Asianet Suvarna News Asianet Suvarna News

ಬರದ ಪರಿಸ್ಥಿತಿಯಲ್ಲಿ ಕೇಂದ್ರ ಮಧ್ಯೆ ಪ್ರವೇಶಿಸಿ ರಾಜ್ಯಕ್ಕೆ ನ್ಯಾಯ ದೊರಕಿಸಲಿ : ಶಾಸಕ ಕೆಎಂ ಶಿವಲಿಂಗೇಗೌಡ

ರಾಜ್ಯದಲ್ಲಿ ಮಳೆ ಇಲ್ಲದೆ ನಾಡು ಸಮಸ್ಯೆಗೆ ಸಿಲುಕಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುತ್ತಿರುವುದು ಎಷ್ಟು ಸರಿ ಕೇಂದ್ರ ಸರ್ಕಾರ ಎರಡೂ ರಾಜ್ಯಗಳನ್ನು ಕರೆಸಿ ನ್ಯಾಯ ದೊರಕಿಸಿಕೊಡುವ ಅಗತ್ಯವಿದೆ ಎಂದು ಶಾಸಕ ಕೆಎಂ ಶಿವಲಿಂಗೇಗೌಡ ಹೇಳಿದರು.

Let the Center intervene in the drought situation and get justice for the state: MLA KM Shivalingegowda snr
Author
First Published Nov 2, 2023, 8:54 AM IST

 ಅರಸೀಕೆರೆ :  ರಾಜ್ಯದಲ್ಲಿ ಮಳೆ ಇಲ್ಲದೆ ನಾಡು ಸಮಸ್ಯೆಗೆ ಸಿಲುಕಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುತ್ತಿರುವುದು ಎಷ್ಟು ಸರಿ ಕೇಂದ್ರ ಸರ್ಕಾರ ಎರಡೂ ರಾಜ್ಯಗಳನ್ನು ಕರೆಸಿ ನ್ಯಾಯ ದೊರಕಿಸಿಕೊಡುವ ಅಗತ್ಯವಿದೆ ಎಂದು ಶಾಸಕ ಕೆಎಂ ಶಿವಲಿಂಗೇಗೌಡ ಹೇಳಿದರು.

ನಗರದ ಮಾದರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭವಂತ ವಿದ್ಯಾರ್ಥಿಗಳನ್ನು, ಸಮಾಜಸೇವಕರನ್ನು ಅಭಿನಂದಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಕ್ಕೂಟ ವ್ಯವಸ್ಥೆ ಒಪ್ಪಿಕೊಂಡು ಅರ್ಧ ಶತಮಾನ ಕಳೆದರೂ ರಾಜ್ಯ ರಾಜ್ಯಗಳ ನಡುವೆ ನೆಲ, ಜಲಕ್ಕೆ ಸಂಬಂಧಿಸಿದಂತೆ ಇರುವ ಭಿನ್ನಾಭಿಪ್ರಾಯ ಹೀಗೆ ಮುಂದುವರಿದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಮಹಾರಾಷ್ಟ್ರದಲ್ಲಿಯೂ ಸಹ ನಮ್ಮ ಕನ್ನಡಿಗರು ಬೃಹತ್ ಕಾರ್ಯಕ್ರಮ ಮಾಡುತ್ತಿರುವುದು ನಮಗೆ ಹೆಮ್ಮೆ ತಂದಿದೆ. ಕನ್ನಡ ನಾಡಿನಲ್ಲಿ ಪ್ರಕೃತಿಯ ಸಂಪತ್ತು ಹೇರಳವಾಗಿದೆ. ಖನಿಜ ಸಂಪತ್ತನ್ನು ಇಲ್ಲಿಯೇ ಬಳಸಿಕೊಂಡು ಕೈಗಾರಿಕೆ ಸ್ಥಾಪಿಸುವ ಮೂಲಕ ಉದ್ಯೋಗವನ್ನು ನೀಡಬೇಕು ಎಂಬ ಪರಿಕಲ್ಪನೆಯನ್ನು ಅವರು ಹೇಳಿದರು. ಅನೇಕ ಕವಿಗಳನ್ನು ಕೊಟ್ಟ ನಾಡು ನಮ್ಮದು ದಾರಾ ಬೇಂದ್ರೆ ಕುವೆಂಪು ಡಿವಿಜಿ ಮೊದಲಾದ ಕವಿಗಳನ್ನು ಸ್ಮರಿಸಿದರು.

ಇದಕ್ಕೂ ಮುನ್ನ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿದ ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ವಿವಿಧತೆಯಲ್ಲಿ ಏಕತೆ ಸಾಧಿಸಿದ ದೇಶ ನಮ್ಮದು ಭಾಷಾವಾರು ಆಧಾರದ ಮೇಲೆ ರಾಜ್ಯಗಳ ಉದಯವಾಯಿತು. ಅದರಂತೆ ನಮ್ಮ ಕರ್ನಾಟಕ ಏಕೀಕರಣಗೊಂಡ ಬಳಿಕ ಕವಿ ಪುಂಗವರು ಸಾಹಿತಿಗಳು ಕನ್ನಡ ಭಾಷೆ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರುವಲ್ಲಿ ಅಪ್ರತಿಮ ಕೊಡುಗೆ ನೀಡಿದ್ದಾರೆ. ಅಂತಹ ಮಹನೀಯರನ್ನ ಇಂತಹ ಸಂದರ್ಭದಲ್ಲಿ ಗೌರವ ಸಮರ್ಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಗ್ರಂಥಾಲಯ ಸೇವೆಯ ಗುರುತಿಸಿ ಎಸ್ ಬಿ ನಂಜುಂಡಪ್ಪ, ಪ್ರಗತಿಪರ ರೈತ ರವಿ, ಸಾಮಾಜಿಕ ಸೇವೆ ಗುರುತಿಸಿ ದಿನೇಶ್ ಬಿ ಎಚ್, ಕಲಾಸೇವೆ ವಾಣಿ ಧೀರೇಂದ್ರ, ಪತ್ರಕರ್ತರಾದ ಕಣಕಟ್ಟೆ ಕುಮಾರ್, ಮಾಡಾಳು ಸೋಮಣ್ಣ, ರಾಮನಹಳ್ಳಿ ಸಿದ್ದೇಶ್ ಒಳಗೊಂಡಂತೆ ಶೈಕ್ಷಣಿಕ, ಸಾಮಾಜಿಕ, ಕ್ರೀಡೆ ಕಲೆ ಸಾಹಿತ್ಯ, ಹೀಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವ ಸಮರ್ಪಿಸಿದ್ದು ಕಾರ್ಯಕ್ರಮದ ಮತ್ತೊಂದು ವಿಶೇಷವಾಗಿತ್ತು.

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮತ್ತು ಸಮಾಜಸೇವಕರನ್ನು ಗುರುತಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು. ಕಾರ್ಯಕ್ರಮದ ನಂತರ ನಗರ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ಭಾವಚಿತ್ರದೊಂದಿಗೆ ಬೃಹತ್ ಮೆರವಣಿಗೆ ನಡೆಯಿತು. ವಿವಿಧ ಇಲಾಖೆಗಳಿಂದ ಸ್ತಬ್ಧ ಚಿತ್ರಗಳನ್ನು ಆಯೋಜಿಸಲಾಗಿತ್ತು. ಬಸವೇಶ್ವರ ಪ್ರೌಢಶಾಲೆಯ ಮಕ್ಕಳು ಸ್ತಬ್ಧ ಚಿತ್ರದಲ್ಲಿ ಪಾಲ್ಗೊಂಡಿದ್ದರು. ಸಾರಿಗೆ ಸಂಸ್ಥೆ ಬಸ್ ಅಲಂಕರಿಸಿಕೊಂಡು ಅದರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ಸಾಗಿತು. ಪೊಲೀಸ್ ಇಲಾಖೆ ಸೇರಿದಂತೆ ಸಮವಸ್ತ್ರದೊಂದಿಗೆ ನಾನಾ ಶಾಲೆಯ ವಿದ್ಯಾರ್ಥಿಗಳು ನಡೆಸಿದ ಪಥಸಂಚಲನೆ ಆಕರ್ಷಣೆಯಾಗಿದ್ದರೆ, ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜ್ಯೋತ್ಸವ ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಿತು.

ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಗಣ್ಯರನ್ನು ಸಭಿಕರನ್ನು ಹಾಗೂ ಸನ್ಮಾನಿತರಗಳನ್ನ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಲೋಕೇಶ್ ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್, ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಯೋಗೇಶ್, ಸಮಾಜ ಕಲ್ಯಾಣ ಇಲಾಖೆ ಹಿರಿಯ ನಿರ್ದೇಶಕ ಶಿವಮೂರ್ತಿ, ನಗರಸಭೆ ಆಯುಕ್ತ ಕೃಷ್ಣಮೂರ್ತಿ ಅರ್ಬನ್ ಕೋಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಅಬ್ದುಲ್ ಜಮೀಲ್, ತಾಲೂಕು ಕಾಸಪ್ಪ ಅಧ್ಯಕ್ಷ ಚಂದ್ರಶೇಖರ್, ಮೊದಲಾದವರು ಪಾಲ್ಗೊಂಡಿದ್ದರು.

Follow Us:
Download App:
  • android
  • ios