ಗೋಕಾಕ್(ನ.27): ಬಿಜೆಪಿ ಹೈಕಮಾಂಡ್ ರಮೇಶ್ ಜಾರಕಿಹೊಳಿ ಅವರ ಬಾಯಿ ಮುಚ್ಚಿಸಿದೆ. ನಮ್ಮ ಬಾಯಿ ಓಪನ್ ಇದೆ, ನಾವು ಅರಾಮವಾಗಿ ಜನರ ಜೊತೆ ಮಾತಾನಾಡಿಕೊಂಡು ಹೋಗುತ್ತಿದ್ದೇವೆ. ಅವರ ಹೈಕಮಾಂಡೇ ಅವರಿಗೆ ಗಪ್ ಚುಪ್ ಅಂತ ಹೇಳಿದೆ, ನಾವು ಅವರ ಬಗ್ಗೆ ಏನು ಹೇಳೋಕೆ ಆಗುವುದಿಲ್ಲ, ಗೋಕಾಕ್ ರಾಜಕಾರಣ ಹೇಗೆ ಮಾಡೋದಂತ ನಮಗೆ ಗೊತ್ತಿದೆ. ಜನರ ಮನಸ್ಸಲ್ಲಿ ಹಾಗೆ ಇದೆ ಇವರೇನು ಮಾಡೋಕಾಗಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ರಮೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಲಖನ್ ಜಾರಕಿಹೊಳಿ ಅವರು, ಒಮ್ಮೆ ವಿದ್ಯೆ ಕೊಟ್ಟರೆ ಅದು ಹಾಗೆ ಉಳಿಯುತ್ತೇ ಅಂತ ರಮೇಶ್ ಅದ್ರಂತೆ, ಜನರ ಮನಸ್ಸಲ್ಲಿದ್ದೇವೆ ಗೆಲುವು ನಮ್ಮದೆ. ನಮ್ಮ ಕ್ಷೇತ್ರದಲ್ಲಿ ನಾವು ಮತ್ತು ನಮ್ಮ ಮತದಾರರೇ ಸ್ಟಾರ್ ಪ್ರಚಾರಕರು ಎಂದು ಹೇಳಿದ್ದಾರೆ. 

ನಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡಲು ನಮ್ಮ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ ಸೇರಿದಂತೆ ಅನೇಕ ನಾಯಕರು ಸಹ ಬರುತ್ತಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಮೇಶ್ ನಂತವರು ಹೊಸ ಕಂಪನಿ ತೆರೆದಂತಾಗಿದೆ, ಅದಕ್ಕಾಗಿ ಜಾಹೀರಾರು ಪ್ರಚಾರ ಮಾಡ್ತಾರೆ, ಮಾಡಲಿ ಏನು ಮಾಡಲಾಗೋದಿಲ್ಲ. ರಮೇಶ್ ನಿಗೆ ಅವನ ಅಳಿಯಂದಿರು ಒಳ್ಳೆಯ ಕೆಲಸ ಮಾಡ್ತಿದಾರೆ ಅಂತಾರೆ. ಹಾಗಾದ್ರೆ ಅವರ ಮೂರು ಜನ ಅಳಿಯಂದಿರಿಗೆ ಪ್ರಚಾರಕ್ಕೆ ಬಾ ಅಂತ ಹೇಳಲಿ ನೋಡೋಣ ಎಂದು ಪ್ರಶ್ನೆ ಮಾಡಿದ್ದಾರೆ.

ರಮೇಶ್ ಜಾರಕಿಹೊಳಿಗೆ ಯಾವ ಭೀಮ ಬಲವೂ ಸಹ ಇಲ್ಲ, ಅದೆಲ್ಲಾ ಪಿನ್ ಚುಚ್ಚಿದ್ದರೆ ಠುಸ್ ಆಗುವ ಬಲೂನ್ ತರಹನಾಗಿದ್ದಾರೆ. ನಮಗೇನಿದ್ರೂ ನಮ್ಮ ಜನ್ರೇ ನಮಗೆ ಭೀಮ ಬಲ ಇದ್ದ ಹಾಗೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.