ಬೆಂಗಳೂರಿನ ಮೇಯರ್ ಚುನಾವಣೆ ಬೆಂಗಳೂರಿನ ಜನರ ಹೃದಯ ವೈಶಾಲ್ಯತೆಯ ನಿದರ್ಶನವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಲೇಹರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು [ಅ.02]: ಬಿಬಿಎಂಪಿ ಸದಸ್ಯ ಗೌತಮ್ ಕುಮಾರ್ ಜೈನ್ ಅವರು ಮೇಯರ್ ಆಗಿ ಆಯ್ಕೆಯಾಗಿದ್ದು ಸ್ವಾಗತಾರ್ಹವಾಗಿದ್ದು, ಮೇಯರ್ ಚುನಾವಣೆ ಬೆಂಗಳೂರಿನ ಜನರ ಹೃದಯ ವೈಶಾಲ್ಯತೆಯ ನಿದರ್ಶನವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಲೇಹರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬೆಂಗಳೂರು ಯಾವಾಗಲೂ ದೇಶದ ಎಲ್ಲಾ ಪಂಗಡಗಳ, ಪ್ರದೇಶಗಳ ಜನರನ್ನು ಅಪ್ಪಿಕೊಂಡಿದೆ. ಗೌತಮ್ ಕುಮಾರ್ ಜೈನ್ ಅವರನ್ನು ಬೆಂಗಳೂರಿನ ಮೊದಲ ಪ್ರಜೆಯಾಗಿ ಆಯ್ಕೆ ಮಾಡುವ ಮೂಲಕ ಮತ್ತೊಮ್ಮೆ ನಗರದ ಹೃದಯ ವೈಶಾಲ್ಯತೆಯನ್ನು ಜನತೆ ಎತ್ತಿಹಿಡಿದಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೆಂಗಳೂರಿನ ಹಿರಿಮೆಗೆ ಸಾರ್ಥಕತೆ ಸಲ್ಲಿಸಿದ್ದಕ್ಕಾಗಿ ವಿನಮ್ರತೆಯಿಂದ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ. ನೂತನ ಮೇಯರ್ ಗೌತಮ್ ಕುಮಾರ್ ಜೈನ್ ಅವರು ನಗರದ ನಾಗರಿಕರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
