Asianet Suvarna News Asianet Suvarna News

ಆಧಾರ್‌ ತಿದ್ದುಪಡಿ ಮಾಡ್ಸೋಕೆ ಬಂದವ್ರ ಮೇಲೆ ಲಾಠಿ ಪ್ರಹಾರ

ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಜನ ದಿನನಿತ್ಯ ಅಧಾರ್‌ ಸೆಂಟರ್‌ಗೆ ಬಂದರೂ ಕೆಲಸ ಮಾತ್ರ ವಿಳಂಬವಾಗುತ್ತಲೇ ಇತ್ತು. ಇದರಿಂದ ಕೋಪಗೊಂಡ ಸಾರ್ವಜನಿಕರು, ಆಧಾರ್ ಸೆಂಟರ್ ಆಪರೇಟರ್ ನಡುವೆ ಜಟಾಪಡಿ ನಡೆದಿದೆ. ಆಧಾರ್ ತಿದ್ದುಪಡಿ ವಿಳಂಬವಾಗಿರುವುದನ್ನು ಪ್ರಶ್ನಿಸಿದ ಜನರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. 

lathi charge on People who came to update Aadhar details in Tumkur
Author
Bangalore, First Published Aug 4, 2019, 9:08 AM IST

ತುಮಕೂರು(ಆ.04): ಅ​ಧಾರ್‌ ತಿದ್ದು​ಪಡಿ ವಿಳಂಬ​ದ ವಿರುದ್ಧ ಅಧಾರ್‌ ಸೆಂಟರ್‌ ಆಪರೇ​ಟರ್‌ ಮತ್ತು ಸಾರ್ವಜನಿಕರ ಮಧ್ಯೆ ಜಟಾಪಟಿ ನಡೆ​ದಿದ್ದು, ಪೊಲೀ​ಸರ ಲಘು ಲಾಠಿ ಪ್ರಹಾ​ರ ನಡೆ​ಸಿದ ಘಟನೆ ಪಾವ​ಗಡ ತಾಲೂಕು ಕಚೇ​ರಿಯ ಬಳಿ ನಡೆ​ದಿ​ದೆ.

ಆಪರೇಟರ್‌ಗಳ ನಿರ್ಲಕ್ಷ್ಯ:

ತಾ​ಲೂಕು ಕಚೇ​ರಿಯ ಅಧಿ​ಕಾ​ರಿ​ ಮತ್ತು ಅಧಾರ್‌ ತಿದ್ದು​ಪಡಿ ಅಪ​ರೇ​ಟ​ರ್‌​ಗಳ ತಪ್ಪು ಮಾಹಿತಿ ಮೇರೆಗೆ ಶನಿವಾರ ಗ್ರಾಮೀಣ ಪ್ರದೇ​ಶ​ಗ​ಳಿಂದ ಆಗ​ಮಿ​ಸಿದ್ದ ರೈತರು, ನಾಗರಿಕರು ಸೇರಿ​ದಂತೆ ಸಾವಿ​ರಾರು ಮಂದಿ ಜನ​ಸಾ​ಮಾ​ನ್ಯರು ಬೆಳಗ್ಗೆ 6 ಗಂಟೆಗೆ ತಾಲೂಕು ಕ​ಚೇರಿಗೆ ಬಳಿ ಜಮಾ​ಯಿಸಿ ಸರದಿ ಸಾಲಿ​ನಲ್ಲಿ ನಿಂತಿ​ದ್ದ​ರು. ತಿದ್ದು​ಪಡಿಯಲ್ಲಿ ತಿಂಗ​ಳು​ಗ​ಟ್ಟಲೇ ಅಪ​ರೇ​ಟ​ರ್‌​ಗಳ ನಿರ್ಲಕ್ಷ್ಯದಿಂದ ಬೇಸತ್ತಿದ್ದ ಸಾರ್ವಜನಿಕರು ಬೆಳಗ್ಗೆ 9ಗಂಟೆಗೆ ಅಧಾರ್‌ ಸೆಂಟರ್‌ ಬಾಗಿಲು ತೆರೆ​ಯು​ತ್ತಿ​ದ್ದಂತೆ ಅಧಿಕಾರಿ ಮತ್ತು ಅಧಾರ್‌ ವಿಭಾ​ಗದ ಅಪ​ರೇ​ಟ​ರ್‌​ಗ​ಳನ್ನು ಹಿಗ್ಗಾ​ಮುಗ್ಗಾ ತರಾ​ಟೆಗೆ ತೆಗೆ​ದು​ಕೊಂಡು ಛೀಮಾರಿ ಹಾಕಿ​ದ ಪ್ರಸಂಗ ನಡೆ​ದಿದೆ.

ಪೊಲೀಸರ ಮಧ್ಯಪ್ರವೇಶ:

ಇದೇ ವೇಳೆ ಅಪ​ರೇ​ಟರ್‌ ಮತ್ತು ಸಾವ​ರ್‍ಜನಿ​ಕರ ಮಧ್ಯೆ ದೊಡ್ಡ ಮಟ್ಟದ ವಿವಾದ ಸೃಷ್ಟಿ​ಯಾಗಿ ಜಟಾ​ಪ​ಟಿಯ ಅಬ್ಬರ ಜೋರಾ​ಗು​ತ್ತಿ​ದ್ದಂತೆ ಪಕ್ಕ​ದ​ಲ್ಲಿಯೇ ಇದ್ದ ಪೊಲೀ​ಸರು ಕೂಡಲೇ ಸ್ಥಳಕ್ಕೆ ಆಗ​ಮಿಸಿ ಸರದಿ ಸಾಲಿ​ನ​ಲ್ಲಿದ್ದ ಸಾರ್ವಜನಿಕರ ಮೇಲೆ ಲಘು ಲಾಠಿ ಪ್ರಹಾರ ನಡೆ​ಸಿ​ರು​ವು​ದಾಗಿ ತಿಳಿ​ದಿ​ದೆ.

ತಾಲೂಕು ಕಚೇರಿ ಅಧಿ​ಕಾರಿ ಮತ್ತು ಅಧಾರ್‌ ಸೆಂಟರ್‌ ಅಪ​ರೇ​ಟ​ರ್‌​ಗಳ ನಿರ್ಲಕ್ಷ್ಯದ ಪರಿ​ಣಾಮ 6 ತಿಂಗ​ಳಿಂದ ಅಧಾರ್‌ ತಿದ್ದು​ಪ​ಡಿಗೆ ಅಲೆ​ದಾ​ಡು​ತ್ತಿದ್ದೇವೆ. ಅ​ಧಾರ್‌ ತಿದ್ದು​ಪಡಿ ವಿಳಂಬದ ಪರಿ​ಣಾಮ ಬೆಳೆ​ವಿಮೆ, ವೃದ್ಧರು ಮತ್ತು ನಾಗರಿಕರ ಮಾಶಾ​ಸನ ಸೇರಿ​ದಂತೆ ಯಾವುದೇ ಸರ್ಕಾರಿ ಸೌಲಭ್ಯ ಪಡೆ​ಯಲು ಸಾಧ್ಯ​ವಾ​ಗು​ತ್ತಿ​ಲ್ಲ. ​ಸು​ಮಾರು 30ರಿಂದ 40 ಕಿಮೀ ದೂರ​ದಿಂದ ನಿತ್ಯ ಪಟ್ಟ​ಣಕ್ಕೆ ಆಗ​ಮಿ​ಸು​ತ್ತಿದ್ದು, ಇಂದು ನಾಳೆ ಎಂದು ಹೀಗೆ ಸತಾ​ಯಿ​ಸು​ತ್ತಿ​ದ್ದಾ​ರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಸ​ರಿ​ಯಾದ ಮಾಹಿತಿ ನೀಡು​ತ್ತಿ​ಲ್ಲ. ​ಅ​ಧಾರ್‌ ಕೇಂದ್ರ​ದಲ್ಲಿ ಬಡ​ವ​ರಿಗೆ ಬೆಲೆ ಇಲ್ಲ. ​ಏ​ನಾ​ದರೂ ವಿಚಾ​ರಿ​ಸಿ​ದರೆ ಲೆಕ್ಕ​ಕ್ಕಿ​ಡದೆ ಉದಾ​ಸೀನತೆ ತೋರಿ ವಾಪಸ್ಸು ಕಳು​ಹಿ​ಸು​ತ್ತಿ​ದ್ದಾ​ರೆ. ​ನಿತ್ಯ ಪಾವ​ಗ​ಡಕ್ಕೆ ಅಲೆದು ಸಾಕಾ​ಗಿ​ದೆ. ಈ ಬಗ್ಗೆ ತಹ​ಶೀ​ಲ್ದಾ​ರ್‌ಗೆ ದೂರು ನೀಡಿದರೂ ಪ್ರಯೋ​ಜ​ನ​ವಿ​ಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಶ್ನಿಸಿದರೆ ಪೊಲೀಸರ ದೌರ್ಜನ್ಯ:

ಅಧಾರ್‌ ತಿದ್ದು​ಪಡಿ ಮಾಡಿ​ಕೊ​ಡು​ತ್ತೇ​ವೆ. ಅ.3ರಂದು ಬನ್ನಿ ಎಂದು ಅಧಾರ್‌ ಕೇಂದ್ರದ ಅಪ​ರೇ​ಟ​ರ್‌​ಗಳು ಟೋಕನ್‌ ನೀಡಿದ್ದಾರೆ. ಕೆಲ​ವ​ರಿಗೆ ಇದೇ ದಿನವೇ ಟೋಕನ್‌ ನೀಡು​ತ್ತೇವೆ ಎಂದು ಭರ​ವಸೆ ನೀಡಿದ ಮೇರೆಗೆ ತಾಲೂ​ಕಿ​ನಾ​ದ್ಯಂತ ಸಾವಿ​ರಾರು ಮಂದಿ ಗ್ರಾಮೀಣ ಜನತೆ ಇಂದು ಪಾವ​ಗ​ಡಕ್ಕೆ ಆಗ​ಮಿ​ಸಿ​ದ್ದೇ​ವೆ. ​ಬೆ​ಳ​ಗ್ಗೆ​ಯಿಂದಲೇ ಸರದಿ ಸಾಲಿ​ನಲ್ಲಿ ನಿಂತ ಕಾಯು​ತ್ತಿ​ದ್ದೇ​ವೆ. ಬೆಳಗ್ಗೆ 9 ಗಂಟೆಗೆ ಬಾಗಿಲು ತೆರೆದ ಆಧಾರ್‌ ಕೇಂದ್ರದ ಅಧಿ​ಕಾ​ರಿ​ಗಳು ತಿದ್ದ​ಪ​ಡಿ​ಯಲ್ಲಿ ವಿಳಂಬ ಮಾಡು​ತ್ತಿದ್ದು, ಈ ದಿನ ಸಹ ತಿದ್ದು​ಪಡಿ ಮಾಡಿ​ಕೊ​ಡಲು ಸಾಧ್ಯ​ವಿ​ಲ್ಲ​ವೆಂದು ಸಬೂಬು ಹೇಳು​ತ್ತಿ​ದ್ದಾ​ರೆ. ಈ ಬಗ್ಗೆ ಪ್ರಶ್ನಿ​ದರೆ ಪೊಲೀ​ಸರು ನಮ್ಮ ಮೇಲೆ ದೌಜ​ರ್‍ನ್ಯಕ್ಕೆ ಮುಂದಾಗಿ ಲಾಠಿ ​ಪ್ರ​ಹಾರ ಮಾಡುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದರು.

ಆಧಾರ್‌ ಲಿಂಕ್‌ ಆಗಿಲ್ವಾ, ಪಿಂಚಣಿ ಸಿಗಲ್ಲ!

ಆಧಾರ್‌ ಆಪರೇಟರ್‌ಗಳಿಗೆ ತಹಸೀಲ್ದಾರ್‌ ಎಚ್ಚರಿಕೆ

ಪೊಲೀ​ಸರು ​ಲಾಠಿ ಪ್ರಹಾ​ರಕ್ಕೆ ಮುಂದಾದ ವೇಳೆ ಸ್ಥಳಕ್ಕೆ ಆಗ​ಮಿ​ಸಿದ್ದ ತಹ​ಸೀ​ಲ್ದಾರ್‌ ವರ​ದ​ರಾಜು ಅಧಾರ್‌ ಕೇಂದ್ರದ ಆಪ​ರೇ​ಟ​ರ್‌​ಗ​ಳಿಂದ ವಿವರ ಪಡೆದು ತಿದ್ದು​ಪ​ಡಿಯ ವಿಳಂಬದ ಬಗ್ಗೆ ತೀವ್ರ ಬೇಸರ ವ್ಯಕ್ತ​ಪ​ಡಿ​ಸಿ ಅಪ​ರೇ​ಟ​ರ್‌​ಗ​ಳಿಗೆ ಎಚ್ಚ​ರಿಕೆ ನೀಡಿ​ದ​ರು. ​ನಂತರ ತಿದ್ದು​ಪಡಿ ಟೋಕನ್‌ ಪಡೆ​ದ​ವ​ರಿಗೆ ಸಮಾ​ಧಾನ ಹೇಳುವ ಮೂಲಕ ದಿನಾಂಕ ನಿಗ​ದಿ​ಪ​ಡಿ​ಸಿ ಹೊಸ​ಬ​ರಿಗೆ ಅಧಾರ್‌ ತಿದ್ದ​ಪ​ಡಿಯ ಟೋಕನ್‌ ಕೂಡಿಸಿದ್ದು ಸಮಸ್ಯೆ ನಿಯಂತ್ರ​ಣಕ್ಕೆ ತಂದಿ​ರು​ವು​ದಾಗಿ ತಿಳಿ​ದಿ​ದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios