ಬೆಳಗಾವಿ (ಜ.30): ರಮೇಶ್ ನೀರಾವರಿ ಸಚಿವನಾದರೆ ಬಿಜೆಪಿಯನ್ನು ನೀರಿನಲ್ಲಿ ಮುಳುಗಿಸುತ್ತಾನೆ ಎಂದು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಹೇಳಿದ್ದಾರೆ. 

"

ಬೆಳಗಾವಿಯ ಗೋಕಾಕ್ ನಲ್ಲಿ ಮಾತನಾಡಿದ ಲಖನ್ ಜಾರಕಿಹೊಳಿ, ಸಣ್ಣ ಕೈಗಾರಿಕೆ, ಪೌರಾಡಳಿತ ಖಾತೆ ಕೊಟ್ಟಲ್ಲಿ ಮಾತ್ರವೇ ಬಿಜೆಪಿ ಸರ್ಕಾರ ಸೇಫ್ ಆಗಿರಲಿದೆ ಎಂದರು. 

ಇನ್ನು ರಾಜ್ಯದಲ್ಲಿ ಚುನಾವಣೆ ಮೊದಲೇ ನಾವು ಜನರಿಗೆ ಹೇಳಿದ್ದೆವು. ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗುವುದಿಲ್ಲ ಎಂದು. ಇನ್ನು  ರಮೇಶಗೆ ಡಿಸಿಎಂ ಸ್ಥಾನದ ಭರವಸೆಯನ್ನು ಬಿಜೆಪಿ ಕೊಟ್ಟಿಲ್ಲ.  ಆತ ಡಿಸಿಎಂ ಸಹ ಆಗಲ್ಲ ಎಂದು ಭವಿಷ್ಯ ನುಡಿದರು. 

ಬಿಜೆಪಿ ಅಧಿಕಾರಾವಧಿಯಲ್ಲಿ ದಲಿತ CM ನಿಶ್ಚಿತ: ಬಿರುಗಾಳಿ ಎಬ್ಬಿಸಿದ MP ಮಾತು...

ಅಂಬಿರಾವ್ ಪಾಟೀಲ್ ಪ್ರಚಾರಕ್ಕೆ ಬಂದಿದ್ದರೆ ನಾನು ಗೆಲ್ಲುತ್ತಿದ್ದೆ. ಈಗ ಅಲ್ಲಿ ಪೂಜೆ ಇಲ್ಲಿ ಪೂಜೆ ಅಂತ ಓಡಾಡುತ್ತಿದ್ದಾನೆ. ಕಮಿಷನ್ ಗಾಗಿ ಅಂಬಿರಾವ್ ಪಾಟೀಲ್  ರಮೇಶ್ ಜಾರಕಿಹೊಳಿ ಪರ ಓಡಾಡಿದ ಎಂದು ಲಖನ್ ಹೇಳಿದರು. 

 ರಮೇಶ ಜಾರಕಿ ಹೊಳಿ ಟೆಂಪಲ್ ರನ್ ವಿಚಾರದಬಗ್ಗೆಯೂ ಮಾತನಾಡಿದ ಲಖನ್ ಸಂಕಟ ಬಂದಾಗ ವೆಂಕಟರಮಣ ಹಾಗೇ ಆಗಿದೆ. ಜನರ ಮುಂದೆ ಸುಳ್ಳು ಹೇಳಿ ಮತ ಪಡೆದಿದ್ದಾರೆ. ಕ್ಷೇತ್ರದಲ್ಲಿ ಅಳಿಯ, ಮಾವನ ದರ್ಬಾರ್ ಆರಂಭವಾಗಿದೆ ಎಂದು ಅಣ್ಣ ರಮೇಶ್ ಜಾರಕಿಹೊಳಿ‌ ವಿರುದ್ಧ ತಮ್ಮ  ವಾಗ್ದಾಳಿ ನಡೆಸಿದರು.