ಕಾಂಗ್ರೆಸ್‌ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಡಾ.ಸಾಸಲು ಸತೀಶ್‌

ಕೊರಟಗೆರೆಯಲ್ಲಿ ಭಾನುವಾರ ಕಾಂಗ್ರೆಸ್‌ ಭವನ ಉದ್ಘಾಟನೆ ಹಾಗೂ ಜಿಲ್ಲಾ ಬೃಹತ್‌ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್‌ ಖರ್ಗೆ ಅವರು ಆಗಮಿಸಲಿದ್ದು ಶಿರಾ ತಾಲೂಕಿನಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಸಾಸಲು ಸತೀಶ್‌ ಹೇಳಿದರು.

Large number of participants in Congress convention  Dr  Sasalu Satish snr

ಶಿರಾ: ಕೊರಟಗೆರೆಯಲ್ಲಿ ಭಾನುವಾರ ಕಾಂಗ್ರೆಸ್‌ ಭವನ ಉದ್ಘಾಟನೆ ಹಾಗೂ ಜಿಲ್ಲಾ ಬೃಹತ್‌ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್‌ ಖರ್ಗೆ ಅವರು ಆಗಮಿಸಲಿದ್ದು ಶಿರಾ ತಾಲೂಕಿನಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಸಾಸಲು ಸತೀಶ್‌ ಹೇಳಿದರು.

ನಗರದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಸಾಧಾರಣ ಕುಟುಂಬದಿಂದ ಬಂದು ಈ ದೇಶದ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿ. ಕನ್ನಡಿಗರು ಹೆಮ್ಮೆ ಪಡುವ ವಿಷಯ ಅಂತಹ ಮಹಾನ್‌ ನಾಯಕರು ನಮ್ಮ ತುಮಕೂರು ಜಿಲ್ಲೆಗೆ ವಿಶೇಷವಾಗಿ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ಸಂತೋಷದ ವಿಷಯ. ಎಐಸಿಸಿ ಅಧ್ಯಕ್ಷರು ಒಂದು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಆದ್ದರಿಂದ ಶಿರಾ ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಿ. ಕಾರ್ಯಕ್ರಮಕ್ಕೆ ಭಾಗವಹಿಸಲು ಬೇಕಾದ ವಾಹನದ ವ್ಯವಸ್ಥೆ ಊಟ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದೇನೆ ಎಂದು ತಿಳಿಸಿದರು.

 ಬಿಜೆಪಿಗೆ ಜನರಿಂದಲೇ ತಕ್ಕ ಪಾಠ: ಶಾಸಕ

ಬಿಜೆಪಿ ಸರ್ಕಾರ ಕಮಿಷನ್‌ ಸರ್ಕಾರ ಅಂಥ ಮತ್ತೆ ಸಾಬೀತು ಮಾಡಿದೆ. ಬಿಜೆಪಿ ಶಾಸಕರ ಪುತ್ರನೇ ಹಣ ವಿಚಾರದಲ್ಲಿ ಸಿಕ್ಕಿ ಬಿದ್ದಿದಾನೆ. ಬಿಜೆಪಿಗೆ ಯಾರು ಮತ ಹಾಕುತ್ತಾರೆ. ಜನ ಸಾಮಾನ್ಯರ ಮೇಲೆ ಬರೆ ಎಳೆದಿದೆ. ರೈತರು ದಿನನಿತ್ಯ ಉಪಯೋಗಿಸುವ ವಸ್ತುಗಳು, ಸಿಲಿಂಡರ್‌ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಜಾಸ್ತಿ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಶಾಸಕ ಎಸ್‌.ಆರ್‌. ಶ್ರೀೕನಿವಾಸ್‌ ತಿಳಿಸಿದರು.

ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯ ಸಂಗನಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿಸಿ ರಸ್ತೆಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಸಾಕಷ್ಟುಭೂಮಿ ಪೂಜೆಗಳು ಇದ್ದು ಅವುಗಳನ್ನು ಆದಷ್ಟುಬೇಗ ಮುಗಿಸಿ ಚುನಾವಣೆಗೆ ಹೋಗುತ್ತೇನೆ. ಈಗಾಗಲೇ ಕಾಂಗ್ರೆಸ್‌ ಮುಖಂಡರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದೇನೆ. ಎಲ್ಲ ಕಡೆಗಳಲ್ಲೂ ಸಹ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೊಸಕೆರೆ ಭಾಗದಲ್ಲಿ ಪದೇ ಪದೇ ಕಳತನ ನಡೆಯತ್ತಿರುವ ಬಗ್ಗೆ ನಾನು ಸಹ ಎಸ್ಪಿಗೆ ಹೇಳಿದ್ದೇನೆ. ರಾತ್ರಿ ಹೊತ್ತು ಬೀಟ್‌ ವ್ಯವಸ್ಥೆ ಮಾಡಿ, ಮುಂದಿನ ದಿನಗಳಲ್ಲಿ ಕಳ್ಳತನವನ್ನು ಆಗದಂತೆ ನೋಡಿಕೊಳುತ್ತಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ ನವೀನ್‌, ಉಪಾಧ್ಯಕ್ಷ ದಯಾನಂದ್‌, ಸದಸ್ಯರಾದ ಮಂಗಳಗೌರಮ್ಮ, ರೇಣುಕಯ್ಯ, ಶಂಕರಪ್ಪ, ಮುಖಂಡರಾದ ನಾರಾಯಣಮೂರ್ತಿ,ಬಾಬು, ಕುಮಾರು, ಗುತ್ತಿಗೆದಾರ ಈಶಣ್ಣ, ಕೊಟ್ಟಪ್ಪ, ಮಂಜುನಾಥ್‌, ಸೋಮಶೇಖರ್‌, ಪಿಡಿಓ ಪ್ರಕಾಶದ ಪೂಜಾರಿ ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios