Asianet Suvarna News Asianet Suvarna News

ಕಾವೇರಿ ವಿವಾದ ಕೇಂದ್ರ ಮಧ್ಯಪ್ರವೇಶ ಮಾಡಲಿ : ಶಾಸಕ ಡಾ. ರಂಗನಾಥ್

ತಮಿಳುನಾಡು ಹಾಗೂ ಕರ್ನಾಟಕ ನೀರಾವರಿ ಸಮಸ್ಯೆಯನ್ನು ಬಗೆಹರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಒತ್ತಾಯಿಸಿದ್ದಾರೆ

Let Cauvery Dispute Center intervene: MLA Dr. Ranganath snr
Author
First Published Sep 24, 2023, 9:04 AM IST

ಕುಣಿಗಲ್ : ತಮಿಳುನಾಡು ಹಾಗೂ ಕರ್ನಾಟಕ ನೀರಾವರಿ ಸಮಸ್ಯೆಯನ್ನು ಬಗೆಹರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಒತ್ತಾಯಿಸಿದ್ದಾರೆ

ವಿಶ್ವ ವಿಖ್ಯಾತ ಮರ್ಕೋನಹಳ್ಳಿ ಜಲಾಶಯದಿಂದ ರೈತರ ಭೂಮಿಗೆ ನೀರು ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ತೀವ್ರವಾಗಿ ಕಾಡುತ್ತಿದೆ. ನೀರಾವರಿ ಸಲಹಾ ಸಮಿತಿ ತಮಿಳುನಾಡಿಗೆ ನೀರು ಬಿಡಬೇಕೆಂಬ ಸೂಚನೆ ನೀಡಿದೆ. ಆದರೆ ಕರ್ನಾಟಕ ರೈತರ ಪರಿಸ್ಥಿತಿಯನ್ನು ಮನಗಂಡು ಇಲ್ಲಿನ ಸಂಸದರು ಮೌನವಾಗಿರುವುದು ವಿಷಾದನೀಯ. ಕೇವಲ ರಾಜಕೀಯ ಮಾಡುವ ಕರ್ನಾಟಕದ ಬಿಜೆಪಿ ಸಂಸದರು ಬಿಜೆಪಿ ಸರ್ಕಾರದ ಮುಂದೆ ನಿಲ್ಲಬೇಕು ಪ್ರಧಾನಿಗಳ ಮೇಲೆ ಒತ್ತಡ ತರಬೇಕೆಂದರು.

ತಮಿಳುನಾಡಿಗೆ ನೀರು ಬಿಡುವುದು ನಿಲ್ಲಿಸುವುದು ಕೇವಲ ಕರ್ನಾಟಕದ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಇವರ ಜವಾಬ್ದಾರಿ ಅಲ್ಲ. ಸರ್ಕಾರ ಹಾಗೂ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾಗುತ್ತದೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂದರು,

ಬೈಸಿಕೊಳ್ಳಲು ರೆಡಿ ಇದ್ದೇವೆ ಎಂದು ಉಪಮುಖ್ಯಮಂತ್ರಿ

ಬೆಂಗಳೂರು (ಸೆ.22): ಕಾವೇರಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್‌ ಪ್ರಾಧಿಕಾರದ ಆದೇಶವನ್ನು ಎತ್ತಿಹಿಡಿದು ಸೆ.27ರವರೆಗೆ ಪ್ರತಿನಿತ್ಯ ತಲಾ 5,000 ಕ್ಯೂಸೆಕ್ಸ್‌ ನೀರು ಬಿಡಲು ಆದೇಶ ಹೊರಡಿಸಿದೆ. ಈ ಪರಿಸ್ಥಿತಿ ಎಲ್ಲ ಸರ್ಕಾರದಲ್ಲೂ ಬಂದಿತ್ತು. ಇನ್ನು ಮಂಡ್ಯ ನಗರವನ್ನು ಬಂದ್‌ ಮಾಡಲು ರೈತರು ಕರೆ ನೀಡಿದ್ದಾರೆ. ಆದರೆ, ನಮ್ಮ ಸರ್ಕಾರ ನಿಮ್ಮ ಪರವಾಗಿದೆ. ಅಹಿತಕರ ಘಟನೆ ನಡೆದು ರಾಜ್ಯಕ್ಕೆ ಧಕ್ಕೆಯಾದಂತೆ ಎಲ್ಲರೂ ಜಾಗ್ರತೆವಹಿಸುವುದು ಅಗತ್ಯವಾಗಿದೆ. ನಿಮಗೆ ಕೋಪ ಇದ್ರೆ ಎಷ್ಟಾದ್ರೂ ಬೈಯಿರಿ. ನಾವು ಅಧಿಕಾರದಲ್ಲಿ ಇರುವವರು ಬೈಸಿಕೊಳ್ಳಲು ರೆಡಿ ಇದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರವಾಗಿತಮಿಳುನಾಡು 24 ಸಾವಿರ ಕ್ಯೂಸೆಕ್ ಕೇಳಿದೆ.  ನಮ್ಮ ಅಧಿಕಾರಿಗಳು ಎರಡು ಕಮಿಟಿಗಳ ಮುಂದೆ ಪ್ರಸ್ತಾಪ ಮಾಡಿ ಎರಡು ಸಲ 10,000 ಕ್ಯೂಸೆಕ್ಸ್ ಬಿಡಲು ಒಪ್ಪಿದ್ದೆವು. ನಂತರ ಒತ್ತಡ ಮಾಡಿ 5,000 ಕ್ಯೂಸೆಕ್‌ಗೆ ಇಳಿಸಿದೆವು. ಮಳೆ ಚೆನ್ನಾಗಿ ಆಗಬಹುದೆಂಬ ನಿರೀಕ್ಷೆ ಇತ್ತು. ಈಗ ಅಪೀಲು ಹೋಗಬೇಕು ಅಂತ ತೀರ್ಮಾನ ಮಾಡಿದ್ದೆವು. ಆದರೆ, ಇಬ್ಬರ ಅಪೀಲುಗಳನ್ನು ಡಿಸ್‌ಮಿಸ್ ಮಾಡಿದಾರೆ. ಸೆ.27ರವರೆಗೆ ನೀರು ಬಿಡಲು ಆದೇಶ ಆಗಿದೆ. ಈ ಪರಿಸ್ಥಿತಿ ಎಲ್ಲಾ ಸರ್ಕಾರಗಳ ಕಾಲದಲ್ಲಿ ಕೂಡಾ ಆಗಿತ್ತು ಎಂದು ಸಮಜಾಯಿಷಿ ನೀಡಿದರು.

ನಾಳೆ ಮಂಡ್ಯ ಬಂದ್‌: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರೇ ಎಚ್ಚರ!

ಇನ್ನು ನಾಳೆ ಮಂಡ್ಯ ಬಂದ್ ನಿಂದ ಕಾವೇರಿ ವಿಚಾರವಾಗಿ ಏನೂ ಆಗಲ್ಲ. ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ನಾವೇ ನಿಮ್ಮ ಪರ ಹೋರಾಟ ಮಾಡ್ತೀವಿ. ಬಂದ್ ಮಾಡಿ ಜನರಿಗೆ ತೊಂದರೆ ಮಾಡಬೇಡಿ. ಸರ್ಕಾರ ನಿಮ್ಮ ಪರವಾಗಿದೆ.  ಅಹಿತಕರ ಘಟನೆ ನಡೆದ್ರೆ ರಾಜ್ಯಕ್ಕೆ ಧಕ್ಕೆ ಆಗುತ್ತದೆ. ನಿಮಗೆ ಕೋಪ ಇದ್ದರೆ ಎಷ್ಟಾದ್ರೂ ಬೈಯಿರಿ, ನಾವು ಅಧಿಕಾರದಲ್ಲಿ ಇರುವವರು ಬೈಸಿಕೊಳ್ಳಲು ರೆಡಿ ಇದ್ದೇವೆ. ಇವತ್ತು ಬೊಮ್ಮಾಯಿ ಯಡಿಯೂರಪ್ಪ ಎಲ್ಲಾ ಮಾತಾಡ್ತಾ ಇದಾರೆ. ಅವರು ವಿಪಕ್ಷದವರು ಮಾತಾಡ್ಲೇ ಬೇಕು. ಅವರು ಯಾವ ಲಾಯರ್ ಇಟ್ಟಿದ್ರೋ, ನಾವೂ ಅದೇ ಲಾಯರ್ ಇಟ್ಟಿರೋದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರರು ಎಸ್ ಪಿ ಶ್ರೀನಿವಾಸ್, ಸಹಾಯಕ ಕಾರ್ಯಪಾಲಕ ಅಭಿಯಂತರರು ರುದ್ರೇಶ್, ಕಿರಿಯ ಇಂಜಿನಿಯರ್ ಗೋವಿಂದೇಗೌಡ ಸೇರಿದಂತೆ ಸ್ಥಳೀಯ ಹಲವರು ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Follow Us:
Download App:
  • android
  • ios