ಹಾಸನ(ಜು.26): ಐಎಂಎ ವಂಚನೆ ಪ್ರಕರಣ ಹಿನ್ನೆಲೆಯಲ್ಲಿ ಹಾಸನ ನಗರದ ತಣ್ಣೀರು ಹಳ್ಳದ ಪ್ರಮುಖ ರಸ್ತೆಯಲ್ಲಿ ಇರುವ ಐಎಂಎ ಕಂಪನಿಗೆ ಸೇರಿದ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಅಕ್ರಂ ಪಾಷ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಗುರುವಾರ ನಗರಸಭೆ ಆಯುಕ್ತ ಬಿ.ಎ. ಪರಮೇಶ್‌, ಉಪ ವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಮತ್ತು ತಹಸೀಲ್ದಾರ್‌ ಮೇಘನ ಅವರು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲಿಸಿ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆದಿದ್ದಾರೆ.

ಐಎಂಎ ಸಂಸ್ಥೆಗೆ ಸೇರಿದ ಹಾಸನ ನಗರದ ತಣ್ಣೀರುಹಳ್ಳ ವ್ಯಾಪ್ತಿಯ ವಿವಾದಿತ ಆಸ್ತಿ ಹಾಸನ ನಗರಸಭಾ ಖಾತೆ ಸಂಖ್ಯೆ 33-3-13- 353ಎ ರಲ್ಲಿನ 22000 ಚದರ ಅಡಿ ಖಾಲಿ ನಿವೇಶನವನ್ನು (ಶೀಟ್‌ನ 2 ಸಣ್ಣ ಮನೆಗಳು) ಗುರುವಾರ ನಗರಸಭೆ ಆಯುಕ್ತರು, ತಹಸೀಲ್ದಾರ್‌ ಅವರು ಜಂಟಿಯಾಗಿ ಸರ್ಕಾರದ ವಶಕ್ಕೆ ಪಡೆದಿದ್ದಾರೆ.

ಬಹುಕೋಟಿ ವಂಚಕ IMA ಮನ್ಸೂರ್ ಖಾನ್ ಬಂಧನ

ಅತಿಕ್ರಮ ಪ್ರವೇಶ ನಿಷೇಧ:

ಸರ್ಕಾರಕ್ಕೆ ವಶ ಪಡೆದಿರುವ ಹಿನ್ನೆಲೆಯಲ್ಲಿ ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌. ನಾಗರಾಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