ಸಂಸದ ಪ್ರತಾಪ್ ಸಿಂಹ ಅವರ ಕೊಡುಗೆ ಏನು ಎಂದು ತಿಳಿಸಲಿ- ಕೆ. ವೆಂಕಟೇಶ್
ಪಿರಿಯಾಪಟ್ಟಣ ತಾಲೂಕಿಗೆ ತನ್ನ ಕೊಡುಗೆ ಏನು ಎಂದು ಹೇಳದೆ ಇನ್ನೊಬ್ಬರ ಅಭಿವೃದ್ಧಿಯನ್ನು ಹೊಗಳುತ್ತಿರುವ ಸಂಸದ ಪ್ರತಾಪ್ ಸಿಂಹ ಅವರು ತನ್ನ ಕೊಡುಗೆ ಏನು ಎಂದು ತಿಳಿಸಲಿ ಎಂದು ಮಾಜಿ ಶಾಸಕ ಕೆ. ವೆಂಕಟೇಶ್ ಹೇಳಿದರು.
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿಗೆ ತನ್ನ ಕೊಡುಗೆ ಏನು ಎಂದು ಹೇಳದೆ ಇನ್ನೊಬ್ಬರ ಅಭಿವೃದ್ಧಿಯನ್ನು ಹೊಗಳುತ್ತಿರುವ ಸಂಸದ ಪ್ರತಾಪ್ ಸಿಂಹ ಅವರು ತನ್ನ ಕೊಡುಗೆ ಏನು ಎಂದು ತಿಳಿಸಲಿ ಎಂದು ಮಾಜಿ ಶಾಸಕ ಕೆ. ವೆಂಕಟೇಶ್ ಹೇಳಿದರು.
ಗ್ರಾಮದಲ್ಲಿ ಉಪ್ಪಾರ ಜನಾಂಗದ ಗ್ರಾಪಂ ಸದಸ್ಯ ಅಯ್ಯರ್ ಗಿರೀಶ್ ಹಾಗೂ ಜನಾಂಗದ ಹಲವು ಮುಖಂಡರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸದ ಪ್ರತಾಪ್ ಸಿಂಹ ಅವರು ತಾಲೂಕಿಗೆ ಒಂದರಿಂದ ಒಂದೂವರೆ ಕೋಟಿ ರು. ಮಾತ್ರ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದು, ಅದರಿಂದ ನಾನು ಮಾಡಿದ 3 ಸಾವಿರ ಕೋಟಿ ಅಭಿವೃದ್ಧಿಯನ್ನು ನೋಡಿದ್ದರು, ಅವರು ಮಾಜಿ ಶಾಸಕ ಕೆ. ವೆಂಕಟೇಶ್ ಅವರು ಒಂದು ಚೂರು ಕುಡಿಯಲು ನೀರು ಸಹ ಕೊಡಲಿಲ್ಲವೆಂಬ ಆರೋಪ ಮಾಡುತ್ತಿದ್ದಾರೆ, ತಾಲೂಕಿನ ಕಣಗಾಲು ಗ್ರಾಮದಲ್ಲಿ 150 ಕೋಟಿ ರು. ವೆಚ್ಚದಲ್ಲಿ ಸುಮಾರು 70 ಹಳ್ಳಿಗೆ ಕುಡಿಯುವ ನೀರನ್ನು ಕೊಟ್ಟಿದ್ದೇನೆ, ಅಲ್ಲದೆ ರೈತರ ಅಭಿವೃದ್ಧಿಗಾಗಿ ಸುಮಾರು 150 ಕೆರೆ ನೀರು ತುಂಬಿಸುವ ಯೋಜನೆಯನ್ನು ಸಿದ್ದರಾಮಯ್ಯನವರ ಕೈಯಿಂದ ಉದ್ಘಾಟನೆ ಮಾಡಿಸಿದ್ದೇನೆ, ಬೆಟ್ಟದಪುರದಲ್ಲಿ ಸುಮಾರು 200 ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ, ಇದನ್ನು ನೋಡಿರುವ ಪ್ರತಾಪ್ ಸಿಂಹ ಅವರು ಅಭಿವೃದ್ಧಿಯನ್ನು ಮಾತನಾಡದೆ ಇನ್ನೊಬ್ಬರು ಮಾಡಿದ ರಸ್ತೆ ಚರಂಡಿ ಅಭಿವೃದ್ಧಿಯನ್ನು ಶಾಸಕರು ತಾಲೂಕನ್ನು ಸಿಂಗಾಪುರ ಮಾಡಿದ್ದಾರೆ ಎಂದು ಪ್ರತಾಪ್ ಸಿಂಹ ಮಾತನಾಡುತ್ತಿದ್ದಾರೆ, ತನ್ನದೇ ಪಕ್ಷದ ಅಭ್ಯರ್ಥಿಯ ಪರ ಮತ ಕೇಳದೆ ಇನ್ನೊಬ್ಬರನ್ನು ಗೆಲ್ಲಿಸಿ ಎಂದು ಹೇಳುತ್ತಿರುವುದು ಕುರುಕ್ಷೇತ್ರದ ಶಕುನಿ ಇದ್ದಂತೆ ಎಂದು ಟೀಕಿಸಿದರು.
ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್, ತಾಲೂಕು ಕಾಂಗ್ರೆಸ… ಮುಖಂಡರಾದ ಡಿ.ಟಿ. ಸ್ವಾಮಿ, ರಹಮದ್ ಜಾನ್ ಬಾಬು, ಮಾಸ್ಟರ್ ಮೋಹನ್, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷ ತಹಿರ ಪಾಷಾ, ತಾಪಂ ಮಾಜಿ ಸದಸ್ಯ ಕುಂಜಪ್ಪ ಕರ್ನಾಡ್ ಇತರರು ಇದ್ದರು.
ಇದು ಎಚ್ಚರಿಕೆ
ಬೆಳಗಾವಿ (ಮಾ.24): ಮೋದಿ ಸರ್‌ನೇಮ್ ಕೇಸ್‌ನಲ್ಲಿ ದೋಷಿಯಾಗಿರುವ ರಾಹುಲ್ ಗಾಂಧಿಯ ಸಂಸದ ಸ್ಥಾನವನ್ನು ಲೋಕಸಭಾ ಕಾರ್ಯಾಲಯ ಅನರ್ಹ ಮಾಡಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ಇನ್ನು ಮುಂದೆ ರಾಜಕೀಯ ಎದುರಾಳಿಗಳಿರಬಹುದು ಅಥವಾ ಯಾರ ಬಗ್ಗೆಯೂ ಇರಬಹುದು ಬಾಯಿಗೆ ಬಂದ ಹಾಗೇ ಮಾತನಾಡುವಂಥದ್ದು, ಅವಹೇಳನಕಾರಿಯಾಗಿ ಮಾತನಾಡುವಂತದ್ದು ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೀಡಲಾಗಿರುವ ಗಟ್ಟಿಯಾದ ಸಂದೇಶ ಇದು. ಇವತ್ತಿನ ಘಟನೆ ಈ ಸಂದೇಶ ರವಾನಿಸಿದೆ ಅಂತಾ ಖಚಿತವಾಗಿ ಅನಿಸುತ್ತಿದೆ ಎಂದು ಬೆಳಗಾವಿ ಜಿಲ್ಲೆ ಗೋಕಾಕನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ರಾಜಕೀಯ ಏನೇ ಇರಲಿ ತಂದೆ, ತಾಯಿ ಬಗ್ಗೆ ಮಾತನಾಡುವಂಥದ್ದು, ಅವರ ಬಗ್ಗೆ ಅವಹೇಳನವಾಗಿ ಮಾತನಾಡುವಂತದ್ದು ಬಾಯಿಗೆ ಬಂದ ಹಾಗೇ ಆರೋಪ ಮಾಡುವಂಥದ್ದು, ಕುಟುಂಬವನ್ನು ಅವಮಾನ ಮಾಡುವಂತಹ ಪ್ರಯತ್ನ ಯಾರೂ ಮಾಡಬಾರದು. ಇಂತಹ ರಾಜಕೀಯ ದುರ್ನಡತೆಗೆ ಇನ್ನುಮುಂದೆ ಕಡಿವಾಣ ಬೀಳಬೇಕು. ರಾಹುಲ್ ಗಾಂಧಿಯನ್ನ ವ್ಯಕ್ತಿಗತವಾಗಿ ನೋಡುತ್ತಿಲ್ಲ. ಈ ರೀತಿ ಮಾಡುವ ಎಲ್ಲರಿಗೂ ಎಚ್ಚರಿಕೆ ಗಂಟೆ ಎಂದ ಪ್ರತಾಪ್ ಸಿಂಹ ಹೇಳಿದ್ದಾರೆ.
Rahul Gandhi ಪಾಲಿಗೆ ಆರಂಭ ಮಾತ್ರ, ಮಾಜಿ ಸಂಸದನ ಮೇಲಿದೆ ಇನ್ನೂ ನಾಲ್ಕು ಮಾನಹಾನಿ ಕೇಸ್!
ಈ ಕುರಿತಾಗಿ ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಅಶ್ವತ್ಥ್ ನಾರಾಯಣ್, ರಾಹುಲ್ ಗಾಂಧಿ ಸಂಸತ್ ಸ್ಥಾನದಿಂದ ಅನರ್ಹಗೊಂಡಿರುವುದು ಕಾನೂನಿನ ಪ್ರಕ್ರಿಯೆ. ಹಾಗಾಗಿ ಈ ಬಗ್ಗೆ ಮಾತನಾಡುವುದಕ್ಕೆ ಏನು ಇಲ್ಲ ಎಂದಿದ್ದಾರೆ. ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರನ್ನು ಹೆದರಿಸಿ ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅಂತಹ ಸಂಸ್ಕ್ರತಿ ನಮ್ಮ ಪಕ್ಷದಲ್ಲಿಲ್ಲ. ಹೇಳಿಕೆ ನೀಡಿದವರನ್ನೆ ಈ ಬಗ್ಗೆ ಕೇಳಬೇಕು ಎಂದರು. ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದೆ. ಅವರ ಹಾಗೂ ಬಿ.ಎಲ್.ಸಂತೋಷ್ ನಡುವೆ ಯಾವುದೇ ಫೈಟ್ ಇಲ್ಲ. ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಅವರನ್ನೆ ಪ್ರಶ್ನೆ ಕೇಳಿ ಎಂದು ಕ್ಷೇತ್ರ ಹುಡುಕಾಟದ ಬಗ್ಗೆ ಪ್ರತಿಕ್ರಿಯಿಸಿದರು.