ಬೆಳಗಾವಿ (ಜ.27): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್‌ ಭಾರೀ ದೇಣಿಗೆ ನೀಡಿದ್ದಾರೆ. 

ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಪ್ರಕ್ರಿಯೆ ಆರಮಭವಾಗಿದ್ದು, ಅದಕ್ಕೆ 2 ಲಕ್ಷ ನಿಧಿ ಸಮರ್ಪಿಸಿದರು. 

ರಾಮಮಂದಿರ ನಿರ್ಮಾಣಕ್ಕೆ ಹುಬ್ಬಳ್ಳಿ ಉದ್ಯಮಿಯಿಂದ ಕೋಟಿ ದೇಣಿಗೆ ...

 ನಿಧಿ ಸಂಗ್ರಹಕ್ಕೆ ಬಂದ ವಿಶ್ವಹಿಂದೂ ಪರಿಷತ್‌ ಪ್ರಮುಖರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತು ಅವರ ಸಹೋದರ ಚನ್ನರಾಜ ಹಟ್ಟಿಹೊಳಿ 2 ಲಕ್ಷ ರು. ಚೆಕ್‌ ಹಸ್ತಾಂತರಿಸಿದರು.

ಈಗಾಗಲೇ ದೇಶದಾದ್ಯಂತ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದ್ದು, ನೂರಾರು ಕೋಟಿ ಸಂಗ್ರಹವಾಗಿದೆ.  ಇದೀಗ ಕೈ ಶಾಸಕಿ ಲಕ್ಷ್ಮೀ  ತಮ್ಮ ದೇಣಿಗೆ ಮೊತ್ತ ನೀಡಿದ್ದಾರೆ.