ರಾಯಚೂರು ನಗರ ಅಭಿವೃದ್ಧಿಗೆ ಕೆನಡಾ ಮೂಲದ ಕಂಪೆನಿಯಿಂದ ಮಾಸ್ಟರ್ ಪ್ಲಾನ್
ಕೆನಡಾ ಮೂಲದ ಎಲ್ಇಎ ಇಂಟರ್‌ನ್ಯಾಶನಲ್ ಏಜೆನ್ಸಿ ರಾಯಚೂರು ನಗರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡಿದ್ದು, ಸರಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ.
ಬೆಂಗಳೂರು (ಜು.26): ರಾಯಚೂರು ನಗರದ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಭವಿಷ್ಯದ ಬೆಳವಣಿಗೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಲಿಯಾ (ಎಲ್‌ಇಎ) ಕನ್ಸಲ್ಟೆಂಟ್ಸ್ ಸಂಸ್ಥೆಯು ಪರಿಷ್ಕೃತ ಮಾಸ್ಟರ್ ಪ್ಲಾನ್ ನೀಡಿದ್ದು, ಇದರಲ್ಲಿ ಬದಲಾವಣೆ ಸೂಚಿಸಲಾಗಿದೆ. ಸಂಸ್ಥೆಯು ಪರಿಷ್ಕೃತ ಮಾಸ್ಟರ್‌ಪ್ಲಾನ್ ನೀಡಿದ ನಂತರ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಯೋಜನೆ ಅಂತಿಮಗೊಳಿಸಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಬೋಸರಾಜ್ (minister N S Boseraju) ಹೇಳಿದ್ದಾರೆ.
ಕೆನಡಾ ಮೂಲದ ಎಲ್ಇಎ ಇಂಟರ್‌ನ್ಯಾಶನಲ್ ಏಜೆನ್ಸಿ, ನಗರಾಭಿವೃದ್ಧಿ ತಜ್ಞರು, ಐತಿಹಾಸಿಕವಾಗಿ ಮಹತ್ವದ ಸಂಪ್ರದಾಯಗಳು, ಸಂಸ್ಕೃತಿ, ಪರಂಪರೆ ಮತ್ತು ಚಿಹ್ನೆಗಳ ಸಂರಕ್ಷಣೆ ಮತ್ತು ಸಂರಕ್ಷಣೆಗೆ ಒತ್ತು ನೀಡಿ ರಾಯಚೂರು ನಗರದ ಸರ್ವತೋಮುಖ ಅಭಿವೃದ್ಧಿಯ ಕುರಿತು ಕರ್ನಾಟಕ ಸರ್ಕಾರಕ್ಕೆ ಮೊದಲ ಮಧ್ಯಂತರ ವರದಿಯನ್ನು ಸಲ್ಲಿಸಿದ್ದಾರೆ.
4000 ಕೋಟಿ ಮೌಲ್ಯದ ಅರಮನೆಯಲ್ಲಿದ್ದರೂ ಸ್ವಂತ ದುಡಿಮೆಗೆ ತರಕಾರಿ ಮಂಡಿ ತೆರೆ
ವಿಕಾಸಸೌಧದಲ್ಲಿ ಮಂಗಳವಾರ ನಗರ ಯೋಜನೆಯಲ್ಲಿ ಪರಿಣಿತಿ ಹೊಂದಿರುವ ಲಿಯಾ ಕನ್ಸಲ್ಟೆಂಟ್ಸ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರು ರಾಯಚೂರು ನಗರ ಅಭಿವೃದ್ದಿಗೆ ನೀಡಿರುವ ಪ್ರಾಥಮಿಕ ವರದಿಯನ್ನು ಪರಿಶೀಲಿಸಿದರು. ಬಳಿಕ ಕೆಲ ಬದಲಾವಣೆಗಳಿಗೆ ಸೂಚಿಸಿದರಲ್ಲದೆ ಬದಲಾವಣೆಯೊಂದಿಗೆ ಬಂದ ಎರಡನೇ ವರದಿಯನ್ನು ಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಂತಿಮಗೊಳಿಸುವ ಭರವಸೆ ನೀಡಿದರು.
ರೀ-ಬೂಟ್ ರಾಯಚೂರು: ಕಲ್ಯಾಣ ಕರ್ನಾಟಕ ಪ್ರಮುಖ ಜಿಲ್ಲಾ ಕೇಂದ್ರವಾಗಿರುವ ರಾಯಚೂರು ಮೊದಲು ನಿಜಾಮ್ ಆಳ್ವಿಕೆಯಲ್ಲಿತ್ತು ಮತ್ತು ತನ್ನದೇ ಆದ ವಿಶೇಷ ಮತ್ತು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ನಗರದ ವಿಭಿನ್ನ ಜೀವನ ಶೈಲಿಯನ್ನು ಕಾಪಿಡುವ ಜೊತೆಯಲ್ಲೇ ನಗರದ ಸಮಗ್ರ ಅಭಿವೃದ್ಧಿಗಾಗಿ ಹೊಸ ವಿನ್ಯಾಸವನ್ನ ಲಿಯಾ ಕನ್ಸಲ್ಟೆಂಟ್ಸ್‌ನವರು ತಮ್ಮ ವರದಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ನಗರವನ್ನು ಹೊಸ ವಿನ್ಯಾಸ ಜಾಗತಿಕ ಗುಣಮಟ್ಟದ ನಗರ ಮಾಡುವತ್ತ ಒತ್ತು ನೀಡಲಾಗುತ್ತದೆ. ಈ ವರದಿಯಲ್ಲಿ ನಗರದ ಸಚ್ಛತೆ, ರಸ್ತೆಗಳನ್ನು ಉತ್ತಮಗೊಳಿಸುವುದು, ಉದ್ಯಾನಗಳ ನಿರ್ಮಾಣ, ವೈಜ್ಞಾನಿಕವಾಗಿ ಕಸ ವಿಲೇವಾರಿ ಮತ್ತಿತರ ಅಂಶಗಳು ಸೇರಿವೆ ಎಂದರು.
ತರಕಾರಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಹುಡುಗನೀಗ 8200 ಕೋಟಿ ರೂ ಆಸ್ತಿಗೆ ಒಡೆಯ!
ಅಲ್ಲದೆ, ರಾಯಚೂರು ನಗರವನ್ನು ಪಶ್ಚಿಮ ಭಾಗದಲ್ಲಿ ವಿಸ್ತರಣೆಗೆ ವ್ಯಾಪಕ ಅವಕಾಶವಿದೆ. ಇದು ನಗರವನ್ನು ಜನವಸತಿ ಮತ್ತು ಕೈಗಾರಿಕಾ ವಲಯಗಳನ್ನಾಗಿ ವಿಭಾಗಿಸಲು ಅನುವು ಮಾಡಿಕೊಡಲಿದೆ. ಸುಮಾರು 20 ಸಾವಿರ ಎಕರೆಗಳಷ್ಟುಜಾಗ ದೊರೆಯಲಿದ್ದು, ವಿಶಾಲ ಉದ್ಯಾನವನ, ಯೋಜನಾಬದ್ದ ರಸ್ತೆಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಇಲ್ಲಿ ಅಭಿವೃದ್ದಿಗೊಳಿಸಬಹುದಾಗಿದೆ ಎಂದು ಹೇಳಿದರು.