ನಗರದ ಸೂಪರ್‌ ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ ಅಂಗಡಿಗಳನ್ನು ತೆರವು  ಸಹಾಯಕ ಪೊಲೀಸ್‌ ಆಯುಕ್ತೆ (ಎಸಿಪಿ) ಜಿ.ಅನುಷಾ ಮೇಲೆ ಸೀಮೆ ಎಣ್ಣೆ ಸುರಿದ ವಕೀಲ

ಧಾರವಾಡ (ಆ.14): ನಗರದ ಸೂಪರ್‌ ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದ ವೇಳೆ ನಡೆದ ಗಲಾಟೆಯಲ್ಲಿ ಸಹಾಯಕ ಪೊಲೀಸ್‌ ಆಯುಕ್ತೆ (ಎಸಿಪಿ) ಜಿ.ಅನುಷಾ ಅವರ ಮೇಲೆ ಹೋರಾಟಗಾರ, ನ್ಯಾಯವಾದಿಯೂ ಆದ ಎಂ.ಎಂ. ಚೌಧರಿ ಸೀಮೆಎಣ್ಣೆ ಸುರಿದಿದ್ದಾರೆಂಬ ವಿಡಿಯೋ ವೈರಲ್‌ ಆಗಿದೆ. 

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟಿದ್ಯಾರು..? ಇಲ್ಲಿದೆ ಸ್ಫೋಟಕ ವಿಡಿಯೊ

ಅನಧಿಕೃತ ಅಂಗಡಿಗಳ ತೆರವಿಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಚೌಧರಿ ತೆರವಿಗೆ ಅಡ್ಡಿಪಡಿಸಿದ್ದರು. ಗುರುವಾರ ಮಧ್ಯಾಹ್ನ ಕಾರಾರ‍ಯಚರಣೆ ನಡೆಯುತ್ತಿರುವ ಸಮಯದಲ್ಲಿ ಸೀಮೆಎಣ್ಣೆ ಡಬ್ಬದೊಂದಿಗೆ ಆಗಮಿಸಿದ ಚೌಧರಿ, ಎಸಿಪಿ ಅನುಷಾ ಸೇರಿದಂತೆ ಸ್ಥಳದಲ್ಲಿದ್ದ ಕೆಲವು ಪೊಲೀಸರ ಮೇಲೆ ಸೀಮೆಎಣ್ಣೆ ಸುರಿದಿದ್ದಾರೆ ಎಂದು ಎಸಿಪಿ ಆರೋಪಿಸಿದ್ದಾರೆ. 

ಕರ್ತವ್ಯನಿರತ ಸರ್ಕಾರಿ ಅಧಿಕಾರಿಗೆ ಅಡ್ಡಿಪಡಿಸಿದ್ದಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.