Asianet Suvarna News Asianet Suvarna News

ಕೆಆರ್ ಎಸ್ ಬೃಂದಾವನದಲ್ಲಿ ಸಂಗೀತ ನೃತ್ಯಕಾರಂಜಿಗೆ ಚಾಲನೆ

ತಾಲೂಕಿನ ಕೆಆರ್ ಎಸ್ ಬೃಂದಾವನದಲ್ಲಿ ಹೊಸ ಮಾದರಿಯಲ್ಲಿ ನವೀಕರಣಗೊಂಡಿರುವ ಸಂಗೀತ ಕಾರಂಜಿಗೆ ಭಾನುವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.

Launch of Sangeet Dance Fountain at KRS Brindavans snr
Author
First Published Oct 16, 2023, 9:17 AM IST

  ಶ್ರೀರಂಗಪಟ್ಟಣ ;  ತಾಲೂಕಿನ ಕೆಆರ್ ಎಸ್ ಬೃಂದಾವನದಲ್ಲಿ ಹೊಸ ಮಾದರಿಯಲ್ಲಿ ನವೀಕರಣಗೊಂಡಿರುವ ಸಂಗೀತ ಕಾರಂಜಿಗೆ ಭಾನುವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.

ನಂತರ ಕೆಆರ್ ಎಸ್ ಡ್ಯಾಮ್ ನಲ್ಲಿ ವಿದ್ಯುತ್ ದೀಪಲಂಕಾರವನ್ನು ಉದ್ಘಾಟಿಸಿದ್ದರು. ಈ ವೇಳೆ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಎನ್.ಯತೀಶ್, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

ವಿಶ್ವ ವಿಖ್ಯಾತ ಬೃಂದಾವನದಲ್ಲಿ ಈ ಹಿಂದೆ ಇದ್ದ ಹಳೇ ಮಾದರಿಯ ಸಂಗೀತ ಕಾರಂಜಿ ತೆರವು ಮಾಡಿ ಹೊಸದಾಗಿ ನವೀಕರಣ ಮಾಡಲಾಗಿದೆ. ಬೃಂದಾವನಕ್ಕೆ ಮೈಸೂರು ಹಾಗೂ ಶ್ರೀರಂಗಪಟ್ಟಣ ದಸರಾ ಅಂಗವಾಗಿ ವಿಶೇಷ ದೀಪಾಲಂಕಾರ ಮಾಡಲಾಗಿದೆ.

ಸುಮಾರು 2 ಕೋಟಿ ವೆಚ್ಚದಲ್ಲಿ ಸಂಗೀತ ನೃತ್ಯ ಕಾರಂಜಿಯನ್ನು ನವೀಕರಣ ಗೊಳಿಸಲಾಗಿದ್ದು ಕಾರಂಜಿಗೆ ಆಧುನಿಕ ಲೇಸರ್ ದೀಪ ಸೇರಿದಂತೆ ಹೊಸ ನೃತ್ಯ ಸಂಯೋಜನೆ ಅಳವಡಿಸಿದ್ದು ಗಮನ ಸೆಳೆಯಿತು.

ಸಂಗೀತ ಕಾರಂಜಿಗೆ ಚಾಲನೆ ನೀಡಿದ ನಂತರ ಗಮನ ಸೆಳೆದ ಲೇಸರ್ ದೀಪ, ಹೊಸ ನೃತ್ಯ ಸಂಯೋಜನೆ ಬೃಂದಾವನಕ್ಕೆ ಆಗಮಿಸಿದ್ದ ಪ್ರವಾಸಿಗರನ್ನು ಆಕರ್ಷಿಸಿತು.

KRS  ಪ್ರದೇಶದಲ್ಲಿ ಶ್ರಮದಾನ 

  ಮೈಸೂರು :  ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಅಂಗವಾಗಿ ಮೈಸೂರು ತಾಲೂಕಿನ ಆನಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನಾಕ್ಷಿಪುರ ಗ್ರಾಮದ ಕೆಆರ್ ಎಸ್ ಹಿನ್ನೀರು ಪ್ರದೇಶದಲ್ಲಿ ಜಿಪಂ ಸಿಇಒ ಕೆ.ಎಂ. ಗಾಯತ್ರಿ ಅವರ ನೇತೃತ್ವದಲ್ಲಿ ಭಾನುವಾರ ಶ್ರಮದಾನ ನಡೆಸಲಾಯಿತು.

