ಇವರೆ ಬೆಂಬಲದಿಂದ ಜೆಡಿಎಸ್‌ ಮತ್ತಷ್ಟು ಗಟ್ಟಿಗೊಳಿಸಲು ಕರೆ

ಇವರೆಲ್ಲರ ಬೆಂಬಲವನ್ನು ಪಡೆಯುವ ಮೂಲಕ ಜೆಡಿಎಸ್ ಪಕ್ಷವನ್ನು ಶಕ್ತಿಯುತಗೊಳಿಸಲು ಕರೆ ನೀಡಲಾಗಿದೆ. 

Leaders Calls For Make JDS Party Strong

ಮಾಗಡಿ [ಮಾ.01]: ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರನ್ನು ಒಗ್ಗೂಡಿಸಿ ಜೆಡಿಎಸ್‌ ಪಕ್ಷವನ್ನು ಪ್ರಬಲವಾಗಿ ಸಂಘಟಿಸಿ ಎಂದು ಮಾಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪೂಜಾರಿಪಾಳ್ಯ ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ಜೆಡಿಎಸ್‌ ಕಚೇರಿಯಲ್ಲಿ ನೂತನವಾಗಿ ಜೆಡಿಎಸ್‌ ಪಕ್ಷದ ಕರ್ನಾಟಕ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಸಾಗರ್‌ ಗೌಡ ಹಾಗೂ ಮಾಗಡಿ ವಿಧಾನ ಸಭಾ ಕ್ಷೇತ್ರದ ಯುವ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ವಿಜಯ್‌ ಕುಮಾರ್‌ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಕ್ಷವನ್ನು ಬೇರು ಮಟ್ಟದಿಂದ ಬಲಗೊಳಿಸುವ ಕಾರ್ಯಕ್ಕೆ ಪದಾಧಿಕಾರಿಗಳು ಸಂಕಲ್ಪ ತೊಡಬೇಕು ಎಂದು ಕರೆ ನೀಡಿದರು.

ಮಾಗಡಿ ಜೆಡಿಎಸ್‌ ಪಕ್ಷದ ಭದ್ರಕೋಟೆ, ಶಾಸಕ ಎ.ಮಂಜುನಾಥ್‌ 52 ಸಾವಿರ ಮತಗಳಿಂದ ವಿಜೇತರಾಗಿರುವುದು ಇದಕ್ಕೆ ಸಾಕ್ಷಿ. ಕಳೆದ 20 ವರ್ಷಗಳಿಂದ ತಾಲೂಕಿನಲ್ಲಿ ಆಗದಿರುವ ಅಭಿವೃದ್ಧಿ ಕಾರ್ಯಗಳು ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ 14 ತಿಂಗಳಲ್ಲಿ ಆಗಿದೆ. ಈ ಅಭಿವೃದ್ಧಿ ಕೆಲಸವನ್ನು ಮನೆಮನೆಗೆ ತಲುಪಿಸಿ ಎಂದು ಸಲಹೆ ನೀಡಿದರು.

ಹೇಮಾವತಿ ತರಲು ಇದ್ದ ಅಡ್ಡಿ ನಿವಾರಣೆ:

ಮಾಗಡಿ ತಾಲೂಕಿನ 86 ಕೆರೆಗಳಿಗೆ ನೀರು ಪೂರೈಸುವ ಹೇಮಾವತಿ ನೀರಾವರಿ ಯೋಜನೆಯ ಕಾಮಗಾರಿ ರೈತರು ತೊಂದರೆ ನೀಡುತ್ತಿರುವ ಕಾರಣ ವಿಳಂಬವಾಗಿದೆ. ಸಂಸದ ಡಿ.ಕೆ. ಸುರೇಶ್‌ ಹಾಗೂ ಶಾಸಕ ಎ. ಮಂಜುನಾಥ್‌ ಹೇಮಾವತಿಗೆ ಜಲಾಶಯಕ್ಕೆ ಖುದ್ದು ಭೇಟಿ ನೀಡಿ ಕಾಮಗಾರಿಗೆ ವೇಗ ನೀಡುತ್ತಾರೆ. ಮಂಚನಬೆಲೆ ಹಾಗೂ ವೈ.ಜಿ. ಗುಡ್ಡ ಜಲಾಶಯಕ್ಕೆ ಕಣ್ಣ ನದಿಯಿಂದ ನೀರು ಹರಿಸುವ ಯೋಜನೆಗೂ ಸಹ ಶೀಘ್ರವಾಗಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಬಿಎಸ್‌ವೈ ಹುಟ್ಟುಹಬ್ಬಕ್ಕೆ ಹೋದ ಸಿದ್ದುಗೆ ಕಾಂಗ್ರೆಸ್ಸಲ್ಲೇ ವಿರೋಧ ...

ಜೆಡಿಎಸ್‌ ಪಕ್ಷದ ಕರ್ನಾಟಕ ರಾಜ್ಯ ಯುವ ಘಟಕದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸಾಗರ್‌ ಗೌಡ ಮಾತನಾಡಿ, ಪಕ್ಷದ ಮುಖಂಡರು ತಮ್ಮ ಮೇಲೆ ಭರವಸೆ ಇಟ್ಟು ಪ್ರಮುಖ ಜವಾಬ್ದಾರಿಯನ್ನು ನೀಡಿದ್ದಾರೆ. ತಾವು ಸಹ ರಾಜ್ಯದಾದ್ಯಂತ ಸಂಚರಿಸಿ ಯುವಕರನ್ನು ಸಂಘಟಿಸಿ ಪಕ್ಷವನ್ನು ಬಲಪಡಿಸುತ್ತೇನೆ. ಬೂತ್‌ಮಟ್ಟದಲ್ಲಿರುವ ಯುವಕರನ್ನು ಗುರುತಿಸಿ ಆಯಾ ವ್ಯಾಪ್ತಿಯಲ್ಲಿ ಪಕ್ಷವನ್ನು ಸದೃಢಗೊಳಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಶಾಸಕ ಎ.ಮಂಜುನಾಥ್‌ ಸೇರಿದಂತೆ ಪಕ್ಷದ ಮುಖಂಡರು ನನ್ನ ಮೇಲಿರಿಸಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದರು.

ಎಲ್ಲರ ಪಕ್ಷ:

ವಿಧಾನ ಸಭಾ ಕ್ಷೇತ್ರದ ಯುವ ಘಟಕದ ಅಧ್ಯಕ್ಷ ವಿಜಯ್‌ಕುಮಾರ್‌ ಮಾತನಾಡಿ, ಕಾಂಗ್ರೆಸ್‌ ಹಾಗೂ ಬಿಜೆಪಿ ಒಂದೊಂದು ಸಮುದಾಯಕ್ಕೆ ಬ್ರಾಂಡ್‌ ಆಗಿದೆ. ಅದರೆ, ಜೆಡಿಎಸ್‌ ಪಕ್ಷ ಎಲ್ಲಾ ಸಮುದಾಯದವರಿಗೂ ಸಮಾನ ಅವಕಾಶಗಳನ್ನು ನೀಡುವ ಮೂಲಕ ಸರ್ವ ಧರ್ಮಿಯರ ಪಕ್ಷವಾಗಿದೆ. ಮಾಗಡಿ ತಾಲೂಕಿನಲ್ಲಿ ಸುಭದ್ರವಾದ ಅಡಿಪಾಯವನ್ನು ಜೆಡಿಎಸ್‌ ಹೊಂದಿದ್ದು, ಅದನ್ನು ಇನ್ನಷ್ಟುಪ್ರಬಲವಾಗಿ ಸಂಘಟಿಸಲು ಎಲ್ಲಾ ರೀತಿಯ ಪ್ರಯತ್ನವನ್ನು ನಡೆಸುತ್ತೇನೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios