ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರು ಸೋರುವಿಕೆ ಪ್ರಾರಂಭವಾಗಿದೆ ಅಣೆಕಟ್ಟೆ ಬಗ್ಗೆ ನಿವೃತ್ತ ತಹಸೀಲ್ದಾರ್‌ ಬದರೀನಾಥ್‌ ಮಾಹಿತಿ 2600 ಪುಟಗಳ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ

 ಮೈಸೂರು (ಜು.16): ಕನ್ನಂಬಾಡಿ ಅಣೆಕಟ್ಟೆ ಬಿರುಕು ಬಿಡದಿದ್ದರೂ, ನೀರು ಸೋರುವಿಕೆ ಪ್ರಾರಂಭವಾಗಿದೆ ಎಂದು ನಿವೃತ್ತ ತಹಸೀಲ್ದಾರ್‌ ಬದರೀನಾಥ್‌ ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಸದೆ ಸಮಲತಾ ಅಂಬರೀಷ್‌ ಅವರು ಕೆಆರ್‌ಎಸ್‌ ಅಣೆಕಟ್ಟೆಬಿರುಕು ಮೂಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಡ್ಯಾಂ ಬಿರುಕು ಬಿಡದಿದ್ದರೂ ನೀರು ಸೋರುವಿಕೆ ಪ್ರಾರಂಭವಾಗಿದೆ. ಈ ಬಗ್ಗೆ ಸರ್ಕಾರ ರಚಿಸಿದ ಸಮಿತಿಯಲ್ಲಿ, ಕರ್ತವ್ಯ ನಿರತನಾಗಿ 2600 ಪುಟಗಳ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

KRS ವಾರ್ನಿಂಗ್ ಬೆಲ್ : ಸುಮಲತಾ ಹೋರಾಟದ ಹಿಂದಿನ ಅಸಲಿಯತ್ತೇನು?

ಅಣೆಕಟ್ಟೆಯ ಯೋಜನೆ ಸರ್ಕಾರ ಬಳಿ ಇದ್ದರೂ ಅದನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತಂದಿಲ್ಲ. ಅಣೆಕಟ್ಟೆನಿರ್ಮಾಣವಾಗಿ 85 ವರ್ಷ ಕಳೆದರೂ ಅದರ ಯೋಜನೆಗಳ ಪೂರ್ಣ ಸ್ವರೂಪದ ಕಾರ್ಯ ಇಂದಿಗೂ ಪೂರ್ಣವಾಗಿಲ್ಲ. ಮೈಸೂರು ಮತ್ತು ಮದ್ರಾಸ್‌ ಸರ್ಕಾರದ ಒಪ್ಪಂದದಂತೆ 1.25 ಲಕ್ಷ ಎಕರೆಗೆ ನೀರಾವರಿ ಆಗಬೇಕಿತ್ತು. ಆದರೆ ಈಗಲೂ ಕೇವಲ 96.419 ಎಕರೆಗೆ ಮಾತ್ರ ನೀರಾವರಿ ಆಗುತ್ತಿದೆ. ಮಳವಳ್ಳಿ ತಾಲೂಕಿನ ಬಿ.ಜಿ. ಪುರ ಹೋಬಳಿಯ ಕೆಲವು ಗ್ರಾಮಗಳನ್ನು ವಿಶ್ವೇಶ್ವರಯ್ಯ ಅವರು ಆಗಲೇ ಸಿದ್ಧಪಡಿಸಿರುವ ನಕ್ಷೆಯಲ್ಲಿ ಸೇರಿಸಿದ್ದರು. ಆದರೆ ಈಗಲೂ ಆ ಪ್ರದೇಶಗಳು ಖುಷ್ಕಿಯಾಗಿವೆ. ಒಪ್ಪಂದದ ಪ್ರಕಾರ ಆ ಪ್ರದೇಶವನ್ನು ನೀರಾವರಿಗೆ ಒಳಪಡಿಸಬೇಕು ಎಂದರು.

ದೇಶದ ರಾಷ್ಟ್ರಗಳಿಂದ ಸುಮಾರು 5 ಟಿಎಂಸಿ ನೀರಿನ ಶೇಖರಣೆ ಬಗ್ಗೆ ಹಿಂದಿನ ಮೈಸೂರು ರಾಜರಿಗೆ ಅನುಮತಿ ನೀಡಿದ್ದರೂ ಅದರ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಿಲ್ಲ. ಇದರಿಂದಾಗಿ 5 ಟಿಎಂಸಿ ನೀರು ಪೋಲಾಗುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಅವರು ಹೇಳಿದರು