ಚಿತ್ರದುರ್ಗದಲ್ಲಿ ಚಿರತೆ ಪ್ರತ್ಯಕ್ಷ , ಜಮೀನುಗಳಿಗೆ ತೆರಳಲು ರೈತರ ಆತಂಕ

ಕೋಟೆನಾಡಿನಲ್ಲಿ ಚಿರತೆಯೊಂದು ಕಳೆದ ಮೂರು ದಿನಗಳಿಂದ ಜನರ ನಿದ್ದೆಗೆಡಿಸಿದೆ. ಮನೆಯಿಂದ ಜಮೀನುಗಳಿಗೆ ರೈತರು ಹೋಗುವುದಕ್ಕೂ ಭಯ ಪಡುವ ವಾತಾವರಣ ನಿರ್ಮಾಣವಾಗಿದೆ.

Leopard sighting in Chitradurga farmers afraid to go agricultural land kannada news gow

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜೂ.20): ಕೋಟೆನಾಡಿನಲ್ಲಿ ಚಿರತೆಯೊಂದು ಕಳೆದ ಮೂರು ದಿನಗಳಿಂದ ಜನರ ನಿದ್ದೆಗೆಡಿಸಿದೆ. ಮನೆಯಿಂದ ಜಮೀನುಗಳಿಗೆ ರೈತರು ಹೋಗುವುದಕ್ಕೂ ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಅಷ್ಟಕ್ಕೂ ಚಿರತೆ ಕಾಣಿಸಿಕೊಂಡಿದ್ದು ಎಲ್ಲಿ? ಹೀಗೆ ಚಿರತೆ ಭಯದಿಂದ ಮನೆಯಿಂದ ಜಮೀನಿಗೆ ತೆರಳಲು ಮುಂಜಾಗ್ರತಾ ಕ್ರಮವಾಗಿ ಕೈಯಲ್ಲಿ ದೊಣ್ಣೆಗಳನ್ನು ಹಿಡಿದು ಓಡಾಡ್ತಿರೋ ಜನರು. ಮತ್ತೊಂದೆಡೆ‌ ಕಿರಿಕ್ ಚಿರತೆ ಸೆರೆ‌‌ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನ್ ವ್ಯವಸ್ಥೆ ಮಾಡಿರೋ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ಬಳಿ. ಕಳೆದ ಮೂರು ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮದ ಜನರು ತುಂಬಾ ಭಯಬೀತರಾಗಿದ್ದಾರೆ.

ಸರ್ಕಾರಿ ಶಾಲಾ ಆವರಣದಲ್ಲಿ ಬೆಳೆದ ವಿಷಕಾರಿ ಬೀಜ ತಿಂದು, ಅಸ್ವಸ್ಥರಾದ ಮಕ್ಕಳು

ಸದ್ಯ ಎಲ್ಲಾ ರೈತರು ಜಮೀನುಗಳಲ್ಲಿ ಬೆಳೆದು ನಿಂತಿರೋ ಬೆಳೆಗಳು ಕಟಾವಿಗೆ ಬಂದಿರೋ ಸಮಯ ಇದಾಗಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ರೈತರೂ ಜಮೀನುಗಳಿಗೆ ತೆರಳಬೇಕಾಗುತ್ತದೆ. ಆದ್ರೆ ಅಲ್ಲಲ್ಲಿ ಚಿರತೆ ಪ್ರತ್ಯಕ್ಷ ಆಗ್ತಿರೋದ್ರಿಂದ ಏನಾದ್ರು ಅನಾಹುತ ಆದ್ರೆ ಏನ್ ಮಾಡೋದು ಎಂಬ ಆತಂಕದಲ್ಲಿ ಜನರಿ ಬದುಕು ಸಾಗಿಸ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಾಗ, ಬೋನ್ ಅಳವಡಿಕೆ ಮಾಡಲಾಗಿದೆ ಆದ್ರೂ ಕೂಡ ಚಿರತೆ ಸೆರೆ ಆಗಿಲ್ಲ. ಆದಷ್ಟು ಬೇಗ ಚಿರತೆ ಸೆರೆ ಹಿಡಿದು ನಮ್ಮ ಗ್ರಾಮದ ಜನರ ನೆಮ್ಮದಿ ಕಾಪಾಡಬೇಕಿದೆ ಅಂತಾರೆ ಗ್ರಾಮಸ್ಥರು.

ಇನ್ನೂ ಗ್ರಾಮದ ಸುತ್ತಮುತ್ತ ಚಿರತೆ ಪ್ರತ್ಯಕ್ಷ ಆದಾಗಿನಿಂದ ಚಿಕ್ಕ, ಪುಟ್ಟ ಮಕ್ಕಳನ್ನು ಒಬ್ಬಂಟಿಯಾಗಿ ಮನೆಯಿಂದ ಹೊರ ಕಳುಹಿಸಲಿಕ್ಕೂ ಜನರು ಆತಂಕ ಪಡ್ತಿದ್ದಾರೆ. ಈಗಾಗಲೇ‌ ಹೇಳಿದ‌‌ ಹಾಗೆ ಗ್ರಾಮೀಣ ಭಾಗದಲ್ಲಿ ರೈತರು ಜಾನುವಾರುಗಳ‌ ಸಾಕಾಣಿಕೆ ಹೆಚ್ಚಾಗಿರೋದ್ರಿಂದ ಅವುಗಳಿಗೆ ಮೇವು ಒದಗಿಸಲು ಜಮೀನುಗಳಿಗೆ ಅನಿವಾರ್ಯವಾಗಿ ತೆರಳುವ ಪರಿಸ್ಥಿತಿ ಬರುತ್ತೆ. ಆದ್ರೆ ಕುರುಡಿಹಳ್ಳಿ, ಬಾಲೇನಹಳ್ಳಿ ಸುತ್ತಮುತ್ತ ಗ್ರಾಮದ ರೈತರ ಜಮೀನಿನ ಕಡೆ ಚಿರತೆ ಓಡಾಟ ನಡೆಸ್ತಿರೋದು ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ.

ಮುಂಗಾರು ಕೈಕೊಡುವ ಮುನ್ಸೂಚನೆಯೇ ಇಲ್ಲ: ಹವಾಮಾನ ಇಲಾಖೆ ಘೋಷಣೆ

ಅದ್ರಲ್ಲಂತೂ ಜಮೀನುಗಳಿಲ್ಲಿ ನಿರ್ಮಿಸಿರುವ ಕೆಲ ಮನೆಗಳ ಜನರ ಪರಿಸ್ಥಿತಿ ಅಂತು ಹೇಳತೀರದು. ನಾನು ಕೂಡ ಜಮೀನಲ್ಲಿದ್ದಾಗ ಖುದ್ದು ಚಿರತೆ ನೋಡಿ ಭಯದಿಂದ ರೂಮ್ ಗೆ ತೆರಳಿದೆ ಬಳಿಕ ಅದು ಮಾಯವಾಯ್ತು. ಹಾಗಾಗಿ ಯಾವುದೇ ಅನಾಹುತಗಳು ಸಂಭವಿಸುವುದಕ್ಕಿಂತ‌ ಮುಂಚೆಯೇ ಚೀತಾ ಆಪರೇಷನ್ ಸಕ್ಸಸ್ ಆಗಬೇಕಿದೆ ಅಂತಾರೆ ಪ್ರತ್ಯಕ್ಷದರ್ಶಿ

ಇನ್ನೇನು ಮಳೆ ಬಂತಂದ್ರೆ ಸಾಕು ಜಮೀನುಗಳಿಗೆ ತೆರಳೋ‌ ಜನರಿಗೆ ಈಗಲೇ ಚಿರತೆ ಭಯ ಶುರುವಾಗಿದೆ. ಆದ್ದರಿಂದ ಭಯ ಭೀತರಾಗಿರೋ ಕುರುಡಿಹಳ್ಳಿ ಗ್ರಾಮದ ಜನರನ್ನ, ಕೂಡಲೇ ಚಿರತೆ ಕಾಟದಿಂ‌ದ‌ ಅರಣ್ಯಾಧಿಕಾರಿಗಳು ಮುಕ್ತಿ‌ ಕೊಡಿಸಲಿ ಎಂಬುದು ನಮ್ಮ ಆಶಯ.

Latest Videos
Follow Us:
Download App:
  • android
  • ios