Asianet Suvarna News Asianet Suvarna News

ಮುಂದಿನ 10 ವರ್ಷಗಳ ಕಾಲ ಮೋದಿಯೇ ಪ್ರಧಾನಿಯಾಗಲಿ : ಶಾಸಕ ಜಿ.ಬಿ.ಜೋತಿ ಗಣೇಶ್

ಭಾರತವನ್ನು ಎಲ್ಲಾ ರೀತಿಯಿಂದಲೂ ಸದೃಢವಾಗಿ ಇಟ್ಟಿರುವ ಪ್ರಧಾನಿ ನರೇಂದ್ರಮೋದಿ ಅವರು ಮುಂದಿನ 10 ವರ್ಷಗಳ ಕಾಲ ಪ್ರಧಾನಿಯಾಗಿ ಮುಂದುವರೆಬೇಕೆಂಬುದು ಈ ದೇಶದ ಜನರ ಇಚ್ಚೆಯಾಗಿದ್ದು, ಕೇಂದ್ರ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕೆಂದು ಶಾಸಕ ಜಿ.ಬಿ.ಜೋತಿ ಗಣೇಶ್ ತಿಳಿಸಿದ್ದಾರೆ

Let Modi be the Prime Minister for the next 10 years: MLA GB Jyoti Ganesh snr
Author
First Published Nov 7, 2023, 9:25 AM IST

 ತುಮಕೂರು :  ಭಾರತವನ್ನು ಎಲ್ಲಾ ರೀತಿಯಿಂದಲೂ ಸದೃಢವಾಗಿ ಇಟ್ಟಿರುವ ಪ್ರಧಾನಿ ನರೇಂದ್ರಮೋದಿ ಅವರು ಮುಂದಿನ 10 ವರ್ಷಗಳ ಕಾಲ ಪ್ರಧಾನಿಯಾಗಿ ಮುಂದುವರೆಬೇಕೆಂಬುದು ಈ ದೇಶದ ಜನರ ಇಚ್ಚೆಯಾಗಿದ್ದು, ಕೇಂದ್ರ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕೆಂದು ಶಾಸಕ ಜಿ.ಬಿ.ಜೋತಿ ಗಣೇಶ್ ತಿಳಿಸಿದ್ದಾರೆ.

ನಗರದ 30ನೇ ವಾರ್ಡಿನ ನಳಂದ ಕಾನ್ವೆಂಟ್ ಬಳಿ ನಡೆದ ಪ್ರಧಾನಮಂತ್ರಿಗಳ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಕಳೆದ 9 ವರ್ಷಗಳಿಂದ ದೇಶದ ಜನರಿಗೆ ಭದ್ರತೆ ಒದಗಿಸುವುದರ ಜೊತೆಗೆ, ಅವರಿಗೆ ಆಹಾರದ ಭದ್ರತೆಯನ್ನು ಒದಗಿಸುತ್ತಿದ್ದಾರೆ ಎಂದರು.

ಸಾಮಾನ್ಯ ಜನರಿಗೆ ಅತ್ಯಗತ್ಯವಾದ ಸವಲತ್ತುಗಳನ್ನ ನೀಡುವಲ್ಲಿ ನರೇಂದ್ರ ಮೋದಿ ಸಿದ್ಧಹಸ್ತರು. ಕಳೆದ ೯ ವರ್ಷಗಳಿಂದ ಮೋದಿ ಅವರು ನೀಡಿರುವ ಹಲವಾರು ಯೋಜನೆಗಳು ಇದಕ್ಕೆ ಸಾಕ್ಷಿಯಾಗಿದೆ. ಯಾವುದೋ ಬಿಟ್ಟಿ ಭಾಗ್ಯಗಳನ್ನು ನೀಡಿ ದುಡಿಯುವ ಕೈಗಳನ್ನು ಸೋಮಾರಿಗಳನ್ನಾಗಿ ಮಾಡದೇ, ದುಡಿಯುವ ಜನರಿಗೆ ಆರ್ಥಿಕವಾಗಿ ಸಹಾಯ ಮಾಡಿ ಮತ್ತಷ್ಟು ಸ್ವಾವಲಂಬಿಗಳನ್ನಾಗಿ ಮಾಡಿ ವೈಯಕ್ತಿಕವಾಗಿ ಹಾಗೂ ರಾಷ್ಟ್ರದ ಆರ್ಥಿಕ ಉನ್ನತಿಯಾಗವಂತೆ ಮಾಡುತ್ತಿದ್ದಾರೆ ಎಂದರು.

ವಿಶ್ವಕರ್ಮ ಯೋಜನೆಯನ್ನ ಜಾರಿಗೆ ತಂದಿರುವುದೇ ಇದಕ್ಕೆ ಸಾಕ್ಷಿ. ಈ ಯೋಜನೆಯ ಮೂಲಕ ಸಾಂಪ್ರದಾಯಿಕವಾಗಿ ಕಸುಬು ಮಾಡುವ ಸ್ವಯಂ ಉದ್ಯೋಗಿಗಳಿಗೆ ಹೆಚ್ಚಿನ ಬಲ ತುಂಬುವ ಯೋಜನೆಯಾಗಿದೆ. ಮರಗೆಲಸ, ಮೀನಿನಬಲೆ ನೇಯುವವರು, ಚಾಪೆ, ಬುಟ್ಟಿ ತಯಾರಿಸುವವರು, ಮಡಿಕೆ ಮಾಡುವವರು, ಮನೆ ಕಟ್ಟುವವರು, ಕ್ಷೌರಿಕರು, ಲಾಂಡ್ರಿ ಕೆಲಸ ಮಾಡುವವರು ಹೀಗೆ ಸುಮಾರು 18 ರೀತಿಯ ಸ್ವಯಂ ಉದ್ಯೋಗಿಗಳಿಗೆ ತರಬೇತಿ ನೀಡಿ, ವೃತ್ತಿಯನ್ನು ಮುಂದುವರೆಸಲು ಅಗತ್ಯವಿರುವ ಬಂಡವಾಳವನ್ನು ಸಹ ಬ್ಯಾಂಕುಗಳ ಮೂಲಕ ಕೊಡಿಸುವ ಯೋಜನೆಯಾಗಿದೆ ಎಂದು ತಿಳಿಸಿದರು.

ವಿಶ್ವಕರ್ಮ ಯೋಜನೆಯಡಿ ನೊಂದಣಿಯಾದ ಫಲಾನುಭವಿಗಳಿಗೆ ಶಿಷ್ಯವೇತನದೊಂದಿಗೆ ತರಬೇತಿ ನೀಡಿ, ವೃತ್ತಿಗೆ ಅಗತ್ಯವಿರುವ ಸುಮಾರು 15ಸಾವಿರ ರು.ಗಳ ಅಗತ್ಯ ಪರಿಕರಗಳನ್ನು ಒಳಗೊಂಡ ಕಿಟ್ ನೀಡುವ ಇಂತಹ ಮಹತ್ವವಾದ ಯೋಜನೆಯ ಲಾಭವನ್ನು ಜನರು ಉಪಯೋಗಿಸಿಕೊಳ್ಳಬೇಕು. ಅಂತಹ ಅರ್ಹ ಫಲಾನುಭವಿಗಳನ್ನ ಹುಡುಕಿ ಯೋಜನೆಯ ಲಾಭವನ್ನ ಪಡೆಯುವಂತೆ ನಮ್ಮ ಕಾರ್ಯಕರ್ತರು ಜಾಗೃತಿ ಮಾಡಬೇಕೆಂದು ಕರೆ ಕೊಟ್ಟರು.

ಕೇಂದ್ರ ಸರಕಾರ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ದೇಶದ ಸುಮಾರು 80 ಕೋಟಿ ಜನರಿಗೆ ನೀಡುತ್ತಿರುವ ಉಚಿತ ೫ ಕೆ.ಜಿ ಪಡಿತರ ಅಕ್ಕಿಯನ್ನು ಮುಂದಿನ ೫ ವರ್ಷಕ್ಕೆ ವಿಸ್ತರಿಸಿರುವ ನರೇಂದ್ರ ಮೋದಿ ಅವರಿಗೆ ದೇಶದ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.

ತುಮಕೂರು ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಕೆ.ಸಂದೀಪಗೌಡ ಮಾತನಾಡಿ, ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ರಾಜಕೀಯ ಪಕ್ಷದ ಅದ್ಯ ಕರ್ತವ್ಯವಾಗಿದೆ. ಈ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರು ಸದಾ ಸಿದ್ಧರಾಗಿದ್ದು, ಮೋದಿ ಅವರ ಕನಸಿನ ವಿರ್ಶಕರ್ಮ ಯೋಜನೆಗೆ ಆರ್ಹರನ್ನು ನೊಂದಣಿ ಮಾಡಿಸಿ, ಅವರಿಗೆ ಕೇಂದ್ರ ಸರಕಾರದ ಸವಲತ್ತು ತಲುಪುವಂತೆ ಮಾಡಲು ನಿರಂತರ ಶ್ರಮಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರ ಅಧ್ಯಕ್ಷ ಹನುಮಂತ ರಾಜು, ಪಾಲಿಕೆ ಸದಸ್ಯ ವಿಷ್ಣುವರ್ಧನ್ , ಜಿಲ್ಲಾ ಕಾರ್ಯದರ್ಶಿ ಸಂದೀಪ್, ರವೀಶಯ್ಯ, ವಿರೂಪಾಕ್ಷಪ್ಪ, ಗಣೇಶ್, ಕುಮಾರ್ ವೇದಮೂರ್ತಿ, ದೇವರಾಜ್ ಹಾಗೂ ಅನೇಕ ಜನ ಅರ್ಹ. ಫಲಾನುಭವಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios