Asianet Suvarna News Asianet Suvarna News

'ಸಿಎಂ ಹೇಳಿದಾದ ನನಗೆ ಸಿಡಿಲು ಬಡಿದ ಅನುಭವವಾಗಿತ್ತು'

ಸಿಎಂ ನನ್ನ ಹೆಸರನ್ನು ಘೋಷಿಸಿದಾಗ ನನಗೆ ಸಿಡಿಲು ಬಡಿದ  ಅನುಭವವಾಗಿತ್ತು ಎಂದು ಬಿಜೆಪಿ ಮುಖಂಡರೋರ್ವರು ಹೇಳಿದ್ದಾರೆ. ಹುದ್ದೆ ದೊರೆತಾಗ ಭ್ರಮೆ ಎನಿಸಿತ್ತು ಎಂದಿದ್ದಾರೆ. 

Legislative Council Deputy chairman mk pranesh felicitated at chikmagalur snr
Author
Bengaluru, First Published Feb 15, 2021, 3:04 PM IST

ಮೂಡಿಗೆರೆ (ಫೆ.15) :  ವಿಧಾನ ಪರಿಷತ್‌ನಲ್ಲಿ ಮೊದಲ ಬಾರಿಗೆ ಸದಸ್ಯನಾದ ತನ್ನ ಹೆಸರನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಉಪಸಭಾಪತಿ ಹುದ್ದೆಗೆ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಘೋಷಿಸಿದರು. ಆಗ ಆ ಹುದ್ದೆಯ ನಿರೀಕ್ಷೆಯಲ್ಲೂ ಇರದ ತನಗೆ ಸಿಡಿಲು ಬಡಿದ ಅನುಭವ. ಈ ಘೋಷಣೆ ತನಗೆ ಕನಸು ಕಂಡಿರಬಹುದೆಂದು ಸುಮಾರು ಅರ್ಧ ಗಂಟೆ ತಾನು ಮೂಕವಿಸ್ಮಿತನಾಗಿದ್ದೆ ಎಂದು ಉಪಸಭಾಪತಿ ಎಂ.ಕೆ.ಪ್ರಾಣೇಶ್‌ ಹೇಳಿದರು.

ಶುಕ್ರವಾರ ಸಂಜೆ ತಾ.ಪಂ. ವತಿಯಿಂದ ಪಂಡಿತ್‌ ದೀನ್‌ ದಯಾಳ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಉಪಸಭಾಪತಿ ಎಂ.ಕೆ.ಪ್ರಾಣೇಶ್‌ ಹಾಗೂ ತಾಲೂಕಿನ 22 ಗ್ರಾ.ಪಂ.ಯ ನೂತನ ಅಧ್ಯಕ್ಷ- ಉಪಾಧ್ಯಕ್ಷರಿಗೆ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಮಗೆ ದೊರೆತ ಹುದ್ದೆಯ ಸಂದರ್ಭದ ಮೆಲುಕು ಹಾಕಿದರು.

ಬಿಜೆಪಿ-ಜೆಡಿಎಸ್‌ ಮೈತ್ರಿ: ಉಪಸಭಾಪತಿಯಾಗಿ ಎಂ.ಕೆ. ಪ್ರಾಣೇಶ್‌ ಆಯ್ಕೆ .

1984ರಿಂದ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಆರಂಭದಲ್ಲಿ ಗೋಣಿಬೀಡು ಕ್ಷೇತ್ರದಿಂದ ಜಿ.ಪಂ. ಸದಸ್ಯನಾಗಿ, ಜಿಲ್ಲಾ ಮತ್ತು ತಾಲೂಕು ಯುವ ಮೋರ್ಚಾದ ಅಧ್ಯಕ್ಷರಾಗಿ, 2 ಬಾರಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ, ಒಮ್ಮೆ ಅರಣ್ಯ ವಸತಿ ವಿಹಾರಧಾಮ ನಿಗಮದ ಅಧ್ಯಕ್ಷರಾಗಿ, ಎಂಎಲ್‌ಸಿಯಾಗಿ ಕೊನೆಗೆ ಉಪ ಸಭಾಪತಿಯಂತಹ ಮಹತ್ವದ ಹುದ್ದೆ ತನ್ನ ಪಾಲಿಗೆ ಲಭಿಸಿದೆ. ಉಪಸಭಾಪತಿಯಾದ ಬಳಿಕ 5 ದಿನ ಪರಿಷತ್‌ ಸಭಾಪತಿ ಸ್ಥಾನ ಅಲಂಕರಿಸಿ ಆ ಹುದ್ದೆಯ ಅನುಭವ ಪಡೆದುಕೊಂಡಿದ್ದೇನೆ. ಎಲ್ಲರೊಂದಿಗೂ ಅನ್ಯೂನತೆಯಿಂದ ಉತ್ತಮ ಕೆಲಸ ನಿರ್ವಹಿಸುವುದಾಗಿ ಬದ್ದನಾಗಿರುವುದಾಗಿ ತಿಳಿಸಿದರು.

24 ಗಂಟೆಯಲ್ಲಿ 5 ಕಾಂಗ್ರೆಸ್ ಶಾಸಕರ ರಾಜೀನಾಮೆ: ಹೊಸ ಬಾಂಬ್ ಸಿಡಿಸಿದ ಸಚಿವ .

ಜೆಡಿಎಸ್‌ ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ಕುಮಾರ್‌ ಮಾತನಾಡಿ, ಗ್ರಾ.ಪಂ.ಯಲ್ಲಿ ಅಧಿಕಾರಕ್ಕೇರಿದವರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದಿದ್ದು, ಯಾರ ಅಧಿಕಾರದಲ್ಲೂ ಹಸ್ತಕ್ಷೇಪ ಮಾಡದೇ ಜನಮೆಚ್ಚುವ ರೀತಿಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾಮೀಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜತೆಗೆ ಗ್ರಾಮದ ಅಭಿವೃದ್ಧಿಗೆ ಮುಂದಾಗುವುದಾಗಿ ತಿಳಿಸಿದರು.

ತಾಪಂ ಅಧ್ಯಕ್ಷೆ ಭಾರತೀ ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪ್ರಮೀಳಾ, ಸದಸ್ಯರಾದ ಕೆ.ಸಿ.ರತನ್‌, ವೀಣಾ ಉಮೇಶ್‌, ಬಿ.ಎಲ್‌.ದೇವರಾಜು, ಸವಿತಾ ರಮೇಶ್‌, ಪ.ಪಂ. ಅಧ್ಯಕ್ಷ ಪಿ.ಜಿ.ಅನುಕುಮಾರ್‌, ಉಪಾಧ್ಯಕ್ಷ ಕೆ.ಸುಧೀರ್‌, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್‌.ರಘು, ಟಿಎಪಿಸಿಎಂಎಸ್‌ ಅಧ್ಯಕ್ಷ ಬಿ.ಎನ್‌.ಜಯಂತ್‌, ಇಒ ಎಂ.ವೆಂಕಟೇಶ್‌, ಪಿಡಿಒ ವಾಸುದೇವ್‌, ಪ್ರತಿಮಾ ಮತ್ತಿತರರಿದ್ದರು.

Follow Us:
Download App:
  • android
  • ios