ಚಿಕ್ಕಮಗಳೂರು: ಮಳೆ ಅಬ್ಬರಕ್ಕೆ ಚಂದ್ರದ್ರೋಣ ಪರ್ವತ ಶ್ರೇಣಿ ಗಢ ಗಢ..!

*   ಭೂ ಕುಸಿತ, ಮರಗಳು ಧರೆಗೆ, ರಸ್ತೆಯಲ್ಲಿ ಹರಿಯುತ್ತಿರುವ ನೀರು 
*   ಭೀತಿಗೊಳಗಾಗಿ ಪ್ರವಾಸವನ್ನು ಮುಟುಕುಗೊಳಿಸಿದ ಪ್ರವಾಸಿಗರು 
*   ಕೆಲಸಕ್ಕೆ ಹೋಗಲಾರದೇ ಪರದಾಟ ನಡೆಸಿದ ಕಾರ್ಮಿಕರು 
 

Landslide in Chandradrona Mountain Range Due to Heavy Rain at Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜು.10):  ಮುಂಗಾರು ಮಳೆಯ ಅಬ್ಬರಕ್ಕೆ ಮಲೆನಾಡು ತತ್ತರಿಸಿ ಹೋಗಿದೆ. ಅದರಲ್ಲೂ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಅನಾಹುತಗಳಿಗೆ ಕಾರಣವಾಗುತ್ತಿದೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಭೂ ಕುಸಿತ, ಮರಗಳು ಧರೆಗೆ ಉರುಳಿದ್ರೆ, ಮಳೆ ನೀರು ರಸ್ತೆಯಲ್ಲಿ ಮೇಲೆ ಹರಿಯುತ್ತಿರುವುದನ್ನು ನೋಡಿ ಪ್ರವಾಸಿಗರು ಭೀತಿಗೊಳಗಾಗಿ ಪ್ರವಾಸವನ್ನು ಮುಟುಕುಗೊಳಿಸಿ ವಾಪಸ್‌ ತೆರಳಿದರು.

ಮುಂಗಾರು ಮಳೆ ಅಬ್ಬರಕ್ಕೆ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಗಢ ಗಢ

ಸದಾ ಹಸಿರಿನವಾತಾವರಣವನ್ನೇ ಹೊಂದಿರುವ ಚಂದ್ರದ್ರೋಣ ಪರ್ವತ ಶ್ರೇಣಿ. ಈ ಬಾರಿ ಮಳೆಯಿಂದ ಗಡಗಡ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಭಾರಿ ಮಳೆಯಿಂದ ಅನಾಹುತಗಳು ಸೃಷ್ಟಿಯಾಗುವ ಮುನ್ಸೂಚನೆಯನ್ನು ನೀಡಿದೆ. ಬೆಟ್ಟದ ಸಾಲಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಲ್ಲಿ ಧರೆ, ಬಂಡೆ, ಮರಗಳು ರಸ್ತೆಗೆ ಉರುಳುತ್ತಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಆಗುತ್ತಿದೆ. ಇಂದು ಕೂಡ  ವರುಣ ಇನ್ನಷ್ಟು ಅಬ್ಬರಿಸಿದ್ದಾನೆ..ವರುಣಾಘಾತ ಒಂದು ಕಡೆಯಾದ್ರೆ ಆವಾಂತರವೇ ಸೃಷ್ಟಿಯಾಗುತ್ತಿರೋದು ಜನ್ರಲ್ಲಿ ಅತಂಕ ತಂದಿದೆ..ಮಹಾಮಳೆಯ ಅಬ್ಬರಕ್ಕೆ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಬರುವ ಅತ್ತಿಗುಂಡಿಯ  ಸಮೀಪ ಕೊಳಗಾಮೆ ಕವಿಕಲ್ ಗಂಡಿ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದೆ. ಕೊಳಗಾಮೆ ರಸ್ತೆಯ ದಾರಿ ಉದ್ದಕ್ಕೂ ಮೂರು ನಾಲ್ಕು ಕಡೆ ಬಂಡೆ, ಮರ, ಮಣ್ಣು ಕುಸಿತವಾಗಿತ್ತು. ಇದರಿಂದ ಕೊಳಗಾಮಿ, ಶಿರಾವಾಸೆ, ಮುತ್ತೋಡಿಗೆ ಕಾಫಿ ತೋಟಗಳಿಗೆ ತೆರಳುವ ಜನರು, ಕಾರ್ಮಿಕರು ಕೆಲ ಕಾಲ ಪರದಾಟ ನಡೆಸಿದರು. 

ಅಮರನಾಥದಲ್ಲಿ ಮೇಘಸ್ಫೋಟ ಚಿಕ್ಕಮಗಳೂರು ಜಿಲ್ಲೆಯ 60 ಜನರ ತಂಡ ಸುರಕ್ಷಿತ

ಕಾರ್ಮಿಕರೇ ಕೆಲವೊಂದು ಕಡೆ ರಸ್ತೆಗೆ ಅಡ್ಡವಾಗಿ ಬಿದ್ದಿರುವ ಕಲ್ಲು, ಮರಗಳನ್ನು ತೆರೆವುಗೊಳಿಸಿದರು. ಇನ್ನು ದತ್ತಪೀಠದ ಸರ್ಪಹಾದಿಯಲ್ಲಿ ಮೂಕ್ಕಾಲು ಭಾಗ ರಸ್ತೆಗೆ ಗುಡ್ಡ ಕುಸಿದು ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿ ಆಗಿತ್ತು. ರಸ್ತೆಗೆ ಗುಡ್ಡದ ರಾಶಿ ರಾಶಿ ಮಣ್ಣು, ಕಲ್ಲು, ಮರಗಳು ಬಿದ್ದಿತ್ತು.ಇದರ ಪರಿಣಾಮ ಕಾರ್ ಬೈಕ್ ನಲ್ಲಿ ಪ್ರವಾಸಿಗ್ರು ತೆರಳಿದ್ರೆ ಟಿಟಿ ವಾಹನದಲ್ಲಿ ಬಂದೋರು ನಿರಾಸೆಯಲ್ಲಿ ವಾಪಸ್ಸಾದ್ರು.ಕೆಲ ಪ್ರವಾಸಿಗರಂತೂ ಭೂ ಕುಸಿತ, ಮರಗಳು ಧರೆಗೆ, ರಸ್ತೆಯಲ್ಲಿ ಹರಿಯುತ್ತಿರುವ ನೀರನ್ನು ನೋಡಿ  ಭೀತಿಗೊಳಗಾಗಿ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಟುಕುಗೊಳಿಸಿ ತಮ್ಮ ತಮ್ಮ ಊರಿಗಳಿಗೆ ತೆರಳಿದರು. 

ಕಳೆದ ಹಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಗಿರಿ ಪ್ರದೇಶದಲ್ಲಿ ಗುಡ್ಡಕುಸಿತದ ಪ್ರಕರಣಗಳು ನಡೆದಿರಲಿಲ್ಲ ಆದರೆ ಕಳೆದ ಒಂದು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗುಡ್ಡ ಕುಸಿತದ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿದ್ದು ಇದು ಅಪಾಯದ ಮುನ್ಸೂಚನೆ ಎನ್ನುವ ಅಭಿಪ್ರಾಯವನ್ನು ಪರಿಸರವಾದಿಗಳು ಹೊರಹಾಕಿದ್ದಾರೆ. ಗಿರಿ ಪ್ರದೇಶದಲ್ಲಿ ಹೆಚ್ಚಿದ ಹೋಂ ಸ್ಟೇ, ರೆಸಾರ್ಟ್ ಗಳ ನಿರ್ಮಾಣದ ಜೊತೆಗೆ ಅತೀ ಹೆಚ್ಚು ಜೆಸಿಬಿ ಬಳಕೆಯಿಂದಲೂ ಗುಡ್ಡ ಕುಸಿತಕ್ಕೆ ಕಾರಣ ಎನ್ನುವ ಆತಂಕವನ್ನು ಹೊರಹಾಕಿದ್ದಾರೆ. 

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ: ನೆಲಕಚ್ಚಿದ ಮನೆ, ವಿದ್ಯುತ್ ಕಂಬ, ಮರ

ಗಿರಿ ಪ್ರದೇಶಕ್ಕೆ ಸಾಗುವ ಪ್ರವಾಸಿಗರಿಗೆ ಕೆಲವೊಂದು ನಿರ್ಬಧ

ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಮಳೆಯಿಂದ ಉಂಟಾಗುತ್ತಿರುವ ಅನಾಹುತಗಳ ಹಿನ್ನೆಲೆಯಲ್ಲಿ ಪ್ರವಾಸಿ ಸ್ಥಳಗಳಿಗೆ ತೆರಳುವ ಪ್ರವಾಸಿಗೆ  ಕೆಲವೊಂದು ನಿರ್ಬಂಧವನ್ನು ಜಿಲ್ಲಾಡಳಿತ ವಿಧಿಸಿದೆ. ಪ್ರವಾಸಿಗರಿಗೆ ಕೆಲವೊಂದು ನಿರ್ಬಂಧ ಹೇರಿರುವ  ಜಿಲ್ಲಾಡಳಿತ ಬೆಳಗ್ಗೆ6 ರಿಂದ 9 ಹಾಗೂ ಸಂಜೆ 2 ರಿಂದ 4 ಗಂಟೆ ಮಾತ್ರ ಪ್ರವಾಸಿ ವಾಹನಗಳಿಗೆ  ಎಂಟ್ರಿಗೆ ಅವಕಾಶ ನೀಡಲಾಗಿದೆ. 

ಗಿರಿ ಪ್ರದೇಶದಲ್ಲಿ ಬರುವ ಮುಳ್ಳಯ್ಯನಗಿರಿ,ದತ್ತಪೀಠ, ಝರಿ ಫಾಲ್ಸ್ ಮಾಣಿಕ್ಯಧಾರ ಪ್ರವಾಸಿ ಸ್ಥಳಗಳಿಗೆ ತೆರಳುವ ಪ್ರವಾಸಿಗರಿಗೆ ಜಿಲ್ಲಾಡಳಿತ  ಪ್ರತಿ ದಿನ 150 ವಾಹನಗಳಂತೆ ದಿನಕ್ಕೆ 300 ವಾಹನಗಳಿಗೆ ಮಾತ್ರ ಅವಕಾಶವಿದೆ. ಇನ್ನು 1200 ಕೆಜಿ ಮೇಲ್ಪಟ್ಟ ವಾಹನಗಳಿಗೆ ನಿಷೇಧವನ್ನು ಜಿಲ್ಲಾಡಳಿತ ವಿಧಿಸಿದೆ. ಗಿರಿ ಪ್ರದೇಶದಲ್ಲಿ ಇರುವ ಅಧಿಕೃತ ಹೊಂ ಸ್ಟೇ ಹಾಗೂ ರೇಸಾರ್ಟ್ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಅವಕಾಶವಿದ್ದು ಗಿರಿ ಭಾಗದ ಸ್ಥಳೀಯರಿಗೆ ಯಾವುದೇ ನಿರ್ಬಂಧವಿಲ್ಲಂದು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಅದೇಶವನ್ನು ಮಾಡಿದ್ದಾರೆ.
 

Latest Videos
Follow Us:
Download App:
  • android
  • ios