ಚುನಾವಣೆ ಪ್ರಚಾರಕ್ಕೆ ಕೂಲಿ ಕಾರ್ಮಿಕರು; ಕೃಷಿ ಕೆಲಸಕ್ಕೆ ಸಿಗುತ್ತಿಲ್ಲ ಜನರು!

ವಿಧಾನಸಭಾ ಚುನಾವಣೆ ಪ್ರಚಾರ ರಂಗೇರುತ್ತಿದ್ದು, ನಾನಾ ಪಕ್ಷಗಳ ಪ್ರಚಾರ ಕಾರ್ಯಗಳಲ್ಲಿ ಅಸಂಘಟಿತ ಕೂಲಿ ಕಾರ್ಮಿಕರನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ವಿವಿಧ ಕೆಲಸಕ್ಕೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಅಭ್ಯರ್ಥಿ ಮತಬೇಟೆಯಲ್ಲಿ ತೊಡಗಿದರೆ, ಕೆಲವು ಹಿಂಬಾಲಕರು ಹಣಬೇಟೆಯತ್ತ ಚಿತ್ತ ಹರಿಸಿದ್ದಾರೆ.

Laborers for Election Campaign; People are not getting agricultural work rav

ಹೊನ್ನಾವರ (ಏ.30) : ವಿಧಾನಸಭಾ ಚುನಾವಣೆ ಪ್ರಚಾರ ರಂಗೇರುತ್ತಿದ್ದು, ನಾನಾ ಪಕ್ಷಗಳ ಪ್ರಚಾರ ಕಾರ್ಯಗಳಲ್ಲಿ ಅಸಂಘಟಿತ ಕೂಲಿ ಕಾರ್ಮಿಕರನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ವಿವಿಧ ಕೆಲಸಕ್ಕೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಅಭ್ಯರ್ಥಿ ಮತಬೇಟೆಯಲ್ಲಿ ತೊಡಗಿದರೆ, ಕೆಲವು ಹಿಂಬಾಲಕರು ಹಣಬೇಟೆಯತ್ತ ಚಿತ್ತ ಹರಿಸಿದ್ದಾರೆ.

ವಿಧಾನಸಭಾ ಕ್ಷೇತ್ರ(Karnataka assembly election 2023) ವ್ಯಾಪ್ತಿಯ ಬಹುತೇಕ ಕಡೆ ಪ್ರಚಾರ ಆರಂಭವಾಗಿದ್ದು, ತಾಲೂಕಿನ ವಿವಿಧ ಗ್ರಾಪಂಗಳಿಗೆ ರಾಜಕೀಯ ನಾಯಕರು ಆಯಾ ಗ್ರಾಮದ ಪ್ರಮುಖ ಕಾರ್ಯಕರ್ತರಿಗೆ ಹಣ ಕೊಟ್ಟು, ಜನ ಕರೆತರುವ ಜವಾಬ್ದಾರಿ ಕೊಡುತ್ತಿದ್ದಾರೆ. ಅವರು ರಾತ್ರೊರಾತ್ರಿ ಬಂದು ಜನರನ್ನು ಸಜ್ಜುಗೊಳಿಸುತ್ತಾರೆ. ಬೆಳಗ್ಗೆ ತಮ್ಮ ಪಾಡಿಗೆ ತಾವು ಮನೆಗಳಲ್ಲಿ ಕೆಲಸ ಮುಗಿಸಿ ಕಾರ್ಯಕರ್ತರು ಹೇಳಿರುವ ಜಾಗಕ್ಕೆ ತಲುಪುತ್ತಾರೆ. ಅಭ್ಯರ್ಥಿಗಳು ಬಲ ಪ್ರದರ್ಶನಕ್ಕಾಗಿಯೇ ಹೆಚ್ಚು ಹೆಚ್ಚು ಜನರನ್ನು ತಮ್ಮ ಪರವಾಗಿ ನಡೆಯುವ ಪ್ರಚಾರ, ರಾರ‍ಯಲಿ, ರೋಡ್‌ ಶೋ, ಬೃಹತ್‌ ಸಮಾವೇಶಗಳಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ಕೆಲವು ಅಭ್ಯರ್ಥಿಗಳ ಪ್ರಮುಖ ಕಾರ್ಯಕರ್ತರು ಎಂದಿನಂತೆ ದಿನಗೂಲಿ ಆಧಾರದ ಮೇಲೆ ನಿತ್ಯ ಪ್ರಚಾರಕ್ಕಾಗಿ ಅಸಂಘಟಿತ ವಲಯದ ಕಾರ್ಮಿಕರತ್ತ ಚಿತ್ತ ಹರಿಸಿದ್ದಾರೆ. ಕ್ಯಾಬ್‌ಗಳ ಮೂಲಕ ಜನರನ್ನು ಕರೆದೊಯ್ಯತ್ತಿದ್ದಾರೆ.

ಮನ್‌ ಕೀ ಬಾತ್; ದೇಶಕ್ಕೆ ಪ್ರೇರಣೆ ನೀಡಿದ ಕಾರ್ಯಕ್ರಮ: ಸಿಎಂ

ಹೆಚ್ಚು ದೈಹಿಕ ಶ್ರಮವಿಲ್ಲದೆ ಪ್ರಚಾರದಲ್ಲಿ, ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಸ್ವಲ್ಪ ಹಣ ಸಂಪಾದಿಸಬಹುದು ಎಂಬ ಉದ್ದೇಶದಿಂದ ಕೆಲವು ಗೃಹಿಣಿಯರು ಕೂಡ ಪ್ರಚಾರ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ.

ವಿವಿಧ ಭಕ್ಷ್ಯ-ಭೋಜನದ ಜತೆಗೆ .500 ನಿಂದ .1 ಸಾವಿರ ವರೆಗೆ ಅನಾಯಸವಾಗಿ ದಿನಗೂಲಿ ಸಿಗುತ್ತದೆ ಎಂಬುದು ಕೆಲವರ ಆಲೋಚನೆಯಾಗಿದೆ. ಜತೆಗೆ ಶ್ರಮವಿಲ್ಲದ ಕೆಲಸ ಎಂಬ ಕಾರಣದಿಂದ ನಾನಾ ವರ್ಗದವರು ಹುಮ್ಮಸ್ಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಕೇವಲ ಕರಪತ್ರ ಹಂಚುವುದು, ಅಭ್ಯರ್ಥಿ ಪರವಾಗಿ ಜೈಕಾರ ಹಾಕುವುದು ಇವರಿಗೆ ವಹಿಸುವ ಕೆಲಸವಾಗಿರುತ್ತದೆ. ಮೈ ಮುರಿದು ದುಡಿಯಬೇಕಿಲ್ಲ, ದಣಿದು ಬೆವರಿಳಿಸಬೇಕಿಲ್ಲ. ಜನಪ್ರತಿನಿಧಿಗಳಿಗೆ ಜೈ ಎನ್ನುತ್ತಾ ಅವರ ಬೆನ್ನ ಹಿಂದೆ ಸಾಗಿದರೆ ಸಾಕು.

ದಿನಕ್ಕೊಂದು ಪಕ್ಷ:

ಚುನಾವಣೆ ಎಂದರೆ ನಮ್ಮ ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಎಂದು ಅರಿಯದ ಕೆಲವು ಮಂದಿ ಇದೊಂದು ಹಣ ಗಳಿಸುವ ಹಬ್ಬ ಎಂದುಕೊಂಡಿದ್ದಾರೆ. ಸಿಕ್ಕಿದಷ್ಟುಬಾಚುವ ಎಂದುಕೊಂಡು ಬೆಳಗ್ಗೆ ‘ಕಮಲ’ ಹಿಡಿದು, ಮಧ್ಯಾಹ್ನದ ಬಿಸಿಲಲ್ಲಿ ’ತೆನೆ’ ಹೊತ್ತು, ರಾತ್ರಿ ಆಯ್ತು ಅಂದರೆ ’ಕೈ’ ಮುಗಿಯುವುದು ರೂಢಿಸಿಕೊಂಡುಬಿಟ್ಟಿದ್ದಾರೆ.

ಭರ್ಜರಿ ಕಮಾಯಿ:

ಚುನಾವಣೆ ಪ್ರಚಾರ ಅವಧಿ ಮುಗಿಯೊದರೊಳಗೆ ಕೆಲವರು ಆರೇಳು ಸಾವಿರ ದುಡಿದರೆ, ದೊಡ್ಡ ಮಟ್ಟದ ಕಾರ್ಯಕರ್ತರು .20- 25 ಸಾವಿರ ವರೆಗೆ ದುಡಿಯುತ್ತಿದ್ದಾರೆ. ಇವರಿಗಿಂತ ದೊಡ್ಡ ನಾಯಕರಿಗಂತೂ ಚುನಾವಣೆ ಅಂದರೆ ಹಬ್ಬ.

ಕುರುಡು ಕಾಂಚಾಣದ ಮಹಿಮೆ:

ಟಿಕೆಟ್‌ ಆಕಾಂಕ್ಷಿಗಳು ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಸಾಕಷ್ಟುಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಹಾಗಾಗಿ ಇಂತಹ ಸಮಾವೇಶಗಳಲ್ಲಿ ಜನರನ್ನು ಸೇರಿಸುವುದು ಮುಖಂಡರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ನಾನಾ ರೀತಿಯ ಆಮಿಷಗಳನ್ನೊಡ್ಡಿ ಅಸಂಘಟಿತ ವರ್ಗದ ಕೂಲಿ ಕಾರ್ಮಿಕರನ್ನು ಸೆಳೆಯುತ್ತಿದ್ದಾರೆ.

ಒಟ್ಟಿನಲ್ಲಿ ಚುನಾವಣೆ ಅವಧಿ ಎಂದರೆ ಅಭ್ಯರ್ಥಿಗೆ ಮತಬೇಟೆಯೊಂದಿಗೆ ಸೋಲು ಗೆಲುವಿನ ಲೆಕ್ಕಾಚಾರವಾದರೆ, ಹಣ ಗಳಿಸುವ ಆಲೋಚನೆ ಇರುವ ಜನರಿಗೆ ಇದು ಹಬ್ಬವೇ ಸರಿ.’

ಜೋಯಿಡಾ: ಬಿಸಿಲಿನಿಂದ ಬಳಲಿದ ಕೃಷಿಕರು ತೋಟಗಳು

ವಿಧಾನಸಭಾ ಚುನಾವಣೆ(Karnataka election)ಯ ಕಾವು ಏರುತ್ತಿದೆ. ಏಪ್ರಿಲ್‌ ಹಾಗೂ ಮೇ ನಲ್ಲಿ ಬಿರುಸಿನಿಂದ ನಡೆಯಬೇಕಾದ ತೋಟಗಾರಿಕಾ ಕೃಷಿ ಚಟುವಟಿಕೆಗೆ ಜೋಯಿಡಾ ತಾಲೂಕಿನಲ್ಲಿಯೂ ಕಾರ್ಮಿಕರ ಕೊರತೆ ಎದುರಾಗಿದೆ. ಇದರಿಂದ ಬಿರು ಬಿಸಿಲಿನಿಂದ ಕೃಷಿಕರು ತೋಟಗಳು ಬಳಲಿದಂತಾಗುತ್ತಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ತಾಪಮಾನ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ತೋಟಗಳಿಗೆ ಸ್ವಲ್ಪ ನೀರು ಬಿಟ್ಟರೂ ಎಳೆಯ ಅಡಕೆ ಮಿಡಿಗಳು ಉದುರುತ್ತಿವೆ. ಇದರಿಂದ ಅಡಕೆ ತೋಟದ ಮಾಲೀಕರು ಕಂಗಾಲಾಗಿದ್ದಾರೆ. ಆದರೆ ಹೆಚ್ಚಿನ ನೀರು ಬಿಡಬೇಕಾಗಿದೆ. ಇಂಥ ಸ್ಥಿತಿಯಲ್ಲಿ ಕಾರ್ಮಿಕರ ಕೊರತೆ ಬೆಳೆಗಾರರನ್ನು ಕಾಡುತ್ತಿದೆ.

ಹುಮನಾಬಾದ್‌: ಮೋದಿ ಕಾರ್ಯಕ್ರಮಕ್ಕೆ ಭೂಮಿ ನೀಡಿದ ವ್ಯಕ್ತಿಗೆ ಕಾಂಗ್ರೆಸ್‌ ಧಮ್ಕಿ

ಹೊರ ಊರಿನ ಕೃಷಿ ಕಾರ್ಮಿಕರು ಚುನಾವಣೆ ನಿಮಿತ್ತ ತಮ್ಮ ತಮ್ಮ ಜಿಲ್ಲೆಗಳಿಗೆ ಹೋಗುತ್ತಿದ್ದಾರೆ. ಹಾಗಾಗಿ ತೋಟದ ಹಲವು ಕೆಲಸಗಳು ಬಾಕಿ ಉಳಿಯುತ್ತಿವೆ. ಗೊಬ್ಬರ ಹಾಕುವುದು, ಬಾಳೆ ನೆಡುವುದು, ಒಣ ಎಲೆ ದರಕು ಹಾಕುವುದು ಸೇರಿದಂತೆ ಮಳೆಗಾಲದ ತಯಾರಿಗಳು, ಹಳ್ಳಿ ರೈತರ ಮನೆಗಳಿಗೆ ಕಟ್ಟಿಗೆ ಸಂಗ್ರಹ ಸೇರಿದಂತೆ ಅನೇಕ ಕೆಲಸಗಳನ್ನು ಮುಂದಕ್ಕೆ ಹಾಕುವಂತಾಗಿದೆ ಎನ್ನುತ್ತಾರೆ ರೈತ ಶ್ರೀನಿವಾಸ ಭಟ್‌.

Latest Videos
Follow Us:
Download App:
  • android
  • ios