ನ್ಯಾಯಾಲಯದಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸುವಂತೆ ಧರಣಿ

ಡಾ.ಭೀಮರಾವ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ನ್ಯಾಯಾಲಯಗಳಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿ ವಕೀಲರು ಇಂದು ಅಂಬೇಡ್ಕರ್ ವೃತ್ತದ ಮುಂಭಾಗದಲ್ಲಿ ಕುಳಿತು ಧರಣಿ ನಡೆಸಿದರು. 

Lawyer protest for  install Ambedkars portrait in the court wall rav

ಚಿತ್ರದುರ್ಗ (ಡಿ.9) : ಡಾ.ಭೀಮರಾವ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ನ್ಯಾಯಾಲಯಗಳಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿ ವಕೀಲರು ಇಂದು ಅಂಬೇಡ್ಕರ್ ವೃತ್ತದ ಮುಂಭಾಗದಲ್ಲಿ ಕುಳಿತು ಧರಣಿ ನಡೆಸಿದರು. 

ಸ್ವಾತಂತ್ರ್ಯ ಭಾರತಕ್ಕೆ ಮಹಾತ್ಮ ಗಾಂಧೀಜಿ ಎಷ್ಟು ಮುಖ್ಯವೋ ದೇಶದ ಆಡಳಿತವನ್ನು ಸುಲಲಿತವಾಗಿ ನಡೆಸಲು ಸಂವಿಧಾನ ರಚಿಸಿದ ಅಂಬೇಡ್ಕರ್ ಕೂಡ ಅಷ್ಟೇ ಮುಖ್ಯ. ನ್ಯಾಯಾಂಗ ಇಲಾಖೆಗೆ ಸಂವಿಧಾನ ಭದ್ರ ಬುನಾದಿಯಾಗಿದೆ. ಅಂಬೇಡ್ಕರ್ ಭಾವಚಿತ್ರ ಎಲ್ಲಾ  ಸರ್ಕಾರಿ ಇಲಾಖೆಯ ಕಚೇರಿಗಳಲ್ಲಿ ಹಾಕಲಾಗಿದೆ ಆದರೆ ನ್ಯಾಯಾಲಯದ ಕಚೇರಿಗಳಲ್ಲಿ ಮಾತ್ರ ಅಳವಡಿಸದೇ ಇರುವುದು ವಿಷಾದಕರ ಸಂಗತಿಯಾಗಿದೆ ಎಂದರು.

BIG 3: ಉದ್ಘಾಟನೆಯಾಗದೆ ಪಾಳು ಬಿದ್ದಿರುವ ರಾಯಚೂರಿನ ಅಂಬೇಡ್ಕರ್ ಭವನ

ನ್ಯಾಯಾಲಯಗಳಲ್ಲಿ‌ ನ್ಯಾಯಾಧೀಶರು ಕೂಡ ಸಂವಿಧಾನದ ಮೂಲಕವೇ ಸಂವಿಧಾನವನ್ನು ಎತ್ತಿಹಿಡಿಯುತ್ತೇವೆ. ಯಾವುದೇ ಪಕ್ಷಬೇಧ ಇಲ್ಲದೆ ನ್ಯಾಯ ಒದಗಿಸುತ್ತೇವೆ ಎಂದು ಸಂವಿಧಾನದ ಮೇಲೆ ಪ್ರಮಾಣ ವಚನವನ್ನು ಸ್ವೀಕರಿಸಿರುತ್ತಾರೆ. ಆದರೆ ಆ ಸಂವಿಧಾನ ಕಾನೂನನ್ನು ಬರೆದಂತಹ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಾಕದಿರುವುದು ದುರದೃಷ್ಟಕರ.

 ಕಡು ಬಡತನದಲ್ಲಿ ಬೆಳೆದು, ಬಡವರಿಗಾಗಿಯೇ ತಮ್ಮ ಜೀವನವನ್ನು ಸಮರ್ಪಿಸಿರುವ ಅಂಬೇಡ್ಕರ್ ಅವರ ಭಾವಚಿತ್ರವನ್ನು ನ್ಯಾಯಾಲಯದ ಹಾಲ್ ನಲ್ಲಿ ಅಳವಡಿಸಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮನವಿ ಸಲ್ಲಿಸಿದರು. ಧರಣಿಯಲ್ಲಿ ಭೀಮ, ರಮೇಶ್, ಸಿದ್ದಾಪುರ ದುರುಗೇಶ್, ಮಲ್ಲಿಕಾರ್ಜುನ ಭಾಗವಹಿಸಿದ್ದರು.

"ಬಂಧುತ್ವ ಇಲ್ಲದ ಹಿಂದುತ್ವ ದೇಶಕ್ಕೆ ಅಪಾಯಕಾರಿ": ಜ್ಞಾನಪ್ರಕಾಶ ಸ್ವಾಮೀಜಿಯಿಂದ ಟೀಕೆ

Latest Videos
Follow Us:
Download App:
  • android
  • ios