ಈ ವೇಳೆ ಕೆ.ಎಂ. ಗಾಯತ್ರಿ ಮಾತನಾಡಿ, ಈ ಶ್ರಮದಾನ ಕಾರ್ಯಕ್ರಮದ ಮೂಲಕ ಗ್ರಾಮಸ್ಥರಲ್ಲಿ ಸ್ವಚ್ಛತೆಯ ಕುರಿತು ಅರಿವನ್ನು ಮೂಡಿಸಲಾಗಿದೆ. ಗ್ರಾಮೀಣ ಭಾಗದ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯ ಮುಂಭಾಗ ಹಾಗೂ ಅಕ್ಕ ಪಕ್ಕದ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಎಲ್ಲೆಂದರಲ್ಲಿ ಕಸ ಹಾಕಬಾರದು. ಗ್ರಾಪಂ ಕಸ ಸಂಗ್ರಹಿಸುವ ವಾಹನಗಳಲ್ಲೇ ಕಸ ಹಾಕುವ ಮೂಲಕ ಸ್ವಚ್ಛತೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ಇದೇ ವೇಳೆ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯ ಅಂಗವಾಗಿ ಗ್ರಾಮದ ಹಿರಿಯರಾದ ಶತಾಯುಸಿ ಕೃಷ್ಣೆಗೌಡ (103), ಪುಟ್ಟರಾಮೇಗೌಡ (83), ಮಾದನಾಯಕ (85), ಸುಬ್ರಮಣಿ (90) ಅವರನ್ನು ಭಾರತೀಯ ಚುನಾವಣಾ ಆಯೋಗದ ಅಭಿನಂದನ ಪತ್ರವನ್ನು ನೀಡುವ ಮೂಲಕ ಸನ್ಮಾನಿಸಲಾಯಿತು.

ಬುಲೆಟ್ ವೇಗದಲ್ಲಿ ಸ್ವಚ್ಛತೆ

ಬೆಂಗಳೂರು (ಅ.2): ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ನಗರದ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು 'ಮಿರಾಕಲ್' 14 ನಿಮಿಷಗಳು' ಎಂಬ ಹೆಸರಿನಡಿ ಸ್ವಚ್ಛಗೊಳಿಸುವ ವ್ಯವಸ್ಥೆ ಆರಂಭಿಸಿದೆ.

ಭಾನುವಾರ ಮಧ್ಯಾಹ್ನ ಯಶವಂತಪುರ ರೈಲು ನಿಲ್ದಾಣ(Yaswantapur railway station)ಕ್ಕೆ ಆಗಮಿಸಿದ ಕಾಚಿಗುಡ ಯಶವಂತಪುರ ವಂದೇ ಭಾರತ್‌ ಎಕ್ಸ್‌ಪ್ರೆಸ್‌(Vande bharat express) ರೈಲನ್ನು ಕೇವಲ 13 ನಿಮಿಷಗಳಲ್ಲಿ ಸ್ವಚ್ಛಗೊ ಳಿಸಿ ಪ್ರಯಾಣಿಕರಿಗೆ ರೈಲು ಹತ್ತಲು ಸಿದ್ಧಗೊಳಿಸಲಾಯಿತು. ಮೊದಲೇ ಸಿದ್ಧಗೊಂಡಿದ್ದ 25ಕ್ಕೂ ಹೆಚ್ಚಿನ ಸ್ವಚ್ಛತಾ ಸಿಬ್ಬಂದಿ ರೈಲಿನಿಂದ ಪ್ರಯಾಣಿಕರು ಇಳಿದ ತಕ್ಷಣ ಸ್ವಚ್ಛಗೊಳಿಸಿ ಜನರಿಗೆ ಪ್ರಯಾಣಿಸಲು ಮಾಡಿಕೊಟ್ಟರು.

Follow Us:
Download App:
  • android
  • ios