Asianet Suvarna News Asianet Suvarna News

ಚಿಕ್ಕಮಗಳೂರು: ಮುಳ್ಳುಹಂದಿ ಶಿಕಾರಿಗೆ ಹೋಗಿದ್ದ ಕಾರ್ಮಿಕರು; ಸುರಂಗದೊಳಗೆ ಸಿಲುಕಿ ಸಾವು!

ತೋಟದ ಕೆಲಸಕ್ಕೆ ಬಂದಿದ್ದ ಹೊರರಾಜ್ಯದ ಕಾರ್ಮಿಕರು ಅಕ್ರಮವಾಗಿ ಶಿಕಾರಿಗೆ ತೆರಳಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿದೆ.

Laborers death who went porcupine hunting in baluru at chikkamagaluru rav
Author
First Published Feb 27, 2023, 10:22 PM IST

ಚಿಕ್ಕಮಗಳೂರು (ಫೆ.27) :  ತೋಟದ ಕೆಲಸಕ್ಕೆ ಬಂದಿದ್ದ ಹೊರರಾಜ್ಯದ ಕಾರ್ಮಿಕರು ಅಕ್ರಮವಾಗಿ ಶಿಕಾರಿಗೆ ತೆರಳಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿದೆ.

 ಇಲ್ಲಿನ ಮಾಳೀಗನಾಡು ಗ್ರಾಮ(Maliganadu village)ದಲ್ಲಿ ಮುಳ್ಳುಹಂದಿ(Porcupine) ಶಿಕಾರಿಗೆಂದು ಸುರಂಗಕ್ಕೆ ನುಗ್ಗಿದ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.‌ ಮೂಡಿಗೆರೆ ತಾಲ್ಲೂಕಿನ ಬಾಳೂರು ಠಾಣಾ(Baluru police station) ವ್ಯಾಪ್ತಿಯ  ಮಾಳೀಗನಾಡು ಗ್ರಾಮದಲ್ಲಿ

ಮಾಳೀಗನಾಡು ಸಮೀಪದ ಆನೆಗುಂಡಿ ಎಸ್ಟೇಟ್(Anegundi Estate) ನ ಸಮೀಪವಿರುವ ಬೆಟ್ಟದ ಸುರಂಗದಲ್ಲಿ ಮುಳ್ಳುಹಂದಿಯನ್ನು ಹಿಡಿಯುಲು ಯತ್ನ ನಡೆಸಿದ್ದಾರೆ. ಆಗ ಮಣ್ಣುಕುಸಿತವಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ತಮಿಳುನಾಡು(Tamilnadu) ಮೂಲದ ಕಾರ್ಮಿಕರೆಂದು  ತಿಳಿದುಬಂದಿದೆ. ಎಸ್ಟೇಟ್ ನಲ್ಲಿ ಕಾಳುಮೆಣಸು ಕೊಯ್ಯಲು ಬಂದಿದ್ದ ತಮಿಳುನಾಡು ಮೂಲದ ನಾಲ್ವರು ಕಾರ್ಮಿಕರು. ಬೆಟ್ಟದ ಸಮೀಪದಲ್ಲಿ ಮುಳ್ಳುಹಂದಿ ಶಿಕಾರಿಗೆ ತೆರಳಿದ್ದರು ಎನ್ನಲಾಗಿದೆ. 

ತಡರಾತ್ರಿ ಗುಡಿಸಲಿಗೆ ಬೆಂಕಿ; ಮಲಗಿದ್ದ ವೃದ್ಧ ದಂಪತಿ ಸಜೀವ ದಹನ!

ಮುಳ್ಳುಹಂದಿ ಗುಹೆಗೆ ಹೊಗೆಹಾಕಿ ನಂತರ ಒಬ್ಬೊಬ್ಬರಾಗಿ ಸುರಂಗದ ಒಳಗೆ ಹೋಗಿದ್ದಾರೆ. ಒಬ್ಬರು ಬರಲಿಲ್ಲ ಎಂದು ಮತ್ತೊಬ್ಬರು ಹೋಗಿದ್ದಾರೆ. ಕೊನೆಗೆ ಇಬ್ಬರು ವಾಪಾಸ್ಸು ಬಂದಿದ್ದು, ಇನ್ನಿಬ್ಬರು ಸುರಂಗದೊಳಗೇ ಸಿಲುಕಿದ್ದಾರೆ. ಅಲ್ಲಿಯೇ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸ್, ಅರಣ್ಯ ಮತ್ತು ಅಗ್ನಿಶಾಮಕ ತಂಡ ಭೇಟಿ ನೀಡಿ ಗುಹೆಯಿಂದ ಶವಗಳನ್ನು ಹೊರತೆಗೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು.

Follow Us:
Download App:
  • android
  • ios