ಬೆಳಗಾವಿ(ನ.23): ಚುನಾವಣೆ ವೇಳೆ 'ತಾರೇ ಜಮೀನ್ ಪರ್' ಅಂತಾರೆ. 'ಬಾದ್ಮೆ ತುಮ್ ಜಮೀನ್ ಪರ್ ವೋ ತಾರೇ ಪರ್' ಎಂದು ಹೇಳುತ್ತಾರೆ ಎಂದು ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹಾಗೂ ಅವರ ಅಳಿಯಂದಿರ ಕುರಿತು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ‌ ವ್ಯಂಗ್ಯವಾಡಿದ್ದಾರೆ. 

ಶನಿವಾರ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದ ಲಖನ್ ಜಾರಕಿಹೊಳಿ‌ ಅವರು, ಮೊದಲು 'ನಕ್ಷತ್ರ ಭೂಮಿ ಮೇಲೆ' ಅಂತಾರೆ, ಆಮೇಲೆ ನೀವು ಭೂಮಿ‌ ಮೇಲೆ, ಅವರು ನಕ್ಷತ್ರ ಮೇಲೆ ಅಂತಾರೆ. ಈಗ ಮತದಾರರಿಗೆ ಒಳಗೆ ಬಾ ಅಂತಾ ಬೋರ್ಡ್ ಹಾಕುತ್ತಾರೆ. ಆಮೇಲೆ ನಾಳೆ ಬಾ ಅಂತಾ ಬೋರ್ಡ್ ಹಾಕುತ್ತಾರೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿಗೆ ಆದ ಪರಿಸ್ಥಿತಿ ಜನ ಮಾಡಿದ್ದಲ್ಲ, ದೇವರು ಮಾಡಿದ್ದಲ್ಲ ಸ್ವತಃ ತಾವೇ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನೀವೆಲ್ಲ ತಲೆ ಕೆಡಿಸಿಕೊಳ್ಳಬೇಡಿ, ಯಾರಿಗೂ ಹೆದರಬೇಡಿ. ದೇವರ ಆಶೀರ್ವಾದದಿಂದ ಎಲ್ಲಾ ಸರಿಹೋಗುತ್ತದೆ. ಎಲ್ಲಾ ಐತಿ ನೀವು ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಮತ ನೀವು ಹಾಕಿ, ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ಎಂದು ಮತದಾರರಿಗೆ ಲಖನ್ ಜಾರಕಿಹೊಳಿ ಅವರು ಹೇಳಿದ್ದಾರೆ. 

ನಿಮ್ಮ ಅಮೂಲ್ಯವಾದ ಮತವನ್ನು ನನಗೆ ಹಾಕಿ ಪ್ರಚಂಡ ಬಹುತದಿಂದ ಆರಿಸಿ ತರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅವರ ಬಟಾಲಿಯನ್ ಹೇಗಿದೆ ಅಂತಾ ನಮಗೆ ಗೊತ್ತಿದೆ ಎಂದು ರಮೇಶ್ ಜಾರಕಿಹೊಳಿ‌ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಲಖನ್ ವಾಗ್ದಾಳಿ ನಡೆಸಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.