ಗಂಗಾವತಿ: ಆಹಾರ ಅರಸಿ ನಾಡಿಗೆ ಬಂದು ಪ್ರಾಣಬಿಟ್ಟ ಚಿರತೆ

ಹೇಮಗುಡ್ಡದ ಬಳಿ ಬೆಳಂ ಬೆಳಿಗ್ಗೆ ವಾಹನಕ್ಕೆ ಸಿಲುಕಿ ಚಿರತೆ ಸಾವು| ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡದ ಬಳಿ ನಡದ ಘಟನೆ|ನಾಯಿ ಹಿಡಿದುಕೊಂಡು ರಸ್ತೆ ದಾಟುವ ವೇಳೆ ನಡೆದ ಅವಘಡ|

Leopard Dies at Gangavati in Koppal District

ಗಂಗಾವತಿ(ಜೂ.05): ಸಮೀಪದ ಹೇಮಗುಡ್ಡದ ಬಳಿ ಚಿರತೆಯೊಂದು ನಾಯಿಮರಿ ಹಿಡಿದು ಕೊಂಡು ರಸ್ತೆ ದಾಟುತ್ತಿರುವಾಗ ವಾಹನದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಇಂದು(ಶುಕ್ರವಾರ) ಬೆಳಗಿನ ಜಾವ ಸಂಭವಿಸಿದೆ.

ಒಂದು ವರ್ಷ ಪ್ರಾಯದ ಹೆಣ್ಣು ಚಿರತೆ ಹೇಮಗುಡ್ಡದ ಬಳಿ ನಾಯಿಮರಿಯನ್ನು ಹಿಡಿದು ಕೊಂಡು ಮುಕ್ಕಂಪ ಗ್ರಾಮಕ್ಕೆ ಹೋಗುವ ಸಂದರ್ಭದಲ್ಲಿ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದ ಅಪರಿಚಿತ ವಾಹನಕ್ಕೆ ಸಿಲುಕಿ ಸ್ಥಳದಲ್ಲಿ ಸಾವನ್ನಪ್ಪಿದೆ  .
ರಸ್ತೆ ಮೇಲೆ ಚಿರತೆ ಶವ ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ಚಿರತೆ ಬಾಯಿಗೆ ನೀರು ಹಾಕಿ ರಕ್ಷಣೆಗೆ ಮುಂದಾಗುವಷ್ಟರಲ್ಲಿ  ಸಹ ಚಿರತೆ ಪ್ರಾಣ ಬಿಟ್ಟಿದೆ. 

ಒಬ್ಬ ಸೋಂಕಿತನಿಂದ ಮೂರು ಜಿಲ್ಲೆಗಳಿಗೆ ಢವಢವ; ಬೆಚ್ಚಿ ಬೀಳಿಸಿದೆ ಟ್ರಾವೆಲ್ ಹಿಸ್ಟರಿ

ಕಳೆದ ಮೂರು ದಿನಗಳ ಹಿಂದೆ ಗಂಗಾವತಿ ನಗರದ ಮನೆಯೊಂದರಲ್ಲಿ ಚಿರತೆ ನಾಯಿಯನ್ನು ಹೊತ್ತುಕೊಂಡು ಹೋಗಿದ್ದ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಉಪ ವಲಯಾಧಿಕಾರಿ ರಾಮಣ್ಣ ಭೇಟಿ ನೀಡಿ ತನಿಖೆ ಕೈಗೊಂಡಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಚಿರತೆಯ ಅಂತ್ಯಕ್ರಿಯೆ ನಡೆಸಲಾಗುವದೆಂದು ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios