ಮೈಸೂರು(ಜು.17): ಎಚ್‌.ಡಿ. ಕೋಟೆ ಸಮೀಪ ಸಾಗರೆ ಗ್ರಾಮದ ಹತ್ತಿರದ ಕಬಿನಿ ಬಲದಂಡೆ ನಾಲೆಯ 3ನೇ ಉಪ ಕಾಲುವೆಯ ಕಳಪೆ ಕಾಮಗಾರಿಯಿಂದ ನೀರು ಕಬಿನಿ ನದಿಗೆ ಹೋಗಲಾಗದೆ ರೈತರ ಗದ್ದೆ, ಜಮೀನಿಗೆ ನೀರು ನುಗ್ಗಿದೆ. ಪರಿಣಾಮ ಸುಮಾರು ಎರಡು ಎಕರೆಯಷ್ಟುಗದ್ದೆ ಭೂಮಿ ಕುಸಿದಿದೆ.

ಸಾಗರೆ ಗ್ರಾಮದ ರೈತ ಎಸ್‌.ಎಸ್‌. ರಾಜು, ನಾಗಶೆಟ್ಟಿ, ಭುವನೇಶ್ವರಿ, ಶಿವಮ್ಮ ಅವರಿಗೆ ಸೇರಿದ ಅವರು ಜಮೀನು ಕುಸಿದಿದ್ದು, ಬೆಳೆಗಳು ಹಾಳಾಗಿದೆ.

ರೈತ ಎಸ್‌.ಎಸ್‌. ರಾಜು ಮಾತನಾಡಿ, 1997ನೇ ಇಸವಿಯಿಂದಲೂ ನಮ್ಮ ಗದ್ದೆ ಭೂಮಿಯು ಕುಸಿತ ಉಂಟಾಗಿದ್ದು, ಈ ಬಗೆ ಹಲವು ವರ್ಷಗಳಿಂದಲೂ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಈ ವರವಿಗೂ ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.

ಬೆಳಗಾವಿಯಲ್ಲಿ ಕಾಡುತ್ತಿದೆ ಭೂಕಂಪದ ಭಯ

ಶಾಸಕ ಅನಿಲ ಚಿಕ್ಕಮಾದು ಹಾಗೂ ಸಂಬಂಧಪಟ್ಟಅಧಿಕಾರಿಗಳು ಗಮನಹರಿಸಿ ತಮಗಾಗಿರುವ ನಷ್ಟವನ್ನು ಭರಿಸುವಂತೆ ಒತ್ತಾಯಿಸಿದ್ದಾರೆ. ಕೂಡಲೇ ಕಬಿನಿ ಬಲದಂಡೆ ನಾಲೆಯ 3ನೇ ಉಪಕಾಲುವೆ ಸರಿಪಡಿಸಿ, ಇಲ್ಲವಾದರೆ ತಮ್ಮ ಕುಟುಂಬ ವರ್ಗದವರು ಸಂಬಂಧಪಟ್ಟನೀರಾವರಿ ಇಲಾಖೆ ಅಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.