ಚಾಮರಾಜನಗರ: ಕೊಳ್ಳೇಗಾಲದಲ್ಲಿ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಜನ
ಚಿರತೆ ಅರಣ್ಯ ಇಲಾಖೆಯ ಬೋನಿಗೆ ಸೆರೆಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಂತಾಗಿದೆ. ನಿಜಕ್ಕೂ ಬಾಲಕನ ಮೇಲೆ ದಾಳಿ ಮಾಡಿದ ಚಿರತೆ ಇದೆನಾ? ಇಲ್ಲ ಮತ್ತೊಂದು ಚಿರತೆ ದಾಳಿ ಮಾಡಿತ್ತೆ ಎಂಬುದನ್ನು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.
ಕೊಳ್ಳೇಗಾಲ(ಆ.03): ಕಳೆದ ಹಲವು ದಿನಗಳಿಂದ ರೈತರು, ನಾಗರಿಕರಲ್ಲಿ ಭಯದ ವಾತಾವರಣ ಉಂಟು ಮಾಡಿದ್ದ ಚಿರತೆಯನ್ನು ಹಿಡಿಯುವಲ್ಲಿ ಬುಧವಾರ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಳೆದ ವಾರ ಮಲ್ಲಿಗಳ್ಳಿ ಗ್ರಾಮದ ಹರ್ಷ ಎಂಬ ಬಾಲಕನ ಮೇಲೆ ಚಿರತೆ ದಾಳಿ ಮಾಡಿ ಗ್ರಾಮಸ್ಥರಲ್ಲಿ ಭಯ ಭೀತಿ ಉಂಟು ಮಾಡಿತ್ತು, ಬಳಿಕ 3 ದಿನಗಳ ನಂತರ ಕುಂತೂರು ಬೆಟ್ಟದ ಮೇಲೆ ಚಿರತೆ ಕಾಣಿಸಿಕೊಂಡು ಜನರಲ್ಲಿ ಭಯದ ವಾತಾವರಣವನ್ನೆ ಸಷ್ಟಿಸಿತ್ತು.
ಬಾಲಕನ ಮೇಲೆ ಚಿರತೆ ದಾಳಿ ಬಳಿಕ ಅರಣ್ಯ ಇಲಾಖೆ ಎಚ್ಚೆತ್ತು ಚಿರತೆ ಪತ್ತೆಗಾಗಿ ಹಲವು ಕಡೆ ಕಾರ್ಯಾಚರಣೆ ಮಾಡಿದ್ದರು. ಆದರೆ ಚಿರತೆ ಹಿಡಿಯಲು ಆಗಿರಲಿಲ್ಲ, ಈ ಹಿನ್ನೆಲೆ ಅರಣ್ಯ ಇಲಾಖೆ ಚಿರತೆ ಶತಾಯ, ಗತಾಯ ಚಿರತೆ ಸೆರೆಗೆ ಇಲಾಖೆ ಅನೇಕ ತಂತ್ರಗಾರಿಕೆ ಪ್ರಯೋಗಿಸಿತ್ತು. 10 ಕಡೆ ಬೋನಿಟ್ಟು ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿತ್ತು. ಅಲ್ಲದೆ ಚಿರತೆ ಸೆರೆ ಹಿಡಿಯುವುದು ಸಹ ಇಲಾಖೆಗೆ ಸವಾಲಾಗಿ ಪರಿಣಮಿಸಿತ್ತು.
ಒಂದೂವರೆ ಎಕರೆ ಟೊಮೆಟೊ ಬೆಳೆ ನಾಶ ಮಾಡಿದ ಕಿಡಿಗೇಡಿಗಳು: ಅನ್ನದಾತ ಕಣ್ಣೀರು
ಬುಧವಾರ ಬೆಳಗ್ಗೆ ಚಿರತೆ ಅರಣ್ಯ ಇಲಾಖೆಯ ಬೋನಿಗೆ ಸೆರೆಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಂತಾಗಿದೆ. ನಿಜಕ್ಕೂ ಬಾಲಕನ ಮೇಲೆ ದಾಳಿ ಮಾಡಿದ ಚಿರತೆ ಇದೆನಾ? ಇಲ್ಲ ಮತ್ತೊಂದು ಚಿರತೆ ದಾಳಿ ಮಾಡಿತ್ತೆ ಎಂಬುದನ್ನು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.
ಒಟ್ಟಾರೆ ಕುಂತೂರು ಬೆಟ್ಟದ ಮೇಲೆ ಪ್ರತ್ಯಕ್ಷವಾಗಿದ್ದ ಚಿರತೆ ಕಂಡು ಭಯಬೀತರಾಗಿದ್ದ ಗ್ರಾಮಸ್ಥರು ಸದ್ಯ ಅರಣ್ಯ ಇಲಾಖೆ ಕಾರ್ಯಾಚರಣೆ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ.