ತಿಪಟೂರು : ಚಿರತೆ ಸೆರೆ: ಜನತೆ ನಿರಾಳ
ತಾಲೂಕಿನ ಹೊಗವನಘಟ್ಟದಾಸೀಹಳ್ಳಿ ಗ್ರಾಮದಲ್ಲಿ ಕಳೆದ ಹಲವಾರು ದಿನಗಳಿಂದಲೂ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯು ಅರಣ್ಯ ಇಲಾಖೆಯು ಇಟ್ಟಿದ್ದ ಬೋನಿಗೆ ಮಂಗಳವಾರ ರಾತ್ರಿ ಬಿದ್ದಿದ್ದು, ಗ್ರಾಮಸ್ಥರು ಈಗ ನಿರಾಳರಾಗಿದ್ದಾರೆ.
ತಿಪಟೂರು: ತಾಲೂಕಿನ ಹೊಗವನಘಟ್ಟದಾಸೀಹಳ್ಳಿ ಗ್ರಾಮದಲ್ಲಿ ಕಳೆದ ಹಲವಾರು ದಿನಗಳಿಂದಲೂ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯು ಅರಣ್ಯ ಇಲಾಖೆಯು ಇಟ್ಟಿದ್ದ ಬೋನಿಗೆ ಮಂಗಳವಾರ ರಾತ್ರಿ ಬಿದ್ದಿದ್ದು, ಗ್ರಾಮಸ್ಥರು ಈಗ ನಿರಾಳರಾಗಿದ್ದಾರೆ.
ದಾಸೀಹಳ್ಳಿ ಗ್ರಾಮದ ಸುತ್ತಮುತ್ತ ಹಲವಾರು ದಿನಗಳಿಂದಲೂ ಬೀಡು ಬಿಟ್ಟಿದ್ದ ಚಿರತೆಯು ರೈತರಲ್ಲಿ ಆತಂಕ ಉಂಟುಮಾಡಿತ್ತು. ಚಿರತೆಗಳ ಹಾವಳಿಯಿಂದ ಕತ್ತಲಾದರೆ ಓಡಾಡುವಂತಿರಲಿಲ್ಲ ಹಸು, ಮೇಕೆ, ಸಾಕು ನಾಯಿ, ಕುರಿಗಳನ್ನು ಹೊರಗೆ ಬಿಡುವಂತಿರಲಿಲ್ಲ. ಚಿರತೆಯ ಉಪಟಳಕ್ಕೆ ಇಲ್ಲಿನ ಜನರು ಭಯಬೀತರಾಗಿದ್ದರು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ದೂರಿನನ್ವಯ ಅರಣ್ಯ ಇಲಾಖೆ ಕಳೆದ ಎರಡು ದಿನಗಳ ಹಿಂದೆ ದಾಸೀಹಳ್ಳಿ ಗ್ರಾಮ ಮಹೇಶ್ ಎಂಬುವವರ ತೋಟದ ಮನೆ ಬಳಿ ಬೋನನ್ನು ಇಟ್ಟಿದ್ದರು. ಸುಮಾರು ಎರಡು ವರ್ಷದ ಹೆಣ್ಣು ಚಿರತೆ ಬೋನಿನಲ್ಲಿ ಸೆರೆಯಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಶಿವಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ. ಬೋನಿಗೆ ಬಿದ್ದಿದ್ದ ಚಿರತೆ ವೀಕ್ಷಿಸಲು ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಆಗಮಿಸಿದ್ದರು.
ಬೋನಿಗೆ ಬಿದ್ದ ಚಿರತೆ
ಶಿವಮೊಗ್ಗ (ಆ.20): ನಗರದ ಹೊರವಲಯದ ಬಿಕ್ಕೋನಹಳ್ಳಿಯಲ್ಲಿ ಮಹಿಳೆಯನ್ನು ಬಲಿ ಪಡೆದಿದ್ದ ನರಹಂತಕ ಚಿರತೆಯನ್ನು ಬೋನಿಗೆ ಕೆಡವುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಗ್ರಾಮದ ಯಶೋಧಮ್ಮ ಎಂಬ ಮಹಿಳೆಯನ್ನು ಕೊಂದು ಹಾಕಿದ್ದ ನರಹಂತಕ ಚಿರತೆ, ಬೀರನಕೆರೆ, ಬನ್ನೀಕೆರೆ, ಸುತ್ತಲ ಹಳ್ಳಿಗಳಿಗೂ ನುಗ್ಗಿ ಜನರಲ್ಲಿ ಆತಂಕ ಸೃಷ್ಠಿಸಿತ್ತು. ಇದರ ಬೆನ್ನಲ್ಲೇ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯಲು ಹರಸಾಹಸ ಪಟ್ಟಿದ್ದರು.
ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ವಿಡಿಯೋ: ದೂರು ದಾಖಲು
ಬನ್ನೀಕೆರೆಯಲ್ಲಿ ಹೊಲಕ್ಕೆ ಹೋಗಿದ್ದ ಯುವಕನೊಬ್ಬನಿಗೆ ಚಿರತೆ ಕಂಡಿತ್ತು. ತಕ್ಷಣ ಕಾರ್ಯೋನ್ಮುಖರಾದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಓಡಾಡುವ ಜಾಗಗಳಲ್ಲಿ 15 ಕಡೆ ಕ್ಯಾಮೆರಾಗಳನ್ನು ಅಳವಡಿಸಿ, 7 ಕಡೆ ಬೋನ್‌ಗಳನ್ನಿರಿಸಲಾಗಿತ್ತು. ಕೊನೆಗೂ ಶನಿವಾರ ಬಿಕ್ಕೋನಹಳ್ಳಿಯಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಸೆರೆಸಿಕ್ಕ ಚಿರತೆಯನ್ನು ತ್ಯಾವರೆಕೊಪ್ಪದ ಲಯನ್ಸ್ ಸಫಾರಿಗೆ ಬಿಡಲಾಗಿದೆ.