ಮಾನವ ಸಂಕುಲ ಆಯ್ತು : ಈಗ ಜಾನುವಾರುಗಳಿಗೆ ಕಾಡ್ತಿದೆ ಮಹಾಮಾರಿ
ಕೊರೋನಾ ಮಹಾಮಾರಿ ಮನುಷ್ಯರನ್ನು ಕಾಡುತ್ತಿದ್ದು, ಇದೀಗ ಜಾನುವಾರುಗಳಿಗೆ ಹೊಸ ರೋಗವೊಂದು ಕಾಡುತ್ತಿದೆ. ಇದರಿಂದ ಹೈನುಗಾರಿಕೆ ಮಾಡುವವರು ತಲ್ಲಣಿಸಿದ್ದಾರೆ.
ಕೊಪ್ಪಳ (ಸೆ.01): ಕಲ್ಯಾಣ ಕರ್ನಾಟಕ ಯಾದಗಿರಿ ಮತ್ತು ಕಲಬುರಗಿಯಲ್ಲಿ ಜಾನುವಾರುಗಳಿಗೆ ‘ಲಂಪಿ ಸ್ಕಿನ್ ಡಿಸೀಸ್’(ಮುದ್ದೆ ರೋಗ) ರೋಗ ಕಾಣಿಸಿಕೊಂಡ ಬೆನ್ನಲ್ಲಿಯೇ ಕೊಪ್ಪಳ ಜಿಲ್ಲೆಯಲ್ಲಿ 1500 ಮತ್ತು ಹಾವೇರಿ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಜಾನುವಾರುಗಳಿಗೆ ಈ ರೋಗ ಕಾಣಿಸಿಕೊಂಡಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಾದ್ಯಂತ ಸುಮಾರು 150 ಹಳ್ಳಿಗಳಲ್ಲಿ ಹಾಗೂ ಕುಷ್ಟಗಿ ತಾಲೂಕಿನಲ್ಲಿ 3 ಹಳ್ಳಿಗಳಲ್ಲಿ ಸೇರಿ ಸುಮಾರು 1500ಕ್ಕೂ ಹೆಚ್ಚು ಜಾನುವಾರುಗಳಿಗೆ ಈ ಸಾಂಕ್ರಾಮಿಕ ರೋಗ ಹರಡಿದೆ.ಗೋಮಾಂಸ ಭಕ್ಷಕರು ರಾಕ್ಷಸರು, ಪಾಪಿಗಳು : ಸಚಿವ ಸುಧಾಕರ್...
ಹಾವೇರಿ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದೆ. ದನಕರುಗಳ ಮೈಮೇಲೆ ಗುಳ್ಳೆಗಳು ಕಾಣಿಸಿಕೊಂಡು ಅವು ಆಹಾರ ಸೇವಿಸುವುದನ್ನೇ ನಿಲ್ಲಿಸುತ್ತಿವೆ. ದಿನದಿಂದ ದಿನಕ್ಕೆ ಈ ರೋಗ ಕಾಣಿಸಿಕೊಳ್ಳುತ್ತಿರುವ ಜಾನುವಾರುಗಳ ಸಂಖ್ಯೆ ಹೆಚ್ಚುತ್ತಿದೆ. ಕೃಷಿ ಹಾಗೂ ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತರಿಗೆ ಇದರಿಂದ ಆತಂಕ
ರಾಣಿಬೆನ್ನೂರು: ಸಿಸೇರಿಯನ್ ಮೂಲಕ ಹಸುವಿನ ಜೀವ ಉಳಿಸಿದ ವೈದ್ಯರು.
ಮಾನ ಸಂಕುಲವನ್ನು ಕೊರೋನಾ ಮಹಾಮಾರಿ ಕಾಡುತ್ತಿರುವ ಬೆನ್ನಲ್ಲೇ ಇದೀಗ ಜಾನುವಾರುಗಳಿಗೂ ಕೂಡ ಮಹಾಮಾರಿಯೊಂದು ಕಾಡುತ್ತಿದೆ.