರು.

ಜಲಜೀವನ… ಮಿಷನ್‌ ಯೋಜನೆಯಡಿಯಲ್ಲಿ ಜಿಪಂ ಮೈಸೂರು, ತಾಪಂ ಸಾಲಿಗ್ರಾಮ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ ಹಾಗೂ ಭಗೀರಥ ಸಂಸ್ಥೆಯ ಸಯೋಗದೊಂದಿಗೆ ಯೋಗ ನರಸಿಂಹ ಸ್ವಾಮಿ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಿ, ಗ್ರಾಪಂ ಮುಂದಿನ ದಿನಗಳಲ್ಲಿ ಈ ಕಲ್ಯಾಣಿಯನ್ನು ಸುಸ್ಥಿರತೆ ಮತ್ತು ಶುಚಿತ್ವದಿಂದ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ ನಂತರ ಅವರು ಹಸ್ತಾಂತರಿಸಿದರು.

ಗ್ರಾಪಂ ಅಧ್ಯಕ್ಷೆ ಲಕ್ಷ್ಮೇ ಸೋಮಶೇಖರ್‌, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೆ.ಆರ್‌. ನಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಜಾರಾಮ…, ಸಹಾಯಕ ಎಂಜಿನಿಯರ್‌ ಮೋಹನ್‌, ಪಿಡಿಒ ಮಂಜುನಾಥ್‌, ಪಂಚಾಯ್ತಿ ಸದಸ್ಯರಾದ ಪ್ರಕಾಶ್‌, ಎಸ್‌.ಕೆ. ಬಲರಾಮ…, ಕಾರ್ಯದರ್ಶಿ ಅಶ್ವಿನಿ, ಮುಖಂಡರಾದ ದಿನೇಶ್‌, ಯೋಗ ನರಸಿಂಹಸ್ವಾಮಿ ಸೇವಾ ಸಮಿತಿಯ ಸದಸ್ಯ ಕಾಳೇಗೌಡರು, ಕೃಷ್ಣೇಗೌಡ, ವೆಂಕಟೇಶ್‌, ಜಲ ಜೀವನ್‌ ಮಿಷನ್‌ ಯೋಜನೆಯ ಮಾಹಿತಿ ಶಿಕ್ಷಣ ಮತ್ತು ಸಂವಹನ ತಜ್ಞ ಎಚ್‌.ಪಿ. ಮಹೇಶ್‌, ಪ್ರಶಾಂತ್‌, ನಾಗೇಶ್‌ ಹಾಗೂ ಪ್ರಸನ್ನ, ಗ್ರಾಪಂ ಸಿಬ್ಬಂದಿ ಮಧು, ಮರೀಗೌಡ, ವಸಂತ್‌ ಇದ್ದರು.

ಜಲಮೂಲಗಳನ್ನು ಜತನದಿಂದ ಕಾಪಾಡಿ

 ಕೆರೆಗಳು ಊರಿನ ಜಲಮೂಲವಾಗಿದ್ದು ಅದನ್ನು ಜತನದಿಂದ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು.

ತಾಲೂಕಿನ ಹೊನ್ನೆಸರದಲ್ಲಿ ವಿರೂಪಾಕ್ಷ ಕೆರೆ ಸಮಿತಿ ಮತ್ತು ಭೀಮನಕೋಣೆ ಕವಿಕಾವ್ಯ ಟ್ರಸ್ಟ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿರೂಪಾಕ್ಷ ಕೆರೆಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆರೆ ನಮ್ಮ ಜೀವನಾಡಿ. ನೆಮ್ಮದಿಯ ಜೀವನಕ್ಕೆ ಮೂಲ ಎಂದರು.

ಊರಿನಲ್ಲಿರುವ ಕೆರೆಗಳನ್ನು ನೋಡಿದರೆ ಆ ಊರಿನ ಸ್ಥಿತಿಗತಿ ಅರ್ಥವಾಗುತ್ತದೆ. ಯಾವ ಊರಿನ ಕೆರೆಯಲ್ಲಿ ನೀರು ಸಮೃದ್ಧವಾಗಿ ತುಂಬಿಕೊಂಡಿರುತ್ತದೆಯೋ, ಆ ಊರಿನ ಜನರು ಬೇಸಾಯ ಮಾಡಿಕೊಂಡು ಸಮೃದ್ಧವಾಗಿದ್ದಾರೆಂದು ತಿಳಿದುಕೊಳ್ಳಬಹುದು. ಯಾವ ಊರಿನಲ್ಲಿ ನೀರಿಗಾಗಿ ಮನೆಮುಂದೆ ಡ್ರಮ್‌ ಇರಿಸಲಾಗಿದೆಯೋ ಆ ಊರಿನಲ್ಲಿ ನೀರಿನ ಸಮಸ್ಯೆ ಇದೆ ಎನ್ನುವುದನ್ನು ಮೇಲ್ನೋಟಕ್ಕೆ ಅರ್ಥ ಮಾಡಿಕೊಳ್ಳಬಹುದು ಎಂದರು.

ನಾವು ಕೆರೆಯನ್ನು ಸಂರಕ್ಷಣೆ ಮಾಡಿದರೆ ಕೆರೆಗೇನೂ ಲಾಭವಿಲ್ಲ. ಬದಲಾಗಿ ನಮ್ಮ ಸಮೃದ್ಧ ಜೀವನಕ್ಕೆ ಅದು ಸಾಕ್ಷಿಯಾಗಲಿದೆ. ಈ ಗ್ರಾಮದ ಜನರು ತಮ್ಮೂರಿನ ಕೆರೆಯನ್ನು ಸಂರಕ್ಷಣೆ ಮಾಡಿಕೊಳ್ಳುವಲ್ಲಿ ತೋರಿಸುತ್ತಿರುವ ಆಸಕ್ತಿ ಇತರೆ ಗ್ರಾಮಗಳ ಜನರಿಗೆ ಮಾದರಿಯಾಗಬೇಕು ಎಂದು ಹೇಳಿದರು.

Follow Us:
Download App:
  • android
  • ios