Asianet Suvarna News Asianet Suvarna News

ಕೆ.ಸಿ.ವ್ಯಾಲಿ ನೀರಾವರಿ ಯೋಜನೆ ಇದ್ರೂ, ಕೋಲಾರ ಜನತೆ ಉಪಯೋಗಕ್ಕಿಲ್ಲ ಸರ್ಕಾರಿ ನೀರಿನ ಫಿಲ್ಟರ್‌ಗಳು!

ಕೆರೆಗಳಲ್ಲಿ ನೀರು ತುಂಬಿ ಹರಿಯುತ್ತಿದೆಯಾದರೂ ಕೋಲಾರ ಜನರಿಗೆ ಮಾತ್ರ ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆ ಹರಿಯುತ್ತಿಲ್ಲ. ದುರಾದೃಷ್ಟ ಅಂದರೆ ಬೇಸಿಗೆ ಕಾಲವಾದರೂ ಕೆರೆಗಳಲ್ಲಿ ನೀರಿದೆ.

Lake filled with water but Drinking water problem for Kolar people kannada news gow
Author
First Published Jun 12, 2023, 10:58 PM IST | Last Updated Jun 12, 2023, 10:58 PM IST

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್

ಕೋಲಾರ (ಜೂ.12): ಒಂದು ಕಾಲದಲ್ಲಿ ಹನಿ ನೀರಿಗೂ ಪರದಾಡುತ್ತಿದ್ದ ಜಿಲ್ಲೆ ಅದು, ಆದರೆ ಈಗ ಜಿಲ್ಲೆಯ ಕೆರೆಗಳಲ್ಲಿ ನೀರು ತುಂಬಿ ಹರಿಯುತ್ತಿದೆಯಾದರೂ ಜಿಲ್ಲೆಯ ಜನರಿಗೆ ಮಾತ್ರ ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ದುರಾದೃಷ್ಟ ಅಂದರೆ ಬೇಸಿಗೆ ಕಾಲವಾದರೂ ಕೆರೆಗಳಲ್ಲಿ ನೀರಿದೆ, ಹೀಗಿದ್ರು ಜಿಲ್ಲೆಯಲ್ಲಿ ಕುಡಿಯುವ ನೀರನ ಸಮಸ್ಯೆ ಬಗೆ ಹರಿಯುತ್ತಿಲ್ಲ. ಆದ್ರೂ ಕುಡಿಯುವ ನೀರಿಗೆ ಉಂಟಾಗಿರುವ ಸಮಸ್ಯೆಗೆ ಕಾರಣ ಏನು ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ..  

ಕೆಟ್ಟು ನಿಂತಿರುವ ಶುದ್ದ ಕುಡಿಯುವ ನೀರಿನ ಘಟಕಗಳು, ನಿರ್ವಹಣೆ ಇಲ್ಲದೆ ಧೂಳು ಹಿಡಿದಿರುವ ವಾಟರ್ ಪಿಲ್ಟರ್ ಮತ್ತೊಂದೆಡೆ ಕೆರೆಗಳಲ್ಲಿ ತುಂಬಿರುವ ನೀರು ಇದೆಲ್ಲಾ ದೃಶ್ಯಗಳೂ ನಮಗೆ ಕಂಡು ಬಂದಿದ್ದು ಕೋಲಾರದಲ್ಲಿ.   ಹೇಳಿ ಕೇಳಿ ಕೋಲಾರ ನದಿ ನಾಲೆಗಳಿಲ್ಲದ ಜಿಲ್ಲೆ, ಈ ಜಿಲ್ಲೆ ಮಳೆಯಾಶ್ರಿತ ಪ್ರದೇಶ ಹಾಗಾಗಿ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿತ್ತು. ಆದರೆ ಕೆ.ಸಿ.ವ್ಯಾಲಿ ನೀರಾವರಿ ಯೋಜನೆ (kc valley water project) ಜಾರಿಗೆ ಬಂದಿರುವ ಜೊತೆಗೆ ಕಳೆದ ವರ್ಷ ಸುರಿದ ಉತ್ತಮ ಮಳೆಯ ಪರಿಣಾಮ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಸುಧಾರಿಸಿಕೊಂಡು ಏರಿಕೆ ಕಂಡಿದ್ದು ಜಿಲ್ಲೆಯ ಕೆರೆಗಳು ಸಹ ಬಹುತೇಕ ಕಡೆಗಳಲ್ಲಿ ತುಂಬಿದೆ. ಇಷ್ಟಿದ್ರೂ ಸಹ ಕೋಲಾರ ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ಹಾಹಾಕಾರ ಮಾತ್ರ ತಪ್ಪಿಲ್ಲ.

 

ಜೀವಜಲವೇ ವಿಷವಾಗುತ್ತಿರೋದು ಏಕೆ?: ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೇ ಈ ಸಮಸ್ಯೆ ಹೆಚ್ಚು

ಒಂದೆಡೆ ಬೇಸಿಗೆಯ ತಾಪಮಾನ ಇನ್ನೊಂದೆಡೆ ಕುಡಿಯುವ ನೀರಿಗಾಗಿ ಜನರ ಪರದಾಟ ಮಾತ್ರ ತಪ್ಪಿಲ್ಲ.ಅಷ್ಟಕ್ಕೂ ಕುರಿಯುವ ನೀರಿನ ಸಲು ಪ್ರಮುಖ ಕಾರಣ ಏನು ಅಂದರೆ, ಇಷ್ಟು ದಿನ ಕುಡಿಯುವ ನೀರಿಗಾಗಿ ಅವಲಂಬಿಸಿದ್ದ ಶುದ್ದ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿರುವುದು. ಇಷ್ಟು ವರ್ಷ ಶುದ್ಧ ನೀರಿನ ಘಟಕವನ್ನು ನಿರ್ವಹಣೆ ಮಾಡುತ್ತಿದ್ದ ಖಾಸಗಿ ಏಜೆನ್ಸಿಯವರ ನಿರ್ವಹಣೆಯ ಅವಧಿ ಮುಗಿದಿರುವ ಪರಿಣಾಮ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಬಹುತೇಕ ನೀರಿನ ಘಟಕಗಳು ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗಿದೆ. ಜನರಿಗೆ ನಿತ್ಯ ಕುಡಿಯುವ ನೀರನ್ನು ಹೊಂದಾಣಿಕೆ ಮಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಿನ ಕೆಲಸವಾಗಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ಕಷ್ಟಕರವಾಗಿದೆ.ಜನರು ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿ ಬಂದಿದೆ.

ಇನ್ನು ಕೋಲಾರ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 1149 ಶುದ್ದ ನೀರಿನ ಘಟಕಗಳಿವೆ ಹಾಗೂ ನಗರ ಪ್ರದೇಶದಲ್ಲಿ ಅಂದರೆ ಮೂರು ನಗರಸಭೆ, ಮೂರು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯ್ತಿ ಸೇರಿ ಸುಮಾರು 125 ಶುದ್ದ ಕುಡಿಯುವ ನೀರಿನ ಘಟಕಗಳಿವೆ ಒಟ್ಟು ಜಿಲ್ಲೆಯಲ್ಲಿ 1274 ಘಟಕಗಳಿವೆ. ಈ ಪೈಕಿ ಗ್ರಾಮೀಣ ಭಾಗದಲ್ಲಿ 61 ಪಿಲ್ಟರ್ಗಳು ಹಾಗೂ ನಗರ ಪ್ರದೇಶಗಳಲ್ಲಿ 38 ನೀರಿನ ಘಟಕಗಳು ಕೆಟ್ಟು ನಿಂತಿವೆ.ಇನ್ನು ಕೆಲವು ಕಡೆಗಳಲ್ಲಿ ಅದನ್ನು ನಿರ್ವಹಣೆ ಮಾಡುವವರ್ಯಾರು ಅನ್ನೋ ಪ್ರಶ್ನೆ ಉದ್ಬವವಾಗಿದೆ ಇನ್ನು ಕೆಲವೆಡಗಳಲ್ಲಿ ನೀರು ಸರಿಯಾಗಿ ಸರಬರಾಜಾಗುತ್ತಿಲ್ಲ.

ಇಷ್ಟು ದಿನ ಖಾಸಗಿ ಏಜೆನ್ಸಿಯವರು ನಿರ್ವಹಣೆ ಮಾಡುತ್ತಿದ್ದರಿಂದ ಸಮಸ್ಯೆ ಇಲ್ಲದೇ ಉತ್ತಮ ನೀರು ಸಾರ್ವಜನಿಕರಿಗೆ ಸಿಗ್ತಿತ್ತು,ಇದೀಗ ನಿರ್ವಹಣೆ ಅವದಿ ಮುಗಿದಿರೋದ್ರಿಂದ ಕುಡಿಯುವ ನೀರು ಸರಬರಾಜು ಇಲಾಖೆ ಹಾಗೂ ಗ್ರಾಮ ಪಂಚಾಯ್ತಿಗಳಿಂದಲೇ ನಿರ್ವಹಣೆ ಮಾಡುವ ಕುರಿತು ತೀರ್ಮಾನ ಮಾಡಲಾಗಿದೆ.

ಬೆಂಗಳೂರಿನ 3 ಕಡೆ ಕಲುಷಿತ ನೀರಿನಿಂದ ಜನರು ಅಸ್ವಸ್ಥ: ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ

ಜೊತೆಗೆ ಕೆಟ್ಟು ನಿಂತಿರುವ ನೀರಿನ ಘಟಕಗಳ ದುರಸ್ಥಿ ಮಾಡಲು ಬೇರೆ ಸಂಸ್ಥೆಗಳಿಗೆ ವಹಿಸಿಕೊಡಲು ನಿರ್ಧರಿಸಲಾಗಿದೆ ಅನ್ನೋದು ಜಿಲ್ಲಾ ಪಂಚಾಯ್ತಿ ಸಿಇಓ ಯುಕೇಶ್‌ ಕುಮಾರ್‌ ಅವರ ಮಾತು. ಜೊತೆಗೆ ಇನ್ನು ಕೆಲವು ಕುಡಿಯುವ ನೀರಿನ ಘಟಕಗಳನ್ನು ಅಮೃತ ಸರೋವರ ಯೋಜನೆಯಡಿಯಲ್ಲಿ ಹೊಸದಾಗಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಹಾಕಲಾಗಿದ್ರೂ ಸಹ ಇನ್ನೂ ನಗರಸಭೆ ಹಾಗೂ ಸಂಬಂದಪಟ್ಟ ಪಂಚಾಯ್ತಿಗಳಿಗೆ ಹಸ್ತಾಂತರ ಮಾಡಿಲ್ಲ ಹಾಗಾಗಿ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಅನ್ನೋದು ಅಧಿಕಾರಿಗಳ ಮಾತು.

ಒಟ್ಟಾರೆ ಕೋಲಾರದ ಪರಿಸ್ಥಿತಿ ಊರಿನ ಕೆರೆಗಳು ಭತಿ೯ ಆಗಿದ್ರೂ ಸಹ ಕುಡಿಯೋ ನೀರಿಗೆ ಮಾತ್ರ ಬರ ಎನ್ನುವಂತಾಗಿದ್ದು.ಬೇಸಿಗೆ ಮುಗಿಯುವ ಹಂತ ಬಂದರೂ ಜಿಲ್ಲೆಯಲ್ಲಿ ಉದ್ಬವವಾಗಿರು ಶುದ್ದ ಕುಡಿಯುವ ನೀರಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ.ಜೊತೆಗೆ ಸರಿಯಾದ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿರುವ ಶುದ್ದ ನೀರಿನ ಘಟಕಗಳನ್ನು ಕೂಡಲೇ ರಿಪೇರಿ ಮಾಡಬೇಕು ಅನ್ನೋದು ಜನರ ಆಗ್ರಹ.

Latest Videos
Follow Us:
Download App:
  • android
  • ios