Asianet Suvarna News Asianet Suvarna News

ಹಿಪ್ಪುನೇರಳೆ ತೋಟಗಳಿಗೆ ಎಲೆ ಸುರುಳಿ ಕೀಟ ಹಾವಳಿ

ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಪ್ಪುನೇರಳೆ ತೋಟಗಳಿಗೆ ಎಲೆಸುರುಳಿ ಕೀಟದ ಹಾವಳಿ ಹೆಚ್ಚಾಗಿದ್ದು, ರಾಮನಗರ ಜಿಲ್ಲೆಯಲ್ಲಿಯೂ ಇದರ ಹಾವಳಿ ಕಂಡು ಬಂದಿದೆ.

Leaf curl pest in mulberry plantations snr
Author
First Published Nov 11, 2023, 9:56 AM IST

ರಾಮನಗರ :  ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಪ್ಪುನೇರಳೆ ತೋಟಗಳಿಗೆ ಎಲೆಸುರುಳಿ ಕೀಟದ ಹಾವಳಿ ಹೆಚ್ಚಾಗಿದ್ದು, ರಾಮನಗರ ಜಿಲ್ಲೆಯಲ್ಲಿಯೂ ಇದರ ಹಾವಳಿ ಕಂಡು ಬಂದಿದೆ.

ಇದರ ನಿಯಂತ್ರಣಕ್ಕೆ ಜಿಲ್ಲೆಯ ರೇಷ್ಮೆ ಬೆಳೆಗಾರರು ಹಿಪ್ಪುನೇರಳೆ ತೋಟಗಳಿಗೆ ಇಲಾಖೆ ಅಧಿಕಾರಿ, ಸಿಬ್ಬಂದಿ, ಸಂಶೋದನಾ ಸಂಸ್ಥೆಗಳ ವಿಜ್ಞಾನಿಗಳು ಶಿಫಾರಸ್ಸು ಮಾಡದ ಕಳಪೆ ಗುಣಮಟ್ಟದ ಕೀಟನಾಶಕಗಳನ್ನು ತಾಂತ್ರಿಕತೆ ಇಲ್ಲದೆ ಬಳಸುತ್ತಿರುವ ಪರಿಣಾಮ ಹಣ್ಣಾದ ರೇಷ್ಮೆ ಹುಳುಗಳು ಚಂದ್ರಿಕೆಗಳಲ್ಲಿ ಗೂಡು ಕಟ್ಟದೇ ಇರುವುದು/ಗೂಡು ಕಟ್ಟಿದರೂ ಸಹಾ ಗುಣಮಟ್ಟದ ಗೂಡುಗಳನ್ನು ಕಟ್ಟದೆ ಕಳಪೆ ಗುಣಮಟ್ಟದ ಗೂಡು ಕಟ್ಟುವುದು ಕಂಡುಬಂದಿದೆ.

ಇದರಿಂದ ಗೂಡಿನ ಇಳುವರಿ/ ಗೂಡಿನ ಬೆಲೆ ತುಂಬಾ ಕಡಿಮೆಯಾಗಿ ರೇಷ್ಮೆ ಬೆಳೆಗಾರರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಜಿಲ್ಲೆಯ ರೇಷ್ಮೆ ಬಿತ್ತನೆ ಪ್ರದೇಶ ಮಾಗಡಿ ತಾಲೂಕನ್ನು ಹೊರತುಪಡಿಸಿ ಕನಕಪುರ, ಹಾರೊಹಳ್ಳಿ, ಚನ್ನಪಟ್ಟಣ ಮತ್ತು ರಾಮನಗರ ತಾಲೂಕುಗಳಲ್ಲಿ ಒಟ್ಟು 27403 ರೇಷ್ಮೆ ಬೆಳೆಗಾರರಿದ್ದು, ಇವರು ತಮ್ಮ ಜೀವನೋಪಾಯಕ್ಕೆ ರೇಷ್ಮೆಯನ್ನೇ ಅವಲಂಬಿಸಿದ್ದಾರೆ.

2023-24ನೇ ಸಾಲಿನಲ್ಲಿ ಕನಕಪುರ ತಾಲೂಕಿನಲ್ಲಿ ಹೊಸದಾಗಿ ಎರಡು ಸ್ವಯಂ ಚಾಲಿತ ನೂಲು ಬಿಚ್ಚಾಣಿಕಾ ಘಟಕಗಳು ಪ್ರಾರಂಭವಾಗಿದ್ದು ಒಟ್ಟಾರೆ ಜಿಲ್ಲೆಯಲ್ಲಿ 23 ಸ್ವಯಂ ಚಾಲಿತ ನೂಲು ಬಿಚ್ಚಾಣಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಸ್ವಯಂ ಚಾಲಿತ ನೂಲು ಬಿಚ್ಚಾಣಿಕಾ ಘಟಕಗಳಿಗೆ ಪ್ರತಿ ನಿತ್ಯ ಸುಮಾರು 10-15 ಮೆಟ್ರಿಕ್ ಟನ್ ಗುಣಮಟ್ಟದ ದ್ವಿತಳಿ ರೇಷ್ಮೆ ಗೂಡುಗಳ ಬೇಡಿಕೆ ಇದೆ. ಈ ದ್ವಿತಳಿ ರೇಷ್ಮೆ ಗೂಡು ಉತ್ಪಾದನೆಯಾಗಬೇಕಾಗಿದ್ದಲ್ಲಿ ರೇಷ್ಮೆ ಹುಳುಗಳ ಏಕೈಕ ಅಹಾರ ಉತ್ತಮ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪಿನ ಅವಶ್ಯಕತೆ ಇದೆ. ಆದರೆ, ಹಿಪ್ಪುನೇರಳೆ ತೋಟಗಳಿಗೆ ಎಲೆಸುರುಳಿ ಕೀಟದ ಹಾವಳಿ ಕಂಡು ಬರುತ್ತಿದೆ.

ಕೀಟದ ಹಾವಳಿ ಕಂಡುಬಂದಲ್ಲಿ ಇಲಾಖೆಯ ಅಧಿಕಾರಿ/ ಸಿಬ್ಬಂದಿಗಳನ್ನು ಭೇಟಿ ಮಾಡಿ ಅವರು ಶಿಫಾರಸ್ಸು ಮಾಡುವ ಕೀಟನಾಶಕಗಳನ್ನು ಸೂಚಿಸುವ ರೀತಿಯಲ್ಲಿ ಮಾತ್ರ ಸಿಂಪಡಿಸಬೇಕು. ಇದರ ನಿಯಂತ್ರಣಕ್ಕಾಗಿ ಸಂಶೋದನಾ ಸಂಸ್ಥೆಗಳ ವಿಜ್ಞಾನಿಗಳ ಸಹಯೋಗದೊಂದಿಗೆ ಇಲಾಖೆಯ ಅಧಿಕಾರಿ/ಸಿಬ್ಬಂದಿಯವರು ಕರಪತ್ರ ಮುದ್ರಿಸಿ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಇಲಾಖೆಯು ದ್ವಿತಳಿ ರೇಷ್ಮೆ ಉತ್ಪಾದನೆ ಮಾಡಲು ಎಲ್ಲಾ ರೀತಿಯ ತಾಂತ್ರಿಕತೆ/ಆರ್ಥಿಕ ಸೌಲಭ್ಯಗಳನ್ನು ಒದಗಿಸುತ್ತಿದ್ದು, ರೇಷ್ಮೆ ಬೆಳೆಗಾರರು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ರಾಮನಗರ ಜಿಲ್ಲೆಯ ರೇಷ್ಮೆ ಉಪ ನಿರ್ದೇಶಕರಾದ ಸಿ.ಡಿ.ಬಸವರಾಜು ತಿಳಿಸಿದ್ದಾರೆ.

ದೇಶಿಯ ರೇಷ್ಮೆ ಒಳ್ಳೆ ಬೇಡಿಕೆ

ಚಿಕ್ಕಬಳ್ಳಾಪುರ :  ಚೀನಾದಲ್ಲಿ ರೇಷ್ಮೆ ಉತ್ಪಾದನೆ ನಿರಂತರವಾಗಿ ಕುಸಿಯುತ್ತಿದ್ದು ದೇಶೀಯವಾಗಿ ರೇಷ್ಮೆಗೆ ಉತ್ತಮ ಭವಿಷ್ಯವಿದೆ. ಇಲಾಖೆಗೆ ಸೇರಿದ ಭೂಮಿಗಳನ್ನು ಜತನದಿಂದ ಕಾಪಾಡಿಕೊಳ್ಳಲು ರೈತರು ಸನ್ನದ್ಧರಾಗಿರಬೇಕು ಎಂದು ರೇಷ್ಮೆ ಇಲಾಖೆ ಅಪರ ನಿರ್ದೇಶಕ ಆರ್. ನಾಗಭೂಷಣ್ ಹೇಳಿದರು.

ರೇಷ್ಮೆ ಇಲಾಖೆಯ ಅಪರ ನಿರ್ದೇಶಕ ಸ್ಥಾನದಿಂದ ಶನಿವಾರ ಸೇವಾ ನಿವೃತ್ತಿ ಹೊಂದಿದ ತಮಗೆ ನಗರ ಹೊರವಲಯದ ಚದಲಪುರ ರೇಷ್ಮೆ ಬಿತ್ತನೆ ಕೋಠಿ ಆವರಣದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆಯ ಚದಲಪುರ ರೇಷ್ಮೆ ಬಿತ್ತನೆ ಕೋಠಿ ಉಪ ನಿರ್ದೇಶಕರಾದ ಬೋಜಣ್ಣ, ಇಂದಿರಾ ಮಹದೇವ್, ಆಂಜನೇಯಗೌಡ, ಅಮರನಾಥ್, ಸಹಾಯ ನಿರ್ದೇಶಕರಾದ ನರಸಿಂಹಮೂರ್ತಿ, ಮದನಗೋಪಾಲರೆಡ್ಡಿ, ಚಿನ್ನಕೈವಾರಮಯ್ಯ ಮತ್ತಿತರರು ಇದ್ದರು.

ಹರಪನಹಳ್ಳಿಯಲ್ಲೇ ಹಿಪ್ಪು ನೇರಳೆ ಸಸಿ ಲಭ್ಯ

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ(ಸೆ.25): ರೇಷ್ಮೆ ಇಲಾಖೆ ಹಾಗೂ ತಾಪಂನ ನರೇಗಾ ವಿಭಾಗದ ನೆರವಿನಿಂದ ಕೂಲಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕಹಳ್ಳಿ ಗ್ರಾಮದಲ್ಲಿ ರೇಷ್ಮೆ ನರ್ಸರಿ ಪ್ರಾರಂಭವಾಗಿದ್ದು, ಇದರಿಂದ ದೂರದ ಜಿಲ್ಲೆಗಳಿಗೆ ತೆರಳಿ ಹಿಪ್ಪುನೇರಳೆ ಸಸಿ ತರಬೇಕಾಗಿದ್ದ ತಾಪತ್ರಯ ರೇಷ್ಮೆ ಬೆಳೆಗಾರರಿಗೆ ತಪ್ಪಿದಂತಾಗಿದೆ. ಇತ್ತೀಚೆಗೆ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹಾಗೂ ಜಿಲ್ಲಾಧಿಕಾರಿ ಮತ್ತು ಜಿಪಂನ ಸಿಇಒ ಅವರೇ ಖುದ್ದು ಹಿಪ್ಪುನೇರಳೆ (ರೇಷ್ಮೆ) ಕಡ್ಡಿ ನಾಟಿ ಮಾಡಿದ್ದರು.

ಅದೇ ನರ್ಸರಿಯಲ್ಲಿ ಇದೀಗ ಸಸಿಗಳು ಉತ್ತಮವಾಗಿ ಚಿಗುರಿದ್ದು, ಒಂದೂವರೆ ತಿಂಗಳಿಂದ ಎರಡು ತಿಂಗಳೊಳಗೆ ರೈತರಿಗೆ ಮಾರಾಟಗೊಂಡಿವೆ ಎನ್ನುತ್ತಾರೆ ತಾಲೂಕು ನರೇಗಾ ಸಹಾಯಕ ನಿರ್ದೇಶಕ ಯು.ಎಚ್. ಸೋಮಶೇಖರ್.

Follow Us:
Download App:
  • android
  • ios